Tempo Curser Accident : ಮರಕ್ಕೆ ಕ್ರೂಸರ್‌ ಢಿಕ್ಕಿ 7 ಮಂದಿ ಸಾವು, 6 ಮಂದಿ ಗಂಭೀರ : ನಿಶ್ಚಿತಾರ್ಥ ಮುಗಿಸಿ ವಾಪಾಸಾಗುತ್ತಿದ್ದ ವೇಳೆ ದುರಂತ

ಧಾರವಾಡ : ನಿಶ್ಚಿತಾರ್ಥ ಮುಗಿಸಿಕೊಂಡು ವಾಪಾಸಾಗುತ್ತಿದ್ದ ವೇಳೆಯಲ್ಲಿ ಟೆಂಪೋ ಕ್ರೂಸರ್‌ (Tempo Curser Accident)ಮರಕ್ಕೆ ಢಿಕ್ಕಿಯಾಗಿ 7 ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿ, 7 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಧಾರವಾಡದ ಬಾಡಾ ಗ್ರಾಮದ ಬಳಿಯಲ್ಲಿ ನಡೆದಿದೆ.

ಬೆನಕಕಟ್ಟೆ ಗ್ರಾಮದ ಅನನ್ಯ (14 ವರ್ಷ ), ಹರೀಶ್ (13 ವರ್ಷ), ಶಿಲ್ಪಾ (34 ವರ್ಷ), ನೀಲವ್ವ (60 ವರ್ಷ), ಮಧುಶ್ರೀ (20 ವರ್ಷ), ಮಹೇಶ್ವರಯ್ಯ (11 ವರ್ಷ), ಶಂಭುಲಿಂಗಯ್ಯ (11 ವರ್ಷ) ಮೃತ ದುರ್ದೈವಿಗಳಾಗಿದ್ದಾರೆ. ಧಾರವಾಡ ಜಿಲ್ಲೆಯ ರೇವಣ ಸಿದ್ದೇಶ್ವರ ಮಠದಲ್ಲಿ ಮದುವೆ ಮುಗಿಸಿಕೊಂಡು ನಿಗದಿ ಗ್ರಾಮಕ್ಕೆ ವಾಪಸ್ ಆಗುತ್ತಿದ್ದ ವೇಳೆಯಲ್ಲಿ ಈ ದುರ್ಘಟನೆ ಸಂಭವಿಸಿದೆ.

ಕ್ರೂಸರ್‌ ನಲ್ಲಿ ಒಟ್ಟು 13 ಮಂದಿ ಪ್ರಯಾಣಿಸುತ್ತಿದ್ದು, 7 ಮಂದಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದರೆ, ಆರು ಮಂದಿಯ ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ. ಚಾಲಕ ನಿಯಂತ್ರಣ ತಪ್ಪಿದ್ದೆ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆ.

ಸ್ಥಳಕ್ಕೆ ಧಾರವಾಡ ಗ್ರಾಮಾಂತರ ಠಾಣೆಯ ಪೊಲೀಸರು ಭೇಟಿ ನೀಡಿದ್ದು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಧಾರವಾಡ ಪೊಲೀಸ್‌ ವರಿಷ್ಠಾಧಿಕಾರಿ ಕೃಷ್ಣ ಕುಮಾರ್‌ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ಶಾಸಕರು ಗೋಣಿಚೀಲದಲ್ಲಿ ಹಣ ತರ್ತಾರೆ ! ಹರೀಶ್‌ ಪೂಂಜಾಗೆ ಮುಳುವಾಗುತ್ತಾ ಇಡಿ(ED)ಯ ಪಿಎಂಎಲ್‌ಎ ಕಾಯ್ಡೆ ?

ಇದನ್ನೂ ಓದಿ : Hyderabad Gang Rape : ಹೈದ್ರಾಬಾದ್‌ ಗ್ಯಾಂಗ್‌ ರೇಪ್‌ : ಪೊಲೀಸರಿಂದ ನಕಲಿ ಎನ್‌ಕೌಂಟರ್‌

tempo curser Accident 7 death 6 injured in Dharwad

Comments are closed.