Horoscope : ದಿನಭವಿಷ್ಯ : ತಪ್ಪಿಯೂ ನಿಮ್ಮ ದಾಖಲೆಗಳನ್ನು ಯಾರಿಗೂ ಕೊಡಬೇಡಿ

ಮೇಷರಾಶಿ
ಯೋಗ ಮತ್ತು ಧ್ಯಾನ ಮಾನಸಿಕವಾಗಿ ಸದೃಢರಾಗುವಂತೆ ಮಾಡುತ್ತದೆ, ಬಾಕಿ ಉಳಿದಿರುವ ಸಮಸ್ಯೆಗಳು ಗೊಂದಲ ಮಯವಾಗಿರುತ್ತದೆ, ಹಿಂದಿನ ತಪ್ಪುಗಳನ್ನು ಕ್ಷಮಿಸುವುದರಿಂದ ಸಂತೋಷವಾಗಿ ಇರಬಹುದು, ಪಾಲುದಾರರು ಬೆಂಬಲ ನೀಡುತ್ತಾರೆ, ಎಲ್ಲರೂ ಒಟ್ಟಾಗಿ ಕೆಲಸ ಮಾಡುವುದರಿಂದ ಹೆಚ್ಚಿನ ಲಾಭ, ಇಂದು ನಿಮ್ಮ ಪಾಲಿಗೆ ಅದೃಷ್ಟದ ದಿನ.

ವೃಷಭರಾಶಿ
ಉದ್ಯಮಿಗಳಿಂದ ಯಶಸ್ಸು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ, ವ್ಯಾಪಾರದಿಂದ ಅಧಿಕ ಲಾಭ ದೊರೆಯುತ್ತದೆ, ಸಾಮಾಜಿಕ ಕೂಟಗಳು ಸಂತೋಷವನ್ನು ತರುತ್ತದೆ, ಏಕಾಂಗಿಯಾಗಿ ಸಮಯ ಕಳೆಯುವುದು ಉತ್ತಮ, ವೈಯಕ್ತಿಕ ವಿಚಾರಗಳನ್ನು ಇತರರೊಂದಿಗೆ ಹಂಚಿಕೊಳ್ಳಬೇಡಿ, ಅನುಭವಿ ವ್ಯಕ್ತಿಗಳ ಸಲಹೆಯಿಂದ ಅಧಿಕ ಲಾಭ, ಸಂಗಾತಿಯೊಂದಿಗೆ ಸುಂದರ ಸಂಜೆ.

ಮಿಥುನರಾಶಿ
ಅತಿಯಾದ ಪ್ರಯಾಣದಿಂದ ನೀವು ಹೈರಾಣಾಗುವಿರಿ, ಇತರರ ಸಹಾಯವಿಲ್ಲದೇ ಅಧಿಕ ಲಾಭವನ್ನು ಗಳಿಸುವಿರಿ, ನಿಮ್ಮ ಜ್ಞಾನವು ಇತರರನ್ನು ಆಕರ್ಷಿಸುತ್ತದೆ, ಕೆಲಸದ ಸ್ಥಳದಲ್ಲಿ ಮೇಲಾಧಿಕಾರಿಗಳಿಂದ ಪ್ರಶಂಸೆಗೆ ಪಾತ್ರರಾಗುವಿರಿ, ದೂರ ಪ್ರಯಾಣವು ಅಧಿಕ ಲಾಭವನ್ನು ತರುತ್ತದೆ, ಹೊಂದಾಣಿಕೆಯಿಂದ ಕೆಲಸ ಕಾರ್ಯಗಳಲ್ಲಿ ಪ್ರಗತಿ.

ಕರ್ಕಾಟಕರಾಶಿ
ಕೆಲಸದ ಒತ್ತಡ ನಿಮ್ಮನ್ನು ಕೆರಳಿಸುತ್ತದೆ, ಅಜ್ಞಾತ ಮೂಲದಿಂದ ಹಣವನ್ನು ಪಡೆಯಬಹುದು, ಆದರೂ ಹಣಕಾಸಿನ ಸಮಸ್ಯೆ ಎದುರಿಸುತ್ತೀರಿ, ಕಲಾತ್ಮಕ ಹಾಗೂ ಸೃಜನಶೀಲ ಸಾಮರ್ಥ್ಯವು ಮೆಚ್ಚುಗೆಗೆ ಪಾತ್ರವಾಗಲಿದೆ, ಒತ್ತಡದ ವೇಳಾಪಟ್ಟಿಯಿಂದ ಸಂಗಾತಿಯ ನಿಮ್ಮ ನಿಷ್ಟೆಯನ್ನು ಅವಮಾನಿಸಬಹುದು.

ಸಿಂಹರಾಶಿ
ನಿಮ್ಮ ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ, ಸ್ನೇಹಿತರೊಂದಿಗೆ ಕಾಲ ಕಳೆಯುವಿರಿ, ಅನಿರೀಕ್ಷಿತ ಲಾಭದಿಂದ ಸಂತಸ ತರಲಿದೆ, ತಂದೆಯಿಂದ ಕಠಿಣ ವರ್ತನೆ ಕಿರಿಕಿರಿಯನ್ನು ಉಂಟು ಮಾಡುತ್ತದೆ, ಪ್ರಯಾಣಿಸುವ ವೇಳೆಯಲ್ಲಿ ಎಚ್ಚರದಿಂದ ಇರಿ, ನಿಮ್ಮ ಸಾಮಗ್ರಿಗಳ ಬಗ್ಗೆ ಬಹಳ ಎಚ್ಚರಿಕೆಯನ್ನು ವಹಿಸಿ, ಊಟದ ವಿಚಾರದಲ್ಲಿ ಎಚ್ಚರಿಕೆಯಿಂದರಿ.

ಕನ್ಯಾರಾಶಿ
ಅತಿಯಾದ ಪ್ರಯಾಣವು ನಿಮ್ಮನ್ನು ಉನ್ಮಾದಕ್ಕೆ ದೂಡುತ್ತದೆ, ಹಣಕಾಸಿನ ಸುಧಾರಣೆ ಕಂಡುಬರಲಿದೆ, ನಿಮ್ಮ ಆಕರ್ಷಣೆ ಮತ್ತು ವ್ಯಕ್ತಿತ್ವದಿಂದ ಹೊಸ ಸ್ನೇಹಿತ ಭೇಟಿ, ವ್ಯಾಪಾರಿಗಳು, ಉದ್ಯಮಿಗಳ ಪಾಲಿಗೆ ಉತ್ತಮವಾದ ದಿನ, ಸಾಮಾಜಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ, ವೈವಾಹಿಕ ಜೀವನವು ಇಂದು ವಿನೋದಮಯವಾಗಿರುತ್ತದೆ, ದಿನಾಂತ್ಯಕ್ಕೆ ಶುಭವಾರ್ತೆ ಕೇಳುವಿರಿ.

ತುಲಾರಾಶಿ
ನೀವಿಂದು ತಮಾಷೆಯ ಮನಸ್ಥಿತಿಯಲ್ಲಿರುತ್ತೀರಿ, ನಿಮಗಿಂದು ಹಣಕಾಸಿನ ಅವಶ್ಯಕತೆಯಿರುತ್ತದೆ, ವೈಯಕ್ತಿಕ ಮಾಹಿತಿಯನ್ನು ಗೌಪ್ಯತೆಯನ್ನು ಬಹಿರಂಗ ಪಡಿಸಬೇಡಿ, ಕಠಿಣ ಪರಿಶ್ರಮ ಇಂದು ಕೆಲಸದಲ್ಲಿ ಲಾಭವನ್ನು ತಂದುಕೊಡಲಿದೆ, ಇತರರನ್ನು ಭೇಟಿಯಾಗುವುದನ್ನು ತಪ್ಪಿಸಿ, ವೈವಾಹಿಕ ಜೀವನವು ನೆಮ್ಮದಿಯಿಂದ ಕೂಡಿರಲಿದೆ, ಹೊಂದಾಣಿಕೆ ಉತ್ತಮ.

ವೃಶ್ಚಿಕರಾಶಿ
ದೈಹಿಕ ಲಾಭಕ್ಕಾಗಿ ಯೋಗ, ಧ್ಯಾನವನ್ನು ಆರಂಭಿಸಿ, ಪ್ರಯಾಣದ ವೇಳೆಯಲ್ಲಿ ಅಮೂಲ್ಯ ವಸ್ತುವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ, ನಿಮ್ಮನ್ನು ತಪ್ಪಾಗಿ ಅರ್ಥೈಯಿಸಿಕೊಳ್ಳುವ ಸಾಧ್ಯತೆಯಿದೆ, ಕುಟುಂಬ ಸದಸ್ಯರ ಜೊತೆ ವಿವಾದ ಉಂಟಾಗುವ ಸಾಧ್ಯತೆಯಿದೆ, ಹಣಕಾಸು ಹಾಗೂ ನಗದು ಹರಿವು ಕಂಡುಬರುತ್ತದೆ, ಬಿಡುವಿನ ವೇಳೆಯಲ್ಲಿ ಇತರರ ಜೊತೆ ಸಮಯವನ್ನು ಕಳೆಯಿರಿ.

ಧನಸುರಾಶಿ
ಆರೋಗ್ಯದ ದೃಷ್ಟಿಯಿಂದ ಉತ್ತಮವಾದ ದಿನ, ಹರ್ಷ ಚಿತ್ತದ ಮನಸ್ಥಿತಿಯು ನಿಮಗೆ ಟಾನಿಕ್‌ ನೀಡುತ್ತದೆ. ಆತ್ಮವಿಶ್ವಾದಿಂದ ಕೆಲಸ ಕಾರ್ಯಗಳಲ್ಲಿ ಅಧಿಕ ಲಾಭ, ಹಣಕಾಸಿನ ಅವಶ್ಯಕತೆ ಕಂಡುಬರಲಿದೆ, ಕುಟುಂಬದ ಅಗತ್ಯತೆಗಾಗಿ ಹೊಂದಿಕೊಳ್ಳದಿರಲು ಯತ್ನಿಸಿ, ಹಳೆಯ ಸ್ನೇಹಿತರ ಜೊತೆ ಮತ್ತೆ ಸ್ನೇಹ ಸಂಬಂಧ ಹೊಂದುವಿರಿ.

ಮಕರರಾಶಿ
ಹಿರಿಯರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿವಹಿಸಿ, ಹಣಕಾಸಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಿರಿ, ಸಂಬಂಧಿಕರಿಂದ ಅನಿರೀಕ್ಷಿತ ಉಡುಗೊರೆಯೊಂದನ್ನು ಪಡೆಯುವಿರಿ, ಬಾಕಿ ಉಳಿದಿರುವ ಕಾರ್ಯವನ್ನು ಇಂದೇ ಮುಗಿಸಲು ಯತ್ನಿಸಿ, ಅಮೂಲ್ಯ ದಾಖಲೆಗಳನ್ನು ಯಾರಿಗೂ ನೀಡಬೇಡಿ, ವೈವಾಹಿಕ ಸಂಬಂಧಗಳಲ್ಲಿ ಬಿರುಕು ಕಾಣಿಸಿಕೊಳ್ಳಲಿದೆ.

ಕುಂಭರಾಶಿ
ಆರೋಗ್ಯದ ವಿಚಾರದಲ್ಲಿ ನೆಮ್ಮದಿ, ಉದ್ಯಮಿಗಳು ಇಂದು ಅಧಿಕ ಲಾಭ ದೊರೆಯಲಿದೆ, ಮಕ್ಕಳೊಂದಿಗೆ ಸಮಯವನ್ನು ಕಳೆಯುವಿರಿ, ಕೌಟುಂಬಿಕ ಪರಿಸ್ಥಿತಿಯಿಂದ ಕೋಪಗೊಳ್ಳಬಹುದು, ಕಠಿಣ ಪರಿಶ್ರಮ ಇಂದು ನಿಮಗೆ ಉತ್ತಮ ಪ್ರತಿಫಲವನ್ನು ನೀಡಲಿದೆ, ಪ್ರಮುಖ ಕೆಲಸ ಕಾರ್ಯಗಳಲ್ಲಿ ಗೆಲುವು, ಆಸ್ತಿ ವಿವಾದ ಬಗೆ ಹರಿಯಲಿದೆ.

ಮೀನರಾಶಿ
ದುಶ್ಚಟಗಳಿಂದ ದೂರವಿರಿ, ನಿಮ್ಮ ಪಾಲಿಗಿಂದು ಅತ್ಯಂತ ಶುಭದಿನ, ಹೊಸ ಹಣಕಾಸಿನ ಯೋಜನೆಗಳು ಲಾಭದಾಯಕವಾಗಲಿದೆ, ಸಾಧಕ ಬಾಧಕಗಳನ್ನು ಎಚ್ಚರಿಕೆಯಿಂದ ಅಳೆಯಿರಿ, ಹೊಸ ಹೂಡಿಕೆ ನಿರ್ಣಾಯಕವಾಗಲಿದೆ, ನೆರೆ ಹೊರೆಯವರಿಂದ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ, ದಿನಾಂತ್ಯಕ್ಕೆ ಶುಭ ಸುದ್ದಿಯೊಂದನ್ನು ಕೇಳುವಿರಿ.

ಇದನ್ನೂ ಓದಿ : ಈ ಮಾತೆಗೆ ಇಲಿಗಳೇ ಮಕ್ಕಳು : ಮೂಷಿಕನನ್ನು ಪೂಜಿಸಿದ್ರೆ ಇಷ್ಟಾರ್ಥ ಸಿದ್ಧಿ

ಇದನ್ನೂ ಓದಿ : ನದಿಯಲ್ಲಿ ನೆಲೆಯೂರಿದ ದುರ್ಗಾಪರಮೇಶ್ವರಿ : ಆದಿ ಕಟೀಲು ದೇವಸ್ಥಾನದ ನಿಮಗೆ ಗೊತ್ತಾ …!

( Horoscope today astrological prediction for September 24)

Comments are closed.