Coconut Oil Therapy : ಡ್ರೈ ಹೇರ್ ಪರಿಹಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್

0
  • ಅಂಚನ್ ಗೀತಾ

Coconut Oil Therapy : ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಅತೀ ಹೆಚ್ಚಾಗಿ ಕಾಡುವ ಸಮಸ್ಯೆ ಅಂದ್ರೆ ಕೂದಲು ಡ್ರೈ ಆಗಿರೋದು. ಈಗಿನ ಟ್ರಾಫಿಕ್ ಉಳ್ಳ ರಸ್ತೆ, ಧೂಳು ತುಂಬಿರೋದ್ರಿಂದ ಕೂದಲಿನ ಅಂದವಂತೂ ಹದಗೆಡುತ್ತೆ. ಒಂದೆಡೆ ಈ ಡ್ರೈ ಹೇರ್ ಸೆಟ್ ಆಗಿ ಇರೋದು ಇಲ್ಲ. ಮತ್ತೊಂದು ಕಡೆ ಡ್ರೈ ಹೇರ್ ಸಮಸ್ಯೆಯಿಂದ ಮುಖದ ಅಂದ ಕೂಡ ಹಾಳಾಗುತ್ತೆ.

ಹಾಗಾದ್ರೆ ಡ್ರೈ ಹೇರ್ ಸಮಸ್ಯೆಯನ್ನು ಮನೆ ಮದ್ದಿನಲ್ಲಿ ಕಡಿಮೆ ಮಾಡೋದು ಹೇಗೆ ? ಕೂದಲು ಡ್ರೈ ಆಗಲು ಪ್ರಮುಖ ಕಾರಣಗಳೇನು. ನೋಡೊಣ ಬನ್ನಿ.ಬಿಸಿಲಿನ ಝಲಕ್ಕೆ ಮೈಒಡ್ಡಿದ್ದಾಗ ತಲೆ ಕೂದಲು ಅಂದಗೆಡುತ್ತೆ. ನಾವೂ ಬಳಸೋ ನೀರು ಸ್ವಚ್ಚವಾಗಿಲ್ಲಾಂದ್ರು ಕೊದಲು ಒಣಗುತ್ತೆ.

ಪ್ರತಿದಿನ ಶ್ಯಾಂಪು ಬಳಸಿ ಹೇರ್ ವಾಷ್ ಮಾಡೊದು. ಅತೀ ಹೆಚ್ಚಿನ ಕೆಮಿಕಲ್ ಬಳಕೆಯಿಂದ ಕೂದಲು ಒಣಗುತ್ತೆ. ಹೀಗಾಗಿ ಸುಂದರ ವಾದ ತಲೆ ಕೂದಲು ಹದಗೆಡುತ್ತೆ. ಹಾಗದ್ರೆ ಮನೆಯಲ್ಲಿಯೆ ಒಣ ಕೂದಲನ್ನ ಸರಿಪಡಿಸಬಹುದು.? ಖಂಡಿತ ಸರಿಪಡಿಸಬಹುದು. ಅದು ಹೇಗೆ ಅಂತೀರಾ ಈ ಟಿಪ್ಸ್ ಫಾಲೋ ಮಾಡಿ.

ಉಗುರು ಬೆಚ್ಚಗಿನ ಎಣ್ಣೆಯನ್ನು ತಲೆ ಕೂದಲಿಗೆ ಹಚ್ಚಿ (Coconut Oil Therapy)

ತೆಂಗಿನ ಎಣ್ಣೆ, ಬಾದಾಮಿ ಎಣ್ಣೆ, ಹರಳೆಣ್ಣೆ. ಈ ಎಲ್ಲಾ ಎಣ್ಣೆಯಲ್ಲಿ ವಿಟಮಿನ್ ಈ ಅಂಶ ಹೇರಳವಾಗಿದ್ದು ಇದು ಡ್ಯಾಮೇಜ್ ಆಗಿರೋ ಕೂದಲ ಬುಡವನ್ನೆ ಸರಿಪಡಿಸುತ್ತದೆ. ಈ ಎಣ್ಣೆಯನ್ನು ತಲೆಗೆ ಹಚ್ಚಿ ಬೆಚ್ವಗಿನ ಟವಲ್ ನಲ್ಲಿ ಕೂದಲನ್ನು ಕವರ್ ಮಾಡಿ ಬಳಿಕ 45 ನಿಮಿಷಗಳ ಕಾಲ ಹಾಗೆ ಬಿಡಿ ಅಥವಾ ರಾತ್ರಿ ಪೂರ್ತಿ ಬಿಟ್ಟು ಶ್ಯಾಂಪೋನಲ್ಲಿ ಹೇರ್ ವಾಷ್ ಮಾಡಿ ಇದು ಡ್ರೈ ಹೇರ್ ನ ರಿಪೇರ್ ಮಾಡುತ್ತೆ. ನಿಮ್ಮ ಕೂದಲಿಗೆ ಸೂಕ್ತವಾಗಿರೋ ಪ್ರಾಡಕ್ಟ್ಸ್ ಗಳನ್ನು ಬಳಸಿ.

ಬಿಯರ್ ಬಳಕೆ
ಬಿಯರ್ ನಲ್ಲಿ ಪ್ರೊಟಿನ್ ಹೇರಳವಾಗಿದೆ. ಹೀಗಾಗಿ ಬಿಯರ್ ನ ಹನಿಗಳನ್ನು ಕೂದಲಿಗೆ ಸ್ಪ್ರೇ ಮಾಡೋದ್ರಿಂದ ಕಂಡೀಷನರ್ ಬಳಕೆ ಮಾಡೋದೆ ಬೇಕಿಲ್ಲ. ಬಿಯರ್ ಕಂಡೀಷನರ್ ತರ ಕಾರ್ಯನಿರ್ವಹಿಸುತ್ತೆ.

ತೆಂಗಿನ ಎಣ್ಣೆ ಮಾಸ್ಕ್
ತೆಂಗಿನ ಎಣ್ಣೆಯಲ್ಲಿ ಕೂದಲನ್ನ ಮಾಯ್ಶಿರೈಸ್ ಮಾಡೋ ಗುಣವಿದ್ದು ತೆಂಗಿನ ಎಣ್ಣೆ ಜೊತೆಗೆ ಕರಿಬೇವಿನ ಎಲೆಯನ್ನು ಹಾಕಿ ಕೂದಿಸಿ ತಣ್ಣಗಾದ ಬಳಿಕ ಕೂದಲಿಗೆ ಅಪ್ಲೈ ಮಾಡಿ.

ಮೊಟ್ಟೆ
ಮೊಟ್ಟೆಯಲ್ಲಿರೋ ಪ್ರೊಟಿನ್ ಅನ್ನು ಕೂದಲ ಬುಡಕ್ಕೆ ಹಾಕಿ 5ನಿಮಿಷ ಮಸಾಜ್ ಮಾಡಿ ಒಳ್ಳೆ ಶಾಂಪೋನಲ್ಲಿ ಮಸಜಾ ಮಾಡಿ. ಅಥವಾ ಮೂರು ಮೊಟ್ಟೆಯನ್ನ ಒಂದು ಬೌಲ್ ಗೆ ಹಾಕಿ 2ಟೀ ಸ್ಪೂನ್ ಆಲಿವ್ ಆಯಿಲ್ ಒಂದು ಟೀ ಸ್ಪೂನ್ ಜೇನು ತುಪ್ಪ ಬಳಸಿ ಮಿಕ್ಸ್ ಮಾಡಿ ತದನಂತರ ಕೂದಲನ್ನ ಕವರ್ ಮಾಡಿ 30ನಿಮಿದ ಬಳಿಕ ತಂಪು ನೀರಿನಲ್ಲಿ ಶಾಂಪೋ ಬಳಸಿ ತೊಳೆಯಿರಿ.

ಮೊಸರು ಮಾಸ್ಕ್
ಅರ್ಧ ಕಪ್ ಮೊಸರಿಗೆ 2ಸ್ಪೂನ್ ಆಲಿವ್ ಆಯಿಲ್ 6 ಡ್ರಾಪ್ ಅಸೆ್ಶಿಯಲ್ ಆಯಿಲ್ ಬಳಸಿ ಮಿಕ್ಸ್ ಮಾಡಿ shower cap ಬಳಸಿ 15 ನಿಮಿಷದ ಬಳಿಕ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.

ಬಟರ್ ಪ್ರೂಟ್ ಮಾಸ್ಕ್
ಬಟರ್ ಪ್ರೂಟ್ ನಲ್ಲಿ ವಿಟಮಿನ್ ಈ ಮತ್ತು ಎ ಹೇರಳವಾಗಿದೆ. ಹೀಗಾಗಿ ಕೂದಲಿಗೆ ಇದ್ರ ಲಾಭ ಪಡೆಯಬಹುದು. ಬಟರ್ ಪ್ರೂಟ್ ನ Peele ಮಾಡಿ ಒಂದು ಮೊಟ್ಟೆ ಜೊತೆ ಮಿಕ್ಸ್ ಮಾಡಿ ತಲೆಗೆ ಹಚ್ಚಿ 20 ನಿಮಿಷದ ಬಳಿಕ ಕೂದಲನ್ನ ವಾಷ್ ಮಾಡಿ. ಈ ರೀತಿ ಮಾಡೊದ್ರಿಂದ ಡ್ರೈ ಹೇರ್ smooth ಆಗಿ ಕೂದಲಿನ ಅಂದ ಇಮ್ಮಡಿಗೊಳ್ಳುತ್ತದೆ.

(dry hair homemade medicine beer oil curd Coconut Oil Therapy)

Leave A Reply

Your email address will not be published.