Rain Forecast Temple : ಮಳೆ ಬರುವ ಮುನ್ನವೇ ಮುನ್ಸೂಚನೆ ಕೊಡುತ್ತೆ ಈ ದೇವಾಲಯ : ರೈತರ ಬೆಳೆ ಕಾಯುತ್ತಾನೆ ಜಗನ್ನಾಥ

ಮಳೆ… ನಮ್ಮ ಜೀವ ಸಂಕುಲಕ್ಕೆ ದೇವರು ಕೊಟ್ಟ ವರ . ಮಳೆ, ನೀರು ಇಲ್ಲದಿದ್ರೆ ಈ ಭೂಮಿಯಲ್ಲಿ ಯಾವ ಜೀವಿನೂ ಬದುಕೋಕೆ ಆಗಲ್ಲ. ರೈತನ ಬೇಸಾಯದಿಂದ ಹಿಡಿದು ನಮಗೆ ಎಲ್ಲದಕ್ಕೂ ನೀರು ಬೇಕು. ಭೂಮಿಗೆ ನೀರಿನ ಮೂಲವೇ ಮಳೆ. ಇಂತಹ ಮಳೆ ಯಾವಾಗ ಬರುತ್ತೆ ಅಂದ್ರೆ ಜೂನ್ ಅಂತ ನೀವು ಹೇಳಬಹುದು. ಆದ್ರೆ ಅದು ಜೂನ್ ನಲ್ಲಿ ಬಂದೇ ಬರುತ್ತೆ ಅಂತ ಹೇಳೋಕ್ಕಾಗಲ್ಲ. ವಿಜ್ಞಾನಿಗಳಿಗೂ ಇವತ್ತನ ವರೆಗೆ ಇದೇ ದಿನ ಇಷ್ಟೇ ಮಳೆ ಬರುತ್ತೆ ಅಂತ ಹೇಳೋಕೆ ಆಗಿಲ್ಲ.ಆದ್ರೆ ಈ ದೇವಾಲಯದಲ್ಲಿ ಮಳೆ ಬರುವ ಮುಂಚೆನೇ ಮಳೆಯ (Rain Forecast Temple ) ಮುನ್ಸೂಚನೆ ಸಿಗುತ್ತೆ. ಅದು ಎಷ್ಟು ಪ್ರಮಾಣದಲ್ಲಿರುತ್ತೆ ಅನ್ನೋ ಬಗ್ಗೆನೂ ಗೊತ್ತಾಗುತ್ತೆ.

ಹೌದು,ಈ ದೇವಾಲಯದ (Rain Forecast Temple) ವಿಶೇಷವೇ ಇದು. ರೈತರ ಪಾಲಿಗೆ ಈ ದೇವಾಲಯ ಆಸ್ಥೆಯ ತಾಣ. ಇಲ್ಲಿ ಸುತ್ತಮುತ್ತಲಿನ ರೈತರು ದೇವರ ಸೂಚನೆ ಸಿಕ್ಕ ನಂತರವೇ ಬೆಳೆ ಬೆಳೆಯುಲು ಮುಂದಾಗುತ್ತಾರೆ. ಇಲ್ಲಿ ಮಳೆ ಬಂದ್ರೆ ಎಷ್ಟು ಜೋರಾಗಿ ಬರುತ್ತೆ ಅಥವಾ ಸ್ವಲ್ಪನೇ ಬರೋದಾ ಅಥವಾ ಈ ಸಾರಿ ಬರಗಾಲ ಬರುತ್ತಾ ಅಂತ ಈ ದೇವಾಲಯ ಹೇಳುತ್ತೆ. ಇಲ್ಲಿ ಮಳೆಯ ಸೂಚನೆಯು ಖುದ್ದು ದೇವರ ಗರ್ಭ ಗೃಹದಲ್ಲೇ ಸಿಗುತ್ತೆ.

ಅಚ್ಚರಿಯಾದರೂ ಸತ್ಯ.. ಇಲ್ಲಿ ಮಳೆಯ ಬರುವ 15 ದಿನ ಮುನ್ನವೇ ದೇವರ ಗರ್ಭಗೃಹದಲ್ಲಿ, ದೇವರ ಮೂರ್ತಿಯ ಮೇಲ್ಬಾಗದ ಕಲ್ಲೊಂದರಿಂದ ನೀರಿನ ಹನಿಗಳು ಬೀಳೋಕೆ ಆರಂಭವಾಗುತ್ತೆ. ಆದ್ರೆ ಯಾವಾಗ ಮಳೆ ಬರೋಕೆ ಶುರುವಾಗುತ್ತೋ ಆಗ ದೇವರ ಮೇಲೆ ಕಲ್ಲಿನಿಂದ ನೀರು ಬೀಳೋದು ನಿಂತು ಹೋಗುತ್ತೆ. ಯಾವಾಗ ದೇವರ ಮೇಲೆ ನೀರು ಬೀಳೋಕೆ ಶುರು ಆಗುತ್ತೋ ಆಗ ಇಲ್ಲಿ ಸುತ್ತಮುತ್ತಲ ಹಳ್ಳಿಯ ರೈತರು ಬೇಸಾಯದ ಚಟುವಟಿಕೆಯನ್ನು ಆರಂಭಿಸುತ್ತಾರೆ.

ಈ ಬಾರಿ ಯಾವ ರೀತಿ ಮಳೆ ಆಗುತ್ತೆ ಅನ್ನೋದು ಕೂಡಾ ಈ ಹನಿಗಳಿಂದ ತಿಳಿಯಲಾಗುತ್ತೆ. ಒಂದು ವೇಳೆ ದೊಡ್ಡ ಹನಿ ನೀರು ಕಲ್ಲಿಂದ ಬೀಳೋಕೆ ಶುರು ಆದರೆ ಆಗ ಜೋರಾಗಿ ಮಳೆ ಬರುತ್ತೆ ಅಂತ. ಕಡಿಮೆ ಪ್ರಮಾಣದಲ್ಲಿ ಹನಿ ಬಿದ್ದರೆ ಕಡಿಮೆ ಮಳೆ ಅಂತ ನಂಬಲಾಗುತ್ತೆ. ಹನಿಯೇ ಬೀಳದೆ ಹೋದರೆ ಬರಗಾಲ ಕಟ್ಟಿಟ್ಟ ಬುತ್ತಿ ಅನ್ನೋದು ಇಲ್ಲಿನ ರೈತರ ನಂಬಿಕೆ. ಈ ವರೆಗೆ ಈ ಮುನ್ಸೂಚನೆಗಳು ಸುಳ್ಳಾಗಿಲ್ಲ ಅಂತಾರೆ ಭಕ್ತರು. ಈ ದೇವಾಲಯದಲ್ಲಿ ಹನಿ ನೀರು ಬಿದ್ರೆ ದೇವಾಲಯದಿಂದ ಸುಮಾರು ೫೦ ಕಿಲೋ ಮೀಟರ್ ವರೆಗೆ ಮಳೆ ಬರುತ್ತೆ ಅಂತಾರೆ ರೈತರು.

ಈ ದೇವಾಲಯ ಬಗ್ಗೆ ಹೇಳೋದಾದ್ರೆ ಈ ದೇವಾಲಯವನ್ನು (Rain Forecast Temple) ದೇವತೆಗಳು ನಿರ್ಮಿಸಿದ್ರು ಅಂತ ಇಲ್ಲಿನ ಸ್ಥಳಪುರಾಣ ಹೇಳುತ್ತೆ. ಭೂಮಿಗೆ ಪ್ರವಾಹ ಬಂದ ವೇಳೆಯಲ್ಲಿ ಜನರಿಗೆ ಎಚ್ಚರಿಕೆ ಕೊಡೋಕೆ ಅಂತನೇ ಈ ದೇವಾಲಯವನ್ನು ನಿರ್ಮಿಸಿದ್ರು ಅಂತ ಇಲ್ಲಿನ ಜನ ನಂಬುತ್ತಾರೆ. ಆದರೆ ವಿಜ್ಞಾನ ಹೇಳುವ ಪ್ರಕಾರ ಈ ದೇವಾಲಯಕ್ಕೆ ಸುಮಾರು 5000 ವರ್ಷಗಳ ಇತಿಹಾಸವಿದೆ.

ಮಾನ್ಸೂನ್ ಪತ್ತರ್:
ಇಡೀ ದೇವಾಲಯವೇ (Rain Forecast Temple) ಕಲ್ಲಿಂದ ನಿರ್ಮಾಣವಾಗಿದ್ರೂ ಈ ಕಲ್ಲಿನಿಂದ ಮಾತ್ರ ಇಲ್ಲಿ ಹನಿ ಬೀಳುತ್ತೆ. ಅನ್ನು ಬಿಟ್ಟು ಯಾವ ಕಲ್ಲಿನಿಂದಲೂ ನೀರಿನ ಹನಿಗಳು ಬೀಳೋದಿಲ್ಲ. ಇನ್ನು ಈ ಕಲ್ಲು ದೇವಾಲಯದ ಹೊರಬಾಗಕ್ಕೆ ಚಾಚಿಲ್ಲ. ಅಥವಾ ಬೇರೆಯಾವುದೇ ಕಡೆಗೂ ಈ ಕಲ್ಲು ಸಂಪರ್ಕ ಹೊಂದಿಲ್ಲ. ಆದರೂ ಇಲ್ಲಿ ಮಳೆಯಾಗುವ ೧೫ ದಿನದ ಮುಂಚೆನೇ ನೀರಿನ ಹನಿಗಳು ಬೀಳೋಕೆ ಶುರು ಆಗುತ್ತೆ . ಈ ಬಗ್ಗೆ ಹಲವು ವಿಜ್ಞಾನಿಗಳು ಕೂಡಾ ಪರೀಕ್ಷೆ ನಡೆಸಿದ್ದಾರೆ. ಆದ್ರೆ ಇದರ ರಹಸ್ಯ ಬೇಧಿಸೋಕೆ ಯಾರಿಂದಲೂ ಸಾಧ್ಯವಾಗಿಲ್ಲ. ಅವರು ಹೇಳೋ ಪ್ರಕಾರ ನಮ್ಮ ಹಿರಿಯರು ಯಾವುದೇ ಹೊಸ ಟೆಕ್ನಾಲಜಿಯನ್ನು ಬಳಸಿ ನಿರ್ಮಿಸಿದ್ದಾರೆ ಅಂತಾರೆ ವಿಜ್ಞಾನಿಗಳು.

ಇದನ್ನೂ ಓದಿ : ಕಂಕಣಬಲ, ಸಂತಾನಫಲ ಕರುಣಿಸುತ್ತೆ ಈ ಪುಣ್ಯಕ್ಷೇತ್ರ !

ಅಂದ ಹಾಗೆ ಈ ದೇವಾಲಯ ಇರೋದು ಉತ್ತರ ಪ್ರದೇಶದ ಕಾನ್ಪುರದಿಂದ 45 ಕಿಲೋ ಮೀಟರ್ ದೂರದಲ್ಲಿರುವ ಭಿತರ್ಗ್ಯಾವ್ ನಲ್ಲಿ. ಪುರಿ ಜಗನ್ನಾಥ ದೇವಾಲಯದಷ್ಟೇ ಪ್ರಸಿದ್ದಿ ಹೊಂದಿರೋ ಜಗನ್ನಾಥ ದೇವಾಲಯವಿದು. ಪುರಿ ಜಗನ್ನಾಥನಂತೆಯೇ ಇದು ಪ್ರಸಿದ್ದಿ ಹೊಂದಿದ್ದು ಈ ದೇವಾಲಯದ ದರ್ಶನ ಮಾಡೋಕೆ ಸಾವಿರಾರು ಮಂದಿ ಬರುತ್ತಾರೆ. ಸಾಧ್ಯವಾದ್ರೆ ನೀವು ಕೂಡಾ ನಮ್ಮ ಹಿರಿಯರ ತಂತ್ರಜ್ಞಾನವನ್ನು ನೋಡೋಕೆ ಒಂದು ಸಾರಿ ಭೇಟಿ ನೀಡಿ

ಇದನ್ನೂ ಓದಿ : ದುರ್ಗಾಪರಮೇಶ್ವರಿಗೆ ಕುಬ್ಜೆಯಿಂದ ಸ್ವಯಂ ಅಭಿಷೇಕ : ಕಮಲಶಿಲೆಯಲ್ಲಿ ನಡೆಯುವ ಪವಾಡ ನಿಮಗೆ ಗೊತ್ತಾ ?

ಇದನ್ನೂ ಓದಿ : ಹೆಚ್ಚು ಸೊಳ್ಳೆ ಕಡಿತಕ್ಕೆ ನಿಮ್ಮರಕ್ತದ ಗ್ರೂಪ್ ಕೂಡ ಕಾರಣ ! ಯಾವ ಬ್ಲಡ್‌ ಗ್ರೂಪಿನವರಿಗೆ ಹೆಚ್ಚು ಸೊಳ್ಳೆ ಕಚ್ಚುತ್ತೆ ಗೊತ್ತಾ ?

( Rain Forecast Temple Kanpur Jagannatha Temple )

Comments are closed.