ಭಾನುವಾರ, ಏಪ್ರಿಲ್ 27, 2025
HomeSpecial StoryShishileshwara Temple god fish : ಇಲ್ಲಿ ಬಂದರೆ ಚರ್ಮರೋಗ ಮಾಯ : ಮೀನುಗಳ ರೂಪದಲ್ಲಿ...

Shishileshwara Temple god fish : ಇಲ್ಲಿ ಬಂದರೆ ಚರ್ಮರೋಗ ಮಾಯ : ಮೀನುಗಳ ರೂಪದಲ್ಲಿ ಕಾಯುತ್ತಾನೆ ಶಿವ

- Advertisement -

Shishileshwara Temple god fish : ಭಕ್ತಿಗೆ ಒಲಿಯದ ಯಾವ ದೇವರಿದ್ದಾನೆ ಹೇಳಿ. ಪ್ರತಿ ದೇವಾಲಯವು ಭಕ್ತಿಯ ಕೊಂಡಿ. ಎಲ್ಲಿ ದೇವರಿಲ್ಲವೋ ಅಲ್ಲಿ ಭಕ್ತನಿಲ್ಲ. ಎಲ್ಲಿ ಭಕ್ತಿ ಇಲ್ಲವೋ ಅಲ್ಲಿ ದೇವರಿಲ್ಲ ಅನ್ನೋ ಮಾತಿದೆ. ಅದರಂತೆ ಎಲ್ಲಾ ದೇವಾಲಯದ ಹಿಂದೆ ಒಂದು ಭಕ್ತಿಯ ಶ್ರದ್ದೆಯ ಕಥೆ ಇರುತ್ತೆ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಯಾವುದೇ ದೇವಾಲಯದ ಇತಿಹಾಸ ನೋಡಿದ್ರೆ ಇದು ನಮಗೆ ಕಾಣಿಸಿಯೇ ಇರುತ್ತೆ. ಇಂತಹದೇ ಒಂದು ದೇವಾಲಯದ ಇದು. ಸುತ್ತಲು ಹಸಿರ ನಡುವೆ ನಿಂತಿರುವ ದೇವಾಲಯ. ಇಲ್ಲಿ ಎಲ್ಲಿ ನೋಡಿದ್ರೂ ಬರಿ ಪ್ರಕೃತಿಯೇ ಕಾಣುತ್ತೆ. ನಗರದ ಜಂಜಾಟವಿಲ್ಲದೆ ಶಿವ ಇಲ್ಲಿ ಧ್ಯಾನಸ್ಥನಾಗಿದ್ದಾನೆ ಅಂತ ಅನ್ನಿಸದೇ ಇರದು. ಪಕ್ಕದಲ್ಲೇ ಹರಿಯುವ ನದಿ. ದೂರದಲ್ಲಿ ಕಾಣುವ ಬೆಟ್ಟ ಗುಡ್ಡಗಳ ಸಾಲು ಎಂತವರನ್ನೂ ಭಕ್ತಿರಸದಲ್ಲಿ ತೇಲಿಸುತ್ತೆ.

ಇಂತಹ ಸ್ಥಳದಲ್ಲಿಯೇ ಆ ಶಿವ ಉದ್ಬವಲಿಂಗವಾಗಿ ನೆಲೆಸಿದ್ದಾನೆ. ಹೌದು ಇದು ಶಿವ ತನ್ನನ್ನು ಆರಾಧಿಸುತ್ತಿದ್ದ ಭಕ್ತನಿಗಾಗಿ ನೆಲೆ ನಿಂತ ಪುಣ್ಯಕ್ಷೇತ್ರ. ಕಪಿಲಾನದಿಯ ಪಕ್ಕದಲ್ಲೇ ಶಿವ 700 ವರ್ಷದಿಂದ ಭಕ್ತರಿಗೆ ದರ್ಶನ ನೀಡುತ್ತಾನೆ. ಸ್ಥಳ ಪುರಾಣಗಳ ಪ್ರಕಾರ ಮೊದಲು ಶಿವನ್ನು ಇಲ್ಲಿ ಆರಾಧಿಸಲಾಗುತ್ತಿರಲಿಲ್ಲ. ಯಾಕಂದ್ರೆ ಶಿವ ಮೊದಲು ಆರಾಧಿಸಲ್ಪಡುತ್ತಿದ್ದದ್ದು ಪಕ್ಕದಲ್ಲೇ ಇದ್ದ ಕುಮಾರ ಗಿರಿಯಲ್ಲಿ. ಹೀಗಾಗಿ ಇಲ್ಲಿನ ಪುರೋಹಿತರು ನಿತ್ಯಪೂಜೆಗಾಗಿ ಇಲ್ಲಿಂದಲೇ ನೀರನ್ನು ತೆಗೆದುಕೊಂಡು ಹೋಗಬೇಕಾಗಿತ್ತು. ಒಂದು ದಿನ ನೀರನ್ನು ತೆಗೆದುಕೊಂಡು ಹೋಗುವಾಗ ನದಿಯ ಬಳಿ ಜಾರಿ ಬಿದ್ದರು. ಆಗ ಅವರು ಭಕ್ತಿಯಿಂದ ದೇವರನ್ನು ನದಿಯ ಬಳಿ ನೆಲೆಸು ಅಂತ ಪ್ರಾರ್ಥಿಸಿದ್ರು. ಶಿವನೆಂದರೆ ಭಕ್ತವತ್ಸಲ ಅಲ್ವಾ?

ಮರುದಿನವೇ ನದಿಯ ಬಳಿಯೇ ಶಿವಲಿಂಗವೊಂದು ಉದ್ಬವವಾಯಿತು ಅನ್ನೋದು ಇಲ್ಲಿ ಭಕ್ತರ ನಂಬಿಕೆ ಇನ್ನು ಈ ದೇವಾಲಯದಲ್ಲಿನ ಮತ್ತೊಂದು ವಿಶೇಷತೆ ಅಂದ್ರೆ ದೇವಸ್ಥಾನದ ಪಕ್ಕದ ಕಪಿಲಾ ನದಿಯಲ್ಲಿ ರುವ ದೇವರ ಮೀನುಗಳು. ಈ ಮೀನುಗಳಿಂದಲೇ ಶಿವ ಇಲ್ಲಿನ ಭಕ್ತರ ಸಂಕಟಗಳನ್ನು ಈಡೇರಿಸುತ್ತಾನೆ ಅನ್ನೋ ನಂಬಿಕೆ. ಆದರಿಂದಲೇ ಈ ನದಿಯ ಭಾಗವನ್ನು ಮತ್ಯ ತೀರ್ಥ ಎಂದು ಕರೆಯುತ್ತಾರೆ . ಇಲ್ಲಿ ಮಹಶೀರ್ ಜಾತಿಯ ದೊಡ್ಡ ಮೀನುಗಳಿವೆ (god fish). ಇವುಗಳಿಗೆ ಮಧ್ಯಾಹ್ನ ದೇವರ ಪ್ರಸಾದವನ್ನು ಅರ್ಪಿಸಲಾಗುತ್ತೆ.

ಈ ಮೀನುಗಳು ಈ ದೇವಾಲಯದಲ್ಲಿ ಹೇಗೆ ಬಂದಿವೆ ಅನ್ನೋದಕ್ಕೆ ಯಾವುದೇ ಮಾಹಿತಿಯಿಲ್ಲ. ಆದ್ರೆ ಮೀನಿನಲ್ಲಿ (god fish) ಹರಕೆ ಹೇಳಿದ್ರೆ ಚರ್ಮ ವ್ಯಾಧಿಗಳು ನಿವಾರಣೆಯಾಗುತ್ತೆ ಅನ್ನೋ ನಂಬಿಕೆ ಭಕ್ತರಲ್ಲಿದೆ. ಹೀಗಾಗಿ ಹಲವು ಮಂದಿ ಇಲ್ಲಿಗೆ ಬಂದು ಹರಕೆ ಹೇಳಿ ತಮ್ಮ ಸಮಸ್ಯೆ ಯನ್ನು ನಿವಾರಿಸಿಕೊಂಡಿದ್ದಾರೆ. ಇನ್ನು ಈ ದೇವಾಲಯದ ಬಳಿಯಲ್ಲೇ ಸಾವಿರಾರು ಸಂಖ್ಯೆಯಲ್ಲಿ ಮೀನುಗಳಿವೆ. ಹೀಗಾಗಿ ಬ್ರಿಟೀಷ್ ಆಡಳಿತದ ವೇಳೆಯಲ್ಲೇ ಇಲ್ಲಿನ ಸುತ್ತಮುತ್ತಲ 2 ಕಿಲೋ ಮೀಟರ್ ವ್ಯಾಪ್ತಿಯ ನದಿಯಲ್ಲಿ ಮೀನುಗಾರಿಕೆಯನ್ನು ನಿಷೇಧಿಸಲಾಗಿದೆ.

ಇಷ್ಟೆಲ್ಲಾ ಕ್ರಮ ಕೈಗೊಂಡರೂ ಕೆಲವು ವರ್ಷಗಳ ಹಿಂದೆ ಇಲ್ಲಿ ದುರ್ಘಟನೆಯೊಂದು ನಡೆದು ಹೋಗಿದೆ . ಅದೇನೆಂದರೆ ಇಲ್ಲಿನ ನದಿಯ ಮೇಲು ಭಾಗದಲ್ಲಿ ಈ ಮೀನುಗಳ ಉಗಮಸ್ಥಾನವಾದ ಮೀನಗುಂಡಿ ಎಂಬ ಸ್ಥಳವಿದೆ. ಅಲ್ಲಿಗೆ ದುಷ್ಕರ್ಮಿಗಳು ವಿಷ ಹಾಕ್ಕಿದ್ದರಂತೆ. ಇದರಿಂದ ಸಾವಿರಾರು ಮೀನುಗಳು ಸಾವನ್ನಪ್ಪಿದ್ದವು. ಇನ್ನು ಇದನ್ನು ನೋಡಿದ ಜನರು ಮೀನುಗಳನ್ನು ಅಲ್ಲೇ ದಡದಲ್ಲಿ ಮಣ್ಣು ಮಾಡಿ , ಮೀನುಗಳ (god fish) ನೆನಪಿಗಾಗಿ ಸ್ಮಾರಕ ಕಟ್ಟಿಸಿದ್ದಾರೆ. ಇನ್ನು ಈ ಮೀನು ಗಳ ಪೈಕಿ ದೊಡ್ಡಗಾತ್ರದ ಮೀನಿತ್ತು. ಅದನ್ನು ದೇವರ ಬಂಟ ಎಂದೇ ಕರೆಯಲಾಗಿತ್ತು. ಅದು ಕೇವಲ ದೇವರ ಪೂಜೆ ಯ ನಂತರ ಕಾಣಿಸಿಕೊಂದು ಪ್ರಸಾದ ಸ್ವೀಕರಿಸುತ್ತಿತ್ತು. ಆದರೆ ಈ ವಿಷಪ್ರಾನದಲ್ಲಿ ಇದು ಸಾವನ್ನಪ್ಪಿದೆ ಅಂತಾರೆ ಸ್ಥಳೀಯರು. ಇನ್ನು ಇಲ್ಲಿನ ಮತ್ತೊಂದು ವಿಶೇಷವೇಂದರೆ ಇಲ್ಲಿನ ನದಿಯಲ್ಲಿರುವ ಕಲ್ಲುಗಳು. ಒಂದು ಹಸುಕಲ್ಲು. ಇನ್ನೊಂದು ಹುಲಿಕಲ್ಲು . ಇದಕ್ಕೂ ಒಂದು ಕಥೆಯಿದೆ. ಇಲ್ಲಿ ಹಸುವೊಂದನ್ನು ಹುಲಿಯೊಂದು ಬೇಟೆಯಾಡುತ್ತಾ ಇಲ್ಲಿಗೆ ಬಂದಿದೆ. ಇದರಿಂದ ಕೋಪಗೊಂಡ ಶಿವ ಅವುಗಳನ್ನು ಕಲ್ಲು ಮಾಡಿದ ಅಂತಾರೆ ಭಕ್ತರು. ಇದಕ್ಕೂ ಇಲ್ಲಿ ಪೂಜೆ ನಡೆಯುತ್ತೆ.

ಅಂದ ಹಾಗೆ ಈ ದೇವಾಲಯ ಯಾವುದು ಗೊತ್ತಾ ? ಬೆಳ್ತಂಗಡಿ ತಾಲೂಕಿನ ಶಿಶಿಲೇಶ್ವರ ದೇವಾಲಯ. ಧರ್ಮಸ್ಥಳದಿಂದ 29 ಕಿಮೀ ದೂರದಲ್ಲಿರುವ ದೇವಾಲಯಕ್ಕೆ ಬಸ್ ವ್ಯವಸ್ಥೆಕೂಡಾ ಇದೆ. ಇನ್ನು ನದಿಯ ಆ ಭಾಗದಲ್ಲಿರುವ ದೇವಾಲಯಕ್ಕೆ ಹೋಗಲು ತೂಗು ಸೇತುವೆಯನ್ನು ನಿರ್ಮಿಸಲಾಗಿದೆ. ಹಾಗಾದ್ರೆ ಯಾಕೆ ತಡ ಪ್ರಕೃತಿಯ ನಡುವಿನ ಈ ದೇವಾಲಯಕ್ಕೆ ಒಮ್ಮೆ ಭೇಟಿ ನೀಡಿ.

ಇದನ್ನೂ ಓದಿ : Krishna Radhe Romance : ಇಲ್ಲಿ ಪ್ರತಿ ರಾತ್ರಿ ನಡೆಯುತ್ತೆ ಭಗವಂತನ ರಾಸಲೀಲೆ : ನೋಡೋಕೆ ಹೋದವರಿಗೆ ಏನಾಗುತ್ತೆ ?

ಇದನ್ನೂ ಓದಿ : Sowthadka Shri Maha Ganapathi : ಸೌತಡ್ಕ ವಿಘ್ನವಿನಾಶಕನಿಗಿಲ್ಲಿ ಬಯಲೇ ಆಲಯ, ಗಂಟೆ ಕಟ್ಟಿದ್ರೆ ಇಷ್ಟಾರ್ಥ ಈಡೇರಿಸುತ್ತಾನೆ ಗಣೇಶ

shishileshwara temple belthangadi dakshina kannada famous god fish

Vandana kommunje | ವಂದನಾ ಕೊಮ್ಮುಂಜೆ
Vandana Kommunje Senior Content Writer. Working in more than 10 Years in Kannada Famous News Channesl. Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular