ಶಿವಮೊಗ್ಗ : ನವರಾತ್ರಿ ಉತ್ಸವ ಸಮೀಪಿಸುತ್ತಿದೆ. ಪ್ರಮುಖ ದೇವಿ ದೇವಸ್ಥಾನಗಳಲ್ಲಿ ಅದ್ದೂರಿಯಾಗಿ ನವ ದಿನಗಳ ಕಾಲವೂ ನವರಾತ್ರಿಯ ಆಚರಣೆಯನ್ನು ಮಾಡಲಾಗುತ್ತದೆ. ಇದೀಗ ರಾಜ್ಯದ ಪ್ರಮುಖ ಪುಣ್ಯಕ್ಷೇತ್ರಗಳಲ್ಲೊಂದಾಗಿರುವ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿರುವ ಸಿಗಂಧೂರು ಶ್ರೀ ಚೌಡೇಶ್ವರಿ ಕ್ಷೇತ್ರದಲ್ಲಿ ಅಕ್ಟೋಬರ್ 7 ರಿಂದ 15ರವರೆಗೆ ನವರಾತ್ರಿ ಉತ್ಸವ ನಡೆಯಲಿದೆ. ಆದರೆ ಭಕ್ತರಿಗೆ ಹಲವು ನಿರ್ಬಂಧಗಳನ್ನು ವಿಧಿಸಲಾಗಿದೆ.
ದಿನಾಂಕ ಅಕ್ಟೋಬರ್ 7ರ ಗುರುವಾರದಿಂದ ಅಕ್ಟೋಬರ್ 15ರ ಶುಕ್ರವಾರದವರೆಗೆ ನವರಾತ್ರಿ ಉತ್ಸವ ನಡೆಯಲಿದ್ದು, ಮೊದಲ ದಿನ, ಮಹಾಭಿಶೇಷ, ದುರ್ಗಾಹೋಮ, ಪುಷ್ಪಾಲಂಕಾರ ಮಹಾಪೂಜೆಯ ಮೂಲಕ ಆರಂಭಗೊಳ್ಳಲಿದೆ. ಅಕ್ಟೋಬರ್ 15ರಂದು ವಾಗೀಶ್ವರೀದುರ್ಗಾ ಹೋಮ, ನೈವೇದ್ಯ, ಮಹಾಪೂಜೆ ಮೂಲಕ ನವರಾತ್ರಿ ಉತ್ಸವ ಸಮಾಪ್ತಿಗೊಳ್ಳಲಿದೆ.
ಇದನ್ನೂ ಓದಿ: ಇಲ್ಲಿಗೆ ಬಂದ್ರೆ ಸಂಕಷ್ಟಗಳು ದೂರ : ವರ್ಷಕ್ಕೊಮ್ಮೆ 36 ಗಂಟೆ ದರ್ಶನ ನೀಡುತ್ತಾಳೆ ಚೌಡೇಶ್ವರಿ
ಮಲೆನಾಡ ತಪ್ಪಲಿನಲ್ಲಿರುವ ಸಿಂಗದೂರು ಶ್ರೀ ಚೌಡೇಶ್ವರಿ ಕ್ಷೇತ್ರದಲ್ಲಿನ ನವರಾತ್ರಿ ಉತ್ಸವಕ್ಕೆ ರಾಜ್ಯ ಮಾತ್ರವಲ್ಲ ದೇಶದ ಹಲವು ರಾಜ್ಯಗಳಿಂದಲೂ ಭಕ್ತರು ಆಗಮಿಸುತ್ತಿದ್ದಾರೆ. ಕೊರೊನಾ ವೈರಸ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ.
ಇದನ್ನೂ ಓದಿ: ಸೌತಡ್ಕ : ವಿಘ್ನವಿನಾಶಕನಿಗಿಲ್ಲಿ ಬಯಲೇ ಆಲಯ, ಕಟ್ಟಿದ್ರೆ ಇಷ್ಟಾರ್ಥ ಈಡೇರಿಸುತ್ತಾನೆ ಗಣೇಶ
ರಾಜ್ಯ ಸರಕಾರ ಹೊರಡಿಸಿರುವ ಕೋವಿಡ್-19 ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸುವಂತೆ ದೇವಾಲಯದ ಆಡಳಿತ ಮಂಡಳಿ ಭಕ್ತರಿಗೆ ಸೂಚನೆಯನ್ನು ನೀಡಿದೆ. ನವರಾತ್ರಿ ಉತ್ಸವಕ್ಕೆ ಬರುವ ಭಕ್ತರು ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸ ಬೇಕು. ಅಲ್ಲದೇ ದೈಹಿಕ ಅಂತರವನ್ನು ಕಾಯ್ದುಕೊಂಡು ದೇವಿಯ ದರ್ಶನ ಪಡೆಯುವಂತೆ ಆಡಳಿತ ಮಂಡಳಿ ಮನವಿ ಮಾಡಿದೆ.
(Navratri Festival of the Sigandhooru Chaudeshwari)