ಮಂಗಳವಾರ, ಏಪ್ರಿಲ್ 29, 2025
HomeSpecial Storyನಿಂಬೆ ಹಣ್ಣಿನಿಂದ ರಕ್ತ ಜಿನುಗುವುದು ಹೇಗೆ ಗೊತ್ತಾ ? ದೀಪ ತಾನಾಗಿಯೇ ಹೊತ್ತಿಕೊಳ್ಳುತ್ತದೆ ಹೇಗೆ ಗೊತ್ತಾ...

ನಿಂಬೆ ಹಣ್ಣಿನಿಂದ ರಕ್ತ ಜಿನುಗುವುದು ಹೇಗೆ ಗೊತ್ತಾ ? ದೀಪ ತಾನಾಗಿಯೇ ಹೊತ್ತಿಕೊಳ್ಳುತ್ತದೆ ಹೇಗೆ ಗೊತ್ತಾ ? ಭಾಗ-28

- Advertisement -

ಉದಿನೂರಿನ ಮಾಂತ್ರಿಕ ಕೃಷ್ಣಪ್ಪ ನನ್ನ ಮುಂದೆ ಅನೇಕ ಟ್ರಕ್ಕುಗಳನ್ನು ಮಾಡೋಕ್ಕೆ ಸಿದ್ಧನಿದ್ದ… ಆದ್ರೆ ನಾನು ಅದ್ಯಾವಾಗ ಆತನ ಮೊದಲ ಟ್ರಿಕ್ಕನ್ನೇ ವಿಜ್ಞಾನ ಅಂದೆನೋ ಆಗಲೇ ಆತ ನಮ್ಮನ್ನು ಹೊರಗೆ ಕಳಿಸಿದ್ದ… ಅಂದಹಾಗೆ ಓದುಗರೇ .. ಈ ಕಪಟ ಮಾಂತ್ರಿಕರು ಅಸಲಿ ಅವತಾರ ಮತ್ತು ಅವರು ಮೂಢ ಭಕ್ತರನ್ನು ನಂಬಿಸೋಕೆ ಉಪಯೋಗಿಸದೆ ಈ ಮೋಡಿ ವಿದ್ಯೆ.. ಅಂದಾಗೆ ಮೋಡಿ ವಿದ್ಯೆಗಳಲ್ಲಿ ನಾನಾ ರೀತಿಯ ಪ್ರಕಾರಗಳಿವೆ.. ಅವುಗಳಲ್ಲಿ ನಾಲ್ಕು ಪ್ರಕಾರಗಳು ಪ್ರಮುಖ..

  1. ಕೈ ಚಮತ್ಕಾರಗಳಿಂದ ಮಾಡುವ ಮೋಡಿ
  2. ದ್ರಾವಕ ಪದಾರ್ಥಗಳ ಮಿಶ್ರಣದಿಂದ ಮಾಡುವ ಮೋಡಿ
  3. ವನಸ್ಪತಿ ಸಹಾಯದಿಂದ ಮಾಡುವ ಮೂಡಿ
  4. ಮಂತ್ರ- ತಂತ್ರ, ಕಣ್ಣು ಕಟ್ಟುಗಳಿಂದ ಮಾಡುವ ಮೋಡಿ
    ಈ ರೀತಿ ಅನೇಕ ಪ್ರಕಾರಗಳಲ್ಲಿ ಮೋಡಿ ಮಾಡಿ ಜನರಿಗೆ ಮಂಕುಬೂದಿ ಎರಚುತ್ತಾರೆ.. ಓದುಗರೇ ಇನ್ನು ಮುಂದೆ ಕೆಲ ಉದಾಹರಣೆಗಳನ್ನು ನಾನು ನಿಮಗೆ ಕೊಡ್ತೀನಿ.. ಈ ನಿಗೂಢ ಮಾಂತ್ರಿಕರು ಲೇಖನದ ಅಂತ್ಯಗೊಳಿಸುವ ಸಮಯ ಬಂದಿದೆ.. ಬರೆಯುತ್ತಾ ಹೋದರೆ ಅದೇ ಒಂದು ದೊಡ್ಡ ಗ್ರಂಥವಾದೀತು… ನಾನು ಬರೆದ ಲೇಖನಗಳನ್ನು ಓದಿದ ಮೇಲಾದರೂ ನಿಮಗಿರುವ ಮಾಂತ್ರಿಕ ಶಕ್ತಿಯ ಮೇಲಿನ ನಂಬಿಕೆಯನ್ನು ದೂರ ಮಾಡಿಕೊಳ್ಳಿ… ಕಪಟ ಮಾಂತ್ರಿಕರ ಬಳಿ ಕಾಯಿಲೆ ಕಸಾಲೆ ಅಂತ ಹೋಗದೆ ನುರಿತ ವೈದ್ಯರನ್ನು ಸಂಪರ್ಕಿಸಿ.. ಇನ್ನು ನಿಮ್ಮ ವೈಯಕ್ತಿಕ ಸಮಸ್ಯೆಗಳಿಗೆ ನಿಮ್ಮ ಮನಸ್ಸಿನಲ್ಲಿ ಉತ್ತರವಿರುತ್ತದೆ ಅದನ್ನು ಹುಡುಕುವ ಪ್ರಯತ್ನ ಮಾಡಿ ಬೂಟಾಟಿಕೆ ನಂಬಿಕೊಂಡು ಹೋದರೆ ಹಣ ಮತ್ತು ಸಮಯ ಎರಡೂ ವೇಸ್ಟ್..

ದೀಪ ತಾನಾಗಿಯೇ ಹೊತ್ತಿಕೊಳ್ಳುತ್ತದೆ ಹೇಗೆ ಗೊತ್ತಾ?
ಮದ್ದು ಮತ್ತು ಪಾಸ್ಫರಸ್ ಸಹಾಯದಿಂದ ಈ ಮ್ಯಾಜಿಕ್ ಅನ್ನು ಮಾಡ್ತಾರೆ… ಉರಿಯುತ್ತಿರುವ ದೀಪವನ್ನು ಮದ್ದಿನ ಬಳಿ ಹಿಡಿದಾಗ ಅದು ನಂದಿ ಹೋಗುತ್ತದೆ… ಮತ್ತೆ ಅದೇ ದೀಪವನ್ನು ಫಾಸ್ಫರಸ್ ಬಳಿ ಹಿಡಿದರೆ ದೀಪ ಹೊತ್ತಿಕೊಳ್ಳುತ್ತದೆ ಅಷ್ಟೇ..

ಕಬ್ಬಿಣದ ಸರಪಳಿ ಹೇಗೆ ತುಂಡರಿಸುತ್ತಾರೆ ಗೊತ್ತಾ ?
ಆಲದ ಹಾಲು, ಎಕ್ಕದ ಹಾಲು ಹಾಗೂ ಕಳ್ಳಿಯ ಹಾಲನ್ನು ಅಪಾರ ಪ್ರಮಾಣದಲ್ಲಿ ಶೇಖರಿಸಿ ಮೂರು ಹಾಲನ್ನು ಮಿಶ್ರಣ ಮಾಡಿ ಕಬ್ಬಿಣದ ಸರಪಳಿಯನ್ನು ನೆನೆ ಹಾಕಬೇಕು.. ಪ್ರತಿದಿನವೂ ಹೊಸ ಹಾಲನ್ನು ಹಾಕುತ್ತಿರಬೇಕು.. ಹೀಗೆ ಏಳು ದಿನ ಏಳು ಸಲ ಹಾಳು ಬಿಟ್ಟು ಕಬ್ಬಿಣದ ಸರಪಳಿಯನ್ನು ನೆನೆಸಿರಬೇಕು.. ಪ್ರದರ್ಶನದ ದಿನ ಅದನ್ನು ಹೊರತೆಗೆದು ಹಸುವಿನ ಹಾಲಿನಲ್ಲಿ ತೊಳೆದು ದೇವಿಗೆ ಪೂಜೆ ಸಲ್ಲಿಸಿದಂತೆ ನಟಿಸಿ, ನೋಡುಗರಿಗೆ ಮನದಟ್ಟು ಮಾಡಿಕೊಟ್ಟು ಕಬ್ಬಿಣದ ಸರಪಳಿಯನ್ನು ಬಲವಾಗಿ ಜಗ್ಗಿದರೆ ಆ ಸರಪಳಿ ತುಂಡಾಗುತ್ತದೆ.. ಕಂಬಿಯನ್ನು ಬಗ್ಗಿಸುವ ಮ್ಯಾಜಿಕ್ ಕೂಡ ಇದೇ ರೀತಿ ಮಾಡಲಾಗುತ್ತದೆ..

ನಿಂಬೆ ಹಣ್ಣಿನಿಂದ ರಕ್ತ ಜಿನುಗುವುದು ಹೇಗೆ ಗೊತ್ತಾ?
ಹತ್ತಿಯ ಗಿಡದಲ್ಲಿ ಚೆನ್ನಾಗಿ ಅರಳಿರುವ ಹೂವುಗಳನ್ನು ತಂದು ಒಂದು ಶುಭ್ರವಾದ ಸ್ಟೀಲ್ ಚಾಕುವಿಗೆ ಆ ಹೂವಿನ ರಸವನ್ನು ಚೆನ್ನಾಗಿ ತಿಕ್ಕಬೇಕು… ನಂತರ ಚಾಕುವನ್ನು ಒಣಗಿಸಿಡಬೇಕು.. ಇದಾದ ಮೇಲೆ ಮೂಡ ಭಕ್ತನ ಮುಂದೆ ಈ ಮಾಂತ್ರಿಕರು ತನ್ನನ್ನು ತಾನು ದೈವಾಂಶ ಸಂಭೂತ ಅಂತ ಹೇಳಿ ಹಣ್ಣಾದ ನಿಂಬೆಹಣ್ಣನ್ನು ಮಂತ್ರ ಹೇಳುವಂತೆ ನಟಿಸಿ ಸಿದ್ಧ ಮಾಡಿಟ್ಟುಕೊಂಡ ಚಾಕು ತೆಗೆದುಕೊಂಡು ಕುಯ್ದರೆ ಕೆಂಪು ರಕ್ತದಂತೆ ರಸ ತೊಟ್ಟಿಕ್ಕುತ್ತದೆ…ಓದುಗರೇ ಇಂತಹ ನೂರಾರು ವಿದ್ಯೆಗಳಿವೆ… ಮುಂದಿನ ಸಂಚಿಕೆಯಲ್ಲಿ ಕೆಲವಷ್ಟು ವಿದ್ಯೆಗಳ ಬಗ್ಗೆ ಬರೆಯುತ್ತೇನೆ…
(ಮುಂದುವರಿಯುತ್ತದೆ….)

  • ಕೆ.ಆರ್.ಬಾಬು

ಇದನ್ನೂ ಓದಿ : ಗರ್ಭಿಣಿ ಶವದ ಸಮಾಧಿ ಮೇಲೆ ಕುಳಿತು ತಪಸ್ಸು…ಮದುವೆಯಾಗಿದ್ದರೂ ಕನ್ಯೆಯಾಗಿಯೇ ಉಳಿದಿರುವ ಹೆಣ್ಣಿನ ಬಲಿ..! 

ಇದನ್ನೂ ಓದಿ : ‘ನಿಗೂಢ ಮಾಂತ್ರಿಕರು’ : ಮಾಯನಗರಿ..! ಯಕ್ಷಿಣಿ ವಿದ್ಯೆಗಳ ನೆಲ..! ಅದುವೇ ಕೊಳ್ಳೆಗಾಲ..!! : ಭಾಗ-01

( Do you know how lemon juice bleeds? how the lamp ignites itself ?)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular