ಸೋಮವಾರ, ಏಪ್ರಿಲ್ 28, 2025
HomeSpecial StoryPuja Vastu Tips : ದೇವರ ಕೋಣೆಯಲ್ಲಿ ಈ ವಸ್ತುಗಳಿದ್ದರೆ ಮಾತ್ರ ಲಕ್ಷ್ಮೀ ನೆಲೆಸುತ್ತಾಳೆ

Puja Vastu Tips : ದೇವರ ಕೋಣೆಯಲ್ಲಿ ಈ ವಸ್ತುಗಳಿದ್ದರೆ ಮಾತ್ರ ಲಕ್ಷ್ಮೀ ನೆಲೆಸುತ್ತಾಳೆ

- Advertisement -

Puja Vastu Tips : ಮನೆಯಲ್ಲಿರುವ ದೇವರ ಕೋಣೆಗೆ ವಾಸ್ತು ಶಾಸ್ತ್ರದಲ್ಲಿ ತುಂಬಾನೇ ಮಹತ್ವವಿದೆ. ಮನೆಯಲ್ಲಿ ದೇವರ ಪೂಜೆ ಮಾಡುವುದರಿಂದ ಧನಾತ್ಮಕ ಶಕ್ತಿ ಹೆಚ್ಚಲಿದೆ. ವಾಸ್ತು ಶಾಸ್ತ್ರದಲ್ಲಿ ಪೂಜಾ ಕೋಣೆಯ ದಿಕ್ಕಿನಿಂದ ಹಿಡಿದು ಅಲ್ಲಿ ಬಳಕೆ ಮಾಡುವ ವಸ್ತುಗಳ ಬಗ್ಗೆಯೂ ಅದರದ್ದೇ ಆದ ನಿಯಮಗಳಿವೆ. ದೇವರ ಕೋಣೆ ವಾಸ್ತು ಪ್ರಕಾರವಾಗಿದ್ದರೆ ಅಂತಹ ಮನೆಯಲ್ಲಿ ಯಾವುದೇ ನಕಾರಾತ್ಮಕ ಶಕ್ತಿಯು ಒಳನುಸುಳಲು ಸಾಧ್ಯವಿಲ್ಲ.
ಯಾವ ಮನೆಯ ದೇವರ ಕೋಣೆಯಲ್ಲಿ ವಾಸ್ತು ದೋಷ ಇರುತ್ತದೆಯೋ ಆ ಮನೆಯಲ್ಲಿ ನೆಮ್ಮದಿ ನೆಲಸಲು ಸಾಧ್ಯವೇ ಇಲ್ಲ. ಈ ದೇವರ ಕೋಣೆಯಲ್ಲಿ ನೀವು ಬಳಕೆ ಮಾಡುವ ಕೆಲ ವಸ್ತುಗಳು ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಈ ವಿಶೇಷ ವಸ್ತುಗಳು ನಿಮ್ಮ ದೇವರ ಕೋಣೆಯಲ್ಲಿ ಇದ್ದರೆ ಮಾತ್ರ ನಿಮ್ಮ ಮನೆಯಲ್ಲಿ ಲಕ್ಷ್ಮೀ ನೆಲೆಸಲು ಸಾಧ್ಯ ಎಂದು ಹೇಳುತ್ತೆ ವಾಸ್ತು ಶಾಸ್ತ್ರ. ಹಾಗಾದರೆ ದೇವರ ಕೋಣೆ ಇರಬೇಕಾದ ಸರಿಯಾದ ದಿಕ್ಕು ಯಾವುದು..? ಪೂಜಾ ಗೃಹದಲ್ಲಿ ಯಾವೆಲ್ಲ ವಸ್ತುಗಳು ಅವಶ್ಯವಾಗಿ ಇರಬೇಕು ಎಂಬುದಕ್ಕೆ ಇಲ್ಲಿದೆ ಮಾಹಿತಿ.

ವಾಸ್ತು ಶಾಸ್ತ್ರದ ಪ್ರಕಾರ ದೇವರ ಕೋಣೆಯು ಎಂದಿಗೂ ಈಶಾನ್ಯದ ಕಡೆಗೆ ಮುಖ ಮಾಡಿರಬೇಕು. ಈಶಾನ್ಯ ದಿಕ್ಕನ್ನು ದೇವತೆಗಳ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ಈ ದಿಕ್ಕಿನಲ್ಲಿ ದೇವರ ಕೋಣೆ ಇದ್ದರೆ ಆ ಮನೆಯಲ್ಲಿ ಮಂಗಳಕರ ಕಾರ್ಯಗಳು ನಡೆಯಲಿದೆ. ಮಾತ್ರವಲ್ಲದೇ ಇಂತಹ ಮನೆಯಲ್ಲಿ ಸುಖ, ಶಾಂತಿ, ಐಶ್ವರ್ಯ ಹಾಗೂ ಅಭಿವೃದ್ಧಿ ಇರಲಿದೆ.ದೇವರ ಕೋಣೆಯಲ್ಲಿ ನೀವು ಪೂಜೆ ಮಾಡುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ನೆಲೆಸುತ್ತದೆ.ಪೂಜಾ ಗೃಹದ ಬಳಿಯಲ್ಲಿ ಕೆಲವು ವಿಶೇಷ ವಸ್ತುಗಳನ್ನು ಇರಿಸಿದರೆ ಅಂತಹ ಮನೆಗಳಲ್ಲಿ ಲಕ್ಷ್ಮೀಯ ಕೃಪಾಕಟಾಕ್ಷ ಸದಾ ಇರಲಿದೆ.


ನವಿಲು ಗರಿ
ವಾಸ್ತು ಶಾಸ್ತ್ರದಲ್ಲಿ, ನವಿಲು ಗರಿಗಳು ನಕಾರಾತ್ಮಕ ಶಕ್ತಿಯನ್ನು ದೂರವಿರಿಸಲು ಸಹಾಯ ಮಾಡುತ್ತದೆ. ಮತ್ತೊಂದೆಡೆ, ನವಿಲು ಗರಿಯು ಶ್ರೀಕೃಷ್ಣನಿಗೆ ಬಹಳ ಪ್ರಿಯವಾಗಿದೆ. ಪೂಜೆಯ ಸ್ಥಳದಲ್ಲಿ ನವಿಲು ಗರಿಗಳನ್ನು ಇಡುವುದರಿಂದ ಮನೆಯಲ್ಲಿ ಯಾವಾಗಲೂ ಧನಾತ್ಮಕ ಶಕ್ತಿ ಮತ್ತು ದೇವರ ಅನುಗ್ರಹ ಬರುತ್ತದೆ. ನವಿಲು ಗರಿ ಇರುವ ಮನೆಗೆ ಯಾವುದೇ ನಕಾರಾತ್ಮಕ ಶಕ್ತಿ ಪ್ರವೇಶಿಸುವುದಿಲ್ಲ ಎಂದು ನಂಬಲಾಗಿದೆ. ಈ ಕಾರಣಕ್ಕಾಗಿ, ನವಿಲು ಗರಿಗಳನ್ನು ಯಾವಾಗಲೂ ಪೂಜಾ ಸ್ಥಳದಲ್ಲಿ ಇಡಬೇಕು.


ಶಂಖ
ಭಗವಾನ್ ವಿಷ್ಣು ಮತ್ತು ಲಕ್ಷ್ಮಿಗೆ ಶಂಖವು ತುಂಬಾ ಪ್ರಿಯವಾಗಿದೆ. ಹೀಗಾಗಿ ಪೂಜಾ ಸ್ಥಳದಲ್ಲಿ ಶಂಖ ಇರಬೇಕು. ನಿತ್ಯವೂ ದೇವರ ಪೂಜೆಯ ಸಮಯದಲ್ಲಿ ಶಂಖವನ್ನು ಊದಬೇಕು. ಶಂಖವನ್ನು ಊದುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಬರುತ್ತದೆ ಮತ್ತು ಮನೆಯಲ್ಲಿ ಲಕ್ಷ್ಮಿ ದೇವಿ ನೆಲೆಸುತ್ತಾಳೆ.


ಗಂಗಾಜಲ
ಹಿಂದೂ ಧರ್ಮದಲ್ಲಿ ಅಗ್ನಿ ಮತ್ತು ಗಂಗಾಜಲಕ್ಕೆ ವಿಶೇಷ ಮಹತ್ವವಿದೆ. ಜೀವನದ ಪ್ರತಿಯೊಂದು ಆಚರಣೆಗಳಲ್ಲಿ ಗಂಗಾಜಲವನ್ನು ಬಳಸಲಾಗುತ್ತದೆ. ಗಂಗಾಜಲ ಎಂದಿಗೂ ಕೆಡುವುದಿಲ್ಲ. ಆದ್ದರಿಂದ ಪೂಜಾ ಸ್ಥಳದಲ್ಲಿ ಗಂಗಾಜಲ ಇರಬೇಕು. ದೈನಂದಿನ ಪೂಜೆಯ ಸಮಯದಲ್ಲಿ ಗಂಗಾಜಲವನ್ನು ಬಳಸಬೇಕು. ಪೂಜಾ ಕೋಣೆಯಲ್ಲಿ ಗಂಗಾಜಲವಿದ್ದರೆ ಲಕ್ಷ್ಮಿಯು ಪ್ರಸನ್ನಳಾಗುತ್ತಾಳೆ.


ಸಾಲಿಗ್ರಾಮ
ಲಕ್ಷ್ಮಿ ದೇವಿಯ ಅನುಗ್ರಹವನ್ನು ಪಡೆಯಲು ಸುಲಭವಾದ ಮಾರ್ಗವೆಂದರೆ ಸಾಲಿಗ್ರಾಮವನ್ನು ಪೂಜೆಯ ಮನೆಯಲ್ಲಿ ಇರಿಸಿಕೊಂಡು ನಿಯಮಿತವಾಗಿ ಪೂಜಿಸುವುದು. ಸಾಲಿಗ್ರಾಮವು ಭಗವಾನ್ ವಿಷ್ಣುವಿನ ರೂಪವಾಗಿದೆ, ಹೀಗಾಗಿ ಸಾಲಿಗ್ರಾಮವನ್ನು ಪೂಜಿಸೂವ ಮನೆಯಲ್ಲಿ ಲಕ್ಷ್ಮೀ ನೆಲೆಸುತ್ತಾಳೆ.

puja vastu tips always keep these things in puja ghar devi laxmi give wealth

ಇದನ್ನು ಓದಿ : Sprouted Wheat : ಮೊಳಕೆಯೊಡೆದ ಗೋಧಿಯ ಸೇವನೆಯ ಹಿಂದಿದೆ ಇಷ್ಟೆಲ್ಲ ಲಾಭ

RELATED ARTICLES

Most Popular