Odisha Puri Jagannatha Hanuman Temple: ಹನುಮಂತ , ರಾಮಭಂಟ, ಭಕ್ತರ ಪಾಲಿನ ಕಷ್ಟ ಗಳನ್ನು ಕರಗಿಸುವ ಕಾಮದೇನು ಅಂತಾನೆ ಕಲಿಯುಗದಲ್ಲಿ ಪ್ರಚಲಿತ. ಆತನಿದ್ರೆ ಭೂತ ಪ್ರೇತ, ಕಷ್ಟ ಕಾರ್ಪಣ್ಯ ಯಾವುದೂ ಬರಲ್ಲ ಅನ್ನೋ ನಂಬಿಕೆ ಇದೆ. ಇದಕ್ಕೆ ಇರಬಹುದು ನಾವು ಊರಿಗೊಂದು ಆಂಜನೇಯನ ಆಲಯಗಳನ್ನು ಕಾಣಬಹುದು. ಹರವು ಊರುಗಳಲ್ಲಿ ಊರನ್ನು ಕಾಯೋನಾಗಿ ಹಲವಾರು ಕಡೆ ನೆಲೆನಿಂತಿದ್ದಾನೆ ಈ ರಾಮ ಭಂಟ. ಆದ್ರೆ ಈ ದೇವಾಲಯದಲ್ಲಿ ಮಾತ್ರ, ಅಂಜನಾಪುತ್ರ ಖೈದಿಯಂತೆ ಕೈಗೆ ಬೇಡಿ ಹಾಕಿಕೊಂಡೇ ಭಕ್ತರನ್ನು ಕಾಯುತ್ತಾನೆ.

ಹೌದು, ಈ ಆಂಜನೇಯ ಸ್ವಾಮಿಯ ವಿಗ್ರಹ ಎಲ್ಲ ಆಂಜನೇಯ ಸ್ವಾಮಿಯ ವಿಗ್ರಹದಂತಲ್ಲ. ಬದಲಾಗಿ ಇಲ್ಲಿ ದೇವರೇ ಖೈದಿ. ಕೈಗೆ ಬೇಡಿ ಹಾಕಿದ ರೀತಿಯಲ್ಲೇ ನೆಲೆ ನಿಂತು ಭಕ್ತರನ್ನು ಪೊರೆಯುತ್ತಿದ್ದಾನೆ ಈ ರಾಮ ಭಂಟ. ಮಾಡಿದ ಒಂದು ತಪ್ಪಿಗಾಗಿ ಶಿಕ್ಷೆಯ ರೂಪದಲ್ಲಿ ಇಲ್ಲಿ ನೆಲೆ ನಿಂತ ಮಾರುತಿ ಇಂದಿಗೂ ತನ್ನ ಕೆಲಸವನ್ನು ತಪ್ಪದೇ ಮಾಡುತ್ತಿದ್ದಾನೆ ಅಂತಾರೆ ಭಕ್ತರು. ಹಾಗಾದ್ರೆ ತ್ರಿಜಗ ಪೂಜಿತ ನಾಗಿರೋ ಈ ಮಾರುತಿಗೆ ಶಿಕ್ಷೆ ಕೊಟ್ಟದ್ದು ಯಾರು ಗೊತ್ತಾ ? ಅದಕ್ಕೆ ಉತ್ತರ ಹೇಳುತ್ತೆ ಇಲ್ಲಿನ ಸ್ಥಳ ಪುರಾಣ.
ಈ ಕ್ಷೇತ್ರ ಜಗನ್ನಾಥನಿಗೆ ಮೀಸಲಾಗಿರೋ ಒಡಿಸ್ಸಾದ ಪುರಿ ಕ್ಷೇತ್ರ . ಜಗನ್ನಾಥ ಇಲ್ಲಿ ಬಂದು ನೆಲೆಸಿದಾಗ ಭಕ್ತರು ಮಾತ್ರವಲ್ಲ. ಸಮುದ್ರ ರಾಜ ಕೂಡಾ ಜಗನ್ನಾಥನನ್ನು ದರ್ಶಿಸಿ ಸ್ವಾಮಿಯ ಪಾದ ತೊಳೆದು ಹೋಗುತ್ತಿದ್ದನಂತೆ. ಹೀಗಾಗಿ ದೇವಾಲಯದ ವರೆಗಿನ ನಗರವು ನೀರು ಪಾಲಾಗುತ್ತಿತ್ತು. ಇದರಿಂದ ಪಾರಾಗಲು ಆಂಜನೇಯ ಸ್ವಾಮಿಯನ್ನು ಅಲ್ಲಿ ಪ್ರತಿಷ್ಟಾಪಿಸಲಾಯಿತು.
ಇದನ್ನೂ ಓದಿ : ಕುಕ್ಕೆಯಿಂದ ಕಾಳಿಂಗನಾಗಿ ಬಂದು ಖುದ್ದು ಸುಬ್ರಹ್ಮಣ್ಯ ನೇ ನೆಲೆ ನಿಂತ ಕ್ಷೇತ್ರ – ಇಲ್ಲಿ ಬಂದ್ರೆ ನಾಗದೋಷ ಪರಿಹಾರ
ಇದಾದ ನಂತರ ಸಮುದ್ರ ರಾಜ ಆಂಜನೇಯನ ಆಣತಿಯಂತೆ ಉಕ್ಕೇರುವುದನ್ನು ನಿಲ್ಲಿಸಿ ಬಿಟ್ಟ. ಹೀಗೇ ಒಂದು ಬಾರಿ ಹನುಮಂತ ಜಗನ್ನಾಥನ ಅಪ್ಪಣೆಯನ್ನು ಕೇಳದೇ ಅಯೋಧ್ಯಗೆ ತೆರಳಿದರಂತೆ. ಇದೇ ಸಮಯವನ್ನು ಉಪಯೋಗಿಸಿದ ಸಮುದ್ರ ರಾಜ ಮತ್ತೆ ಉಕ್ಕಿ ಬಂದು ಜಗನ್ನಾಥನ ಪಾದ ಸ್ಪರ್ಶಿಸಿದನಂತೆ . ಆಗ ಮತ್ತೆ ನಗರಗಳು ನೀರಿನಲ್ಲಿ ಮುಳುಗಿತ್ತಂತೆ. ಇದರಿಂದ ಕುಪಿತನಾದ ಜಗನ್ನಾಥ ತನ್ನ ಪ್ರಿಯ ಭಕ್ತ ಆಂಜನೇಯ ಸ್ವಾಮಿಯ ವಿಚಾರಣೆ ಮಾಡಿ ಚಿನ್ನದ ಬೇಡಿ ಹಾಕಿ ಗಡಿಯನ್ನು ಸಮುದ್ರದಿಂದ ಕಾಯುವಂತೆ ಅಪ್ಪಣೆ ಮಾಡಿದರಂತೆ. ಅಂದಿನಿಂದ ಮಾರುತಿ ತನ್ನ ಸ್ವಾಮಿಯ ಅಪ್ಪಣೆಯನ್ನು ತಪ್ಪದೇ ಪಾಲಿಸಿಕೊಂಡು ಬರುತ್ತಿದ್ದಾರೆ.
ಇದನ್ನೂ ಓದಿ : ಹೃದಯಾಘಾತ ತಡಿಯೋಕೆ ಉತ್ತಮ ಔಷಧ: ಎಳ್ಳಿನಿಂದ ಮಾಯವಾಗುತ್ತೆ
ಹೀಗಾಗಿ ಈ ಆಂಜನೇಯ ಸ್ವಾಮಿಯನ್ನು ಬೇಡಿ ಹನುಮಾನ್ ಅಥವಾ ದರಿಯಾ ಮಹಾವೀರ್ ಅಂತ ಕರೆಯುತ್ತಾರೆ. ಇಲ್ಲಿ ದರಿಯಾ ಅಂದ್ರೆ ಸಮುದ್ರ ಅಂತ ಅರ್ಥ. ಇಂದಿಗೂ ಇಲ್ಲಿ ಹನುಮಂತ ಗಡಿ ಕಾಯೋದ್ರಿಂದ ಸಮುದ್ರದಲ್ಲಿ ನಡೆಯುವ ಯಾವುದೇ ಆಪತ್ತು ಪುರಿಯನ್ನು ತಾಕೋದಿಲ್ಲ ಅನ್ನೋದು ಭಕ್ತರ ನಂಬಿಕೆ . ಹೀಗಾಗಿ ಪುರಿಗೆ ಬರುವ ಭಕ್ತರು ಹನುಮನ ದರ್ಶನವನ್ನು ಪಡೆಯದೇ ಹಿಂದಿರುಗೋದಿಲ್ಲ.

ಇದನ್ನೂ ಓದಿ : ಬೇಸಿಗೆ ಬೇಗೆಗೆ ಮುಕ್ತಿ ನೀಡುತ್ತೆ ಈ ಬಟ್ಟೆ : ಇದನ್ನು ಬಳಸಿದ್ರೆ ಭೂಮಿ , ದೇಹ ಎರಡಕ್ಕೂ ಉತ್ತಮ
ಇಲ್ಲಿಗೆ ಬಂದರೆ ನಗರವನ್ನು ಕಾಯುವ ಹನುಮಾನ್ ತಮ್ಮ ಕಷ್ಟಗಳನ್ನು ಪರಿಹರಿಸುತ್ತಾನೆ ಅನ್ನೋ ನಂಬಿಕೆ ಭಕ್ತರದು. ಇನ್ನು ಪುರಿಯ ಜನರಂತು ಸಮುದ್ರದಿಂದ ಬರುವ ಅಪತ್ತನ್ನು ದೂರ ಮಾಡಿ ತಮ್ಮ ಊರನ್ನು ಕಾಯುವ ಸೇನಾನಿ ಅನ್ನೋ ರೀತಿಯಲ್ಲಿ ಹನುಮಂತನನ್ನು ಪೂಜಿಸಿ ಆರಾಧಿಸೋದು ನೋಡೋದೇ ಒಂದು ಚಂದ.
Odisha Puri Jagannatha HanumanTemple is an Famous Hindu Temple In India