Bangalore Lockdown : ಬೆಂಗಳೂರಿನಲ್ಲಿ ಕರೋನಾ ರೌದ್ರ ನರ್ತನ : ಸೋಂಕಿನ ಪ್ರಮಾಣ ನಿಯಂತ್ರಿಸಲು ಅನಿವಾರ್ಯವಾಗುತ್ತಾ ಲಾಕ್ ಡೌನ್ ?

ಬೆಂಗಳೂರು : ರಾಜ್ಯದಲ್ಲಿ ಹಾಗೂ ಬೆಂಗಳೂರಿನಲ್ಲಿ ಕೊರೋನಾ ಹಾಗೂ ಓಮೈಕ್ರಾನ್ ಪ್ರಕರಣಗಳು ಏರಿಕೆಯಾಗುತ್ತಿರುವ ಬೆನ್ನಲ್ಲೇ ಬಿಬಿಎಂಪಿ ಹೈ ಅಲರ್ಟ್ ಆಗಿದ್ದು ಪರೀಕ್ಷಾ ಪ್ರಮಾಣವನ್ನು ಹೆಚ್ಚಿಸಲಾಗುತ್ತಿದೆ. ಅಗತ್ಯ ಬಿದ್ದರೇ ಸರ್ಕಾರ ಕಠಿಣ ಕ್ರಮಕೈಗೊಳ್ಳುವ ಮೂಲಕ ಪರಿಸ್ಥಿತಿ ನಿಯಂತ್ರಣಕ್ಕೆ ತರಲಿದೆ ಎನ್ನಲಾಗುತ್ತಿದೆ. ಆ ಮೂಲಕ ಸರ್ಕಾರ ಕಠಿಣ ಕ್ರಮಕ್ಕೆ (Bangalore Lockdown) ಚಿಂತನೆ ನಡೆಸಿರೋ ಸಂಗತಿ ಬಯಲಾಗಿದೆ.

ನಗರದಲ್ಲಿ ಏರಿಕೆಯಾಗುತ್ತಿರುವ ಕೊರೋನಾ ಪ್ರಮಾಣದ ಕುರಿತುಬಿಎಂಪಿ ಕಮಿಷನರ್ ಗೌರವ್ ಗುಪ್ತಾ ಮಾಹಿತಿ ನೀಡಿದ್ದು, ಬೆಂಗಳೂರು ಮಹಾನಗರದಲ್ಲಿ ಕೋವಿಡ್ ಹೆಚ್ಚಳವಾಗ್ತಿದೆ. ಮುಂದೆಯೂ ಹೆಚ್ಚು ಆಗುತ್ತೆ. ನಮ್ಮಲ್ಲಿ ಇರುವ ವಲಯ ಮಟ್ಟದ ಅಧಿಕಾರಿಗಳು, ವಾರ್ಡ್ ಮಟ್ಟದ ಅಧಿಕಾರಿಗಳು ಕಾರ್ಯ ನಿರತರಾಗಿದ್ದಾರೆ. ವಸಂತನಗರ ಆರೋಗ್ಯ ಕೇಂದ್ರದಲ್ಲಿ ಪರಿಶೀಲನೆ ‌ನಡೆಸಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ.

ಟೆಸ್ಟಿಂಗ್ ಟೀಮ್, ವ್ಯಾಕ್ಸಿನೇಷನ್‌ ಕೂಡ ನಡೀತಾ ಇದೆ. ಫಿಜಿಕಲ್ ಟ್ರೈಜ್ ಸೆಂಟರ್ ಆಗಿ ಮಾಡಲಾಗಿದೆ. ಯಾರಾದ್ರೂ ಆಸ್ಪತ್ರೆ ಸೇರಬೇಕಾದ್ರೆ ಮೊದಲು ನೇರವಾಗಿ ಫಿಜಿಕಲ್ ಟ್ರೈಜ್ ಮಾಡಲಾಗುತ್ತೆ. ಯಾರಿಗೆ ಆಸ್ಪತ್ರೆ ಅವಶ್ಯಕತೆ ಇದೆಯೋ ಅಂತವರಿಗೆ ಇಲ್ಲೆ ಚೆಕ್ ಮಾಡಿ ಕಳುಹಿಸಲಾಗುತ್ತೆಇಡೀ ಬೆಂಗಳೂರಿನಲ್ಲಿ ಈ ರೀತಿ ವ್ಯವಸ್ಥೆ ಮಾಡಲಾಗುತ್ತೆ ಅಂತ ಗೌರವ್ ಗುಪ್ತಾ ಮಾಹಿತಿ ನೀಡಿದ್ದಾರೆ. ಬೆಂಗಳೂರಿನಲ್ಲಿ ಕೋವಿಡ್ ಪ್ರಕರಣ ಹೆಚ್ಚುತ್ತಲೇ ಇದೆ. ಮನೆ ಮನೆಗೆ ಹೋಗಿ ಟ್ರೈಜ್ ಮಾಡಲಾಗುತ್ತೆ. ಸಧ್ಯ ಪರಿಸ್ಥಿತಿ ಕಂಟ್ರೋಲ್ ನಲ್ಲಿದೆ. ಯಾರಿಗಾದರೂ ಲಕ್ಷಣಗಳು ಇದ್ರೆ ಟೆಸ್ಟಿಂಗ್ ಮಾಡಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.

ಅಕ್ಸಿಜನ್ ವ್ಯವಸ್ಥೆ ಬಹಳ ಜನರಿಗೆ ಅಗತ್ಯ ಇಲ್ಲ ಆಸ್ಪತ್ರೆಗೆ ಸೇರುವಂತ ಸಾಧ್ಯತೆ ಕಡಿಮೆ. ಫಿಜಿಕಲ್ ಟ್ರೈಜ್ ಸೆಂಟರ್ ‌ನಿಂದ ಆಸ್ಪತ್ರೆ ಬುಕ್ಕಿಂಗ್ ಮಾಡಲಾಗುತ್ತೆ.ಒಂದು ವಿಧಾನಸಭಾ ಕ್ಷೇತ್ರಕ್ಕೂ ಸಹಾಯವಾಣಿ ನಂಬರ್ ಬಿಡುಗಡೆ ಮಾಡುತ್ತೇವೆಟಫ್ ರೂಲ್ಸ್ ಜಾರಿಗೆ ಕ್ರಮ ವಹಿಸುತ್ತೇವೆ. ಮಾಸ್ಕ್ ಕಡ್ಡಾಯ, ಲಸಿಕೆ ಹಾಕಿಸಿಕೊಳ್ಳುವುದು ಕಡ್ಡಾಯವಾಗಿದೆ ಎಂದು ಗುಪ್ತಾ ಹೇಳಿದ್ದಾರೆ.

ಬರುವ ದಿನಗಳಲ್ಲಿ ಕೊರೋನಾ ಸಂಖ್ಯೆ ಜಾಸ್ತಿ ಆಗುತ್ತೆ. ಒಬ್ಬ ಒಬ್ಬರಿಂದ ಕೊರೋನಾ ಹರಡುತ್ತಿದೆ. ಕೋವಿಡ್ ಹೆಚ್ಚಾದ ಹಿನ್ನೆಲೆ ತಜ್ಞರ ಜೊತೆ ಸಭೆ ನಡೆಸಿ ಇನ್ನಷ್ಟು ಟಫ್ ರೂಲ್ಸ್ ಜಾರಿಗೆತರೋ ಚಿಂತನೆ ನಡೆದಿದೆ. ವೀಕೆಂಡ್ ಕರ್ಪ್ಯೂ ಈಗಾಗಲೇ ಸರ್ಕಾರ ವಿಧಿಸಿದೆ.ಅದು ಮತ್ತೆ ಮುಂದುವರಿಯಲಿದೆ ಎಂದು ಭಾವಿಸಿದ್ದೇನೆ.ಕೇಸ್‌ ಹೆಚ್ಚಳವಾದರೆ ಕಠಿಣ ಕ್ರಮ ತೆಗೆದುಕೊಳ್ಳುವುದು ಅನಿವಾರ್ಯ ಸರ್ಕಾರ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ತಾಂತ್ರಿಕ ಸಲಹಾ ಸಮಿತಿ ಸದಸ್ಯರು ಹಾಗೂ ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಮಾಹಿತಿ ನೀಡಿದ್ದಾರೆ. ಬಿಬಿಎಂಪಿ ಆಯುಕ್ತ ಗೌರವ ಗುಪ್ತ ಕಠಿಣ ನಿಯಮದ ಎಚ್ಚರಿಕೆ ಕೊಟ್ಟ ಬೆನ್ನಲ್ಲೇ ಸಿಎಂ ಅಧಿಕಾರಿಗಳು ಹಾಗೂ ಸಚಿವರ ಜೊತೆ ವರ್ಚುವಲ್ ಸಭೆ ನಡೆಸಿದ್ದು ಕಠಿಣ ನಿಯಮ ರೂಪಿಸಲು ಸಿದ್ಧತೆ ನಡೆದಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ : ಕೊರೊನಾ ಲಸಿಕೆ ಪಡೆಯದವರಿಗೆ ತಾರತಮ್ಯ ಮಾಡುವಂತಿಲ್ಲ : ಬಾಂಬೆ ಹೈಕೋರ್ಟ್

ಇದನ್ನೂ ಓದಿ : ಬ್ರಹ್ಮಾವರದಲ್ಲಿ 15 ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್ : ಬೋರ್ಡ್ ಶಾಲೆ ಸೀಲ್ ಡೌನ್

( corona virus positivity rate hike in Bangalore, must lockdown Bangalore)

Comments are closed.