Suparsha Cave Kamalashile : ಜಗತ್ತಿನಲ್ಲಿ ನಾನಾ ರೀತಿಯ ಅಚ್ಚರಿಗಳು, ಪವಾಡಗಳು ನಡೆಯುತ್ತಲೇ ಇರುತ್ತೆ. ಅನಾದಿ ಕಾಲದಿಂದಲೂ ಭಕ್ತರ ಇಷ್ಟಾರ್ಥಗಳನ್ನು ಕರುಣಿಸುತ್ತಾ, ಪವಾಡಗಳನ್ನು ಸೃಷ್ಟಿಸುತ್ತಿದೆ ಕರಾವಳಿ ಹಾಗೂ ಮಲೆನಾಡ ತಪ್ಪಲಿನಲ್ಲಿರುವ ಈ ಗುಹೆ. ಉಡುಪಿ ಜಿಲ್ಲೆಯ ಪವಿತ್ರ ಪುಣ್ಯಕ್ಷೇತ್ರದ ಮೂಲ ನೆಲೆಯಾಗಿರುವ ಸುಪಾರ್ಶ್ಚ ಗುಹೆಯ ಕುರಿತ ವಿಶೇಷ ವರದಿ ಇಲ್ಲಿದೆ.

ಕರ್ನಾಟಕದ ಪವಿತ್ರ ಪುಣ್ಯಕ್ಷೇತ್ರ ಕಮಲಶಿಲೆ. ಕುಬ್ಜಾನದಿಯ ತಟದಲ್ಲಿ ನೆಲೆ ನಿಂತಿರುವ ಬ್ರಾಹ್ಮಿ ದುರ್ಗಾಪರಮೇಶ್ವರಿ ತಾಯಿ ಭಕ್ತರ ಇಷ್ಟಾರ್ಥಗಳನ್ನು ಕರುಣಿಸುತ್ತಿದ್ದಾಳೆ. ಕಮಲಶಿಲೆಗೆ ನಿತ್ಯವೂ ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಇಲ್ಲಿಗೆ ಬರುವ ಭಕ್ತರು ತಪ್ಪದೇ ಭೇಟಿ ಕೊಡಬೇಕಾದ ಮತ್ತೊಂದು ಸ್ಥಳವೇ ಸುಪಾರ್ಶ್ಚ ಗುಹೆ.
ಕಮಲಶಿಲೆ ದೇವಸ್ಥಾನದಿಂದ ಕೇವಲ ಎರಡು ಕಿಲೋ ಮೀಟರ್ ದೂರದಲ್ಲಿರುವ ಈ ಸುಪಾರ್ಶ್ಚ ಗುಹೆಗೆ ಸುಮಾರು ಎರಡರಿಂದ ಮೂರು ಸಾವಿರ ವರ್ಷಗಳ ಇತಿಹಾಸವಿದೆ. ರಾಜನಾಗಿದ ಸುಪಾರ್ಶ್ಚ ಭೇಟೆಯಾಡುತ್ತಾ, ಈ ಗುಹೆಯ ಬಳಿಗೆ ಬಂದಾಗ ಆತ ಇಲ್ಲಿ ಕುಳಿತು ತಪಸ್ಸು ಮಾಡಿದ್ದಾನೆ. ನಂತರದಲ್ಲಿ ಈ ಗುಹೆಗೆ ಸುಪಾರ್ಶ್ಚ ಗುಹೆ ಎಂದು ಕರೆಯುತ್ತಾರೆ.

ದೇವ ನಿರ್ಮಿತವಾಗಿರುವ ಗುಹೆ ನಿಜಕ್ಕೂ ಪವಾಡಗಳನ್ನು ಸೃಷ್ಟಿಸುತ್ತಿದೆ. ಸುಮಾರು ನೂರು ಮೀಟರ್ ದೂರದ ವರೆಗೂ ಕೂಡ ಈ ಗುಹೆಯಲ್ಲಿ ಸಾಗಬಹುದಾಗಿದೆ. ಸುಪಾರ್ಶ್ಚ ಗುಹೆ ಕಮಲಶಿಲೆಯಿಂದ ಕಾಶಿ, ರಾಮೇಶ್ವರಕ್ಕೆ ಸಂಪರ್ಕ ಕಲ್ಪಿಸುತ್ತಂತೆ. ಹಿಂದೆ ಇದೇ ಗುಹೆಯ ಮೂಲಕವೇ ಸಾಗುತ್ತಿದ್ದರು ಅನ್ನೋ ಪ್ರತೀತಿ ಇದೆ.
ಗುಹೆಯ ಒಳಗಡೆ ಸರ್ಪ ತೀರ್ಥ ( ನಾಗತೀರ್ಥ) ಹರಿಯುತ್ತಿದ್ದು, ನಾಗತೀರ್ಥ ಹಾಗೂ ಕುಬ್ಜಾ ನದಿಯ ಸಂಗಮದಲ್ಲಿಯೇ ಬ್ರಾಹ್ಮಿ ದುರ್ಗಾಪರಮೇಶ್ವರಿ ತಾಯಿ ನೆಲೆ ನಿಂತಿದ್ದಾಳೆ. ಇಲ್ಲಿ ಹರಿಯುವ ಸರ್ಪ ತೀರ್ಥ ವರ್ಷದಲ್ಲೊಮ್ಮೆ ತಾಯಿಯ ಸ್ನಾನ ಮಾಡಿಸುತ್ತೆ. ಅನಾದಿ ಕಾಲದಿಂದಲೂ ಈ ವೈಶಿಷ್ಟ್ಯ ನಡೆದುಕೊಂಡು ಬಂದಿದೆ.

ಸುಪಾರ್ಶ್ಚ ಗುಹೆಯಲ್ಲಿ ಲಕ್ಷ್ಮೀ, ಸರಸ್ವತಿ, ಕಾಳಿ ಒಟ್ಟಾಗಿ ನೆಲೆ ನಿಂತಿದ್ದಾರೆ. ಇಲ್ಲಿ ನಾಗದೇವರ ಮೂರ್ತಿಗಳಿದ್ದು, ಹಿಂದೆ ಗರುಡ ಸರ್ಪಯಾಗ ಮಾಡುವ ವೇಳೆಯಲ್ಲಿ ನಾಗ ಈ ಗುಹೆಯೊಳಗೆ ಅವಿತು ಕುಳಿತಿತ್ತು ಎಂದು ಹೇಳಲಾಗುತ್ತಿದೆ. ಇಲ್ಲಿ ನಿತ್ಯವೂ ನಾಗರಾಜನಿಗೆ ಪೂಜೆ ಸಲ್ಲುತ್ತಿದೆ. ಗುಹೆ ಸಂಪೂರ್ಣವಾಗಿ ಜಂಬಿಟ್ಟಿಗೆ ಕಲ್ಲಿನಿಂದ ನಿರ್ಮಾಣವಾಗಿದೆ. ಗುಹೆಯ ಮೇಲ್ಬಾಗದಲ್ಲಿ ಬೃಹತ್ ಗಾತ್ರದ ಮರಗಳಿದ್ದರೂ ಕೂಡ ಮರದ ಬೇರುಗಳು ಗುಹೆಯ ಒಳಗೆ ಕಾಣಸಿಗೋದಿಲ್ಲ.
ಬೃಹತ್ ಗಾತ್ರದ ಮರಗಳ ಬೇರು ಭೂಮಿಯ ಒಳಗೆ ಇರದೇ ಇರುವುದೇ ಮತ್ತೊಂದು ಅಚ್ಚರಿ. ಗುಹೆಯ ಒಳಗೆ ಸಾವಿರಾರು ಬಾವಲಿಗಳು, ಹಾವು ಸೇರಿದಂತೆ ಹಲವು ಸರಿಶ್ರಪಗಳಿವೆ. ಆದರೆ ಇಲ್ಲಿಗೆ ಬರುವ ಭಕ್ತರಿಗೆ ಅವುಗಳು ಎಂದಿಗೂ ತೊಂದರೆಯನ್ನೇ ಕೊಟ್ಟಿಲ್ಲ. ಗುಹೆ ಕಾಡಿನ ಒಳಗಿದ್ದು, ಹುಲಿ, ಚಿರಂತೆ ಸೇರಿದಂತೆ ನಾನಾ ರೀತಿಯ ಕಾಡು ಪ್ರಾಣಿಗಳಿಗೆ ಆದರೆ ಇದುವರೆಗೂ ಯಾರಿಗೂ ಸಮಸ್ಯೆಯನ್ನು ಮಾಡಿದ ಉದಾಹರಣೆಗಳೇ ಇಲ್ಲ
ಇದನ್ನೂ ಓದಿ : Rain Forecast Temple : ಮಳೆ ಬರುವ ಮುನ್ನವೇ ಮುನ್ಸೂಚನೆ ಕೊಡುತ್ತೆ ಈ ದೇವಾಲಯ : ರೈತರ ಬೆಳೆ ಕಾಯುತ್ತಾನೆ ಜಗನ್ನಾಥ

ಕಮಲಶಿಲೆಯ ಆದಿಸ್ಥಳವಾಗಿರುವ ಈ ಗುಹೆಯಲ್ಲಿ ನೆಲೆದಿರುವ ದೇವಿ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಿದ್ದಾಳೆ. ಮಕ್ಕಳಿಲ್ಲದ ಚಿಂತೆಯಲ್ಲಿರುವ ಅದೆಷ್ಟೋ ದಂಪತಿಗಳಿಗೆ ಮಕ್ಕಳ ಭಾಗ್ಯವನ್ನು ಕರುಣಿಸಿದೆ. ಸಮಸ್ಯೆ ಅಂತಾ ಬಂದ ಭಕ್ತರನ್ನು ಈ ತಾಯಿ ಎಂದಿಗೂ ಬರಿಗೈಯಲ್ಲಿ ಕಳುಹಿಸಿಲ್ಲ. ಇಲ್ಲಿ ಭಕ್ತರು ದೇವಿಗೆ ಚಿನ್ನ, ಬೆಳ್ಳಿಯ ಹರಿಕೆಯನ್ನು ಹಾಕುವಂತಿಲ್ಲ, ಕೇವಲ ಮಣ್ಣಿನ ಹರಿಕೆಗೆ ತಾಯಿ ಸಂತೃಪ್ತಳಾಗುತ್ತಾಳೆ.
ಇದನ್ನೂ ಓದಿ : ಕಂಕಣಬಲ, ಸಂತಾನಫಲ ಕರುಣಿಸುತ್ತೆ ಈ ಪುಣ್ಯಕ್ಷೇತ್ರ !
ಕಮಲಶಿಲೆಯಿಂದ ಈ ಗುಹೆ ಕೇವಲ 2 ಕಿಲೋ ಮೀಟರ್ ದೂರದಲ್ಲಿದೆ. ಕುಂದಾಪುರ ಸಿದ್ದಾಪುರ ಮಾರ್ಗವಾಗಿ ಕಮಲಶಿಲೆಗೆ ಸಾಗಬಹುದಾಗಿದ್ದು, ಸಾಕಷ್ಟು ಬಸ್ಸಿನ ಸಂಪರ್ಕವಿದೆ. ಉಡುಪಿ ಜಿಲ್ಲೆಗೆ ಭೇಟಿ ಕೊಡುವ ಪ್ರವಾಸಿಗರು ಒಮ್ಮೆ ಇಲ್ಲಿಗೆ ತಪ್ಪದೇ ಭೇಟಿ ಕೊಡಿ. ಹೆಚ್ಚಿನ ಮಾಹಿತಿಗಾಗಿ : ರಾಘವೇಂದ್ರ ಜೋಗಿ – +91 98803 86458 ಅವರನ್ನು ಸಂಪರ್ಕಿಸಬಹುದಾಗಿದೆ.
Suparsha Cave Near Kamalashile brahmi durga parameshwari temple Kundapura Special Story in Kannada News Next