Elephant shaped tree : ಸೆಲ್ಫಿ ಕೇಂದ್ರವಾಯ್ತು ಹುಬ್ಬಳ್ಳಿಯ ಆನೆ ಆಕೃತಿಯ ಮರ

ಹುಬ್ಬಳ್ಳಿ : ನಮ್ಮ ಸುತ್ತಮತ್ತ ಪ್ರದೇಶದಲ್ಲಿ ಎಷ್ಟೋ ಆಕರ್ಷಣೆಯ ಸ್ಥಳಗಳಿರುತ್ತದೆ. ಆದರೆ ಅದು ನಮಗೆ ಗೊತ್ತಾಗುವುದು ತಡವಾಗಿರುತ್ತದೆ. ಅಂತಹ ಆಕರ್ಷಣೆಯ (Elephant shaped tree ) ಸ್ಥಳ ಹುಬ್ಬಳ್ಳಿ ನಗರದಲ್ಲಿ ಕಂಡು ಬಂದಿದೆ. ಹುಬ್ಬಳ್ಳಿಯ ದಾಜಿಬಾನ್‌ ಪೇಟೆಯಲ್ಲಿರುವ ಮರವೊಂದು ಈಗ ಸ್ಥಳೀಯರ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಈ ಮರದಲ್ಲಿ ಅಂತಹ ಆಕರ್ಷಣೆ ಗುಣ ಏನಿದೆ ಅಂತೀರಾ ? ಆ ಮರ ಆನೆಯ ಆಕೃತಿಯಲ್ಲಿದ್ದು, ಸೆಲ್ಫಿ ಪ್ರಿಯರಿಗೆ ಪೋಟೋ ತೆಗೆದುಕೊಳ್ಳಲು ಉತ್ತಮ ತಾಣವಾಗಿದೆ.

ಈ ಮರವು ಆನೆಯ ಸೊಂಡಿಲ ರೀತಿಯಲ್ಲಿ ಬೆಳೆದಿರುತ್ತದೆ. ಈ ಮರಕ್ಕೆ ಪೂಜೆ ಸಲ್ಲಿಸುವ ಭಕ್ತರು ಒಂದು ಕಡೆಯಾದರೆ, ಈ ಮರದೊಂದಿಗೆ ಸೆಲ್ಫಿ ತೆಗೆದುಕೊಳ್ಳುವವರು ಇಲ್ಲಿಗೆ ಬರುತ್ತಾರೆ. ಅಲ್ಲಿನ ಜನರು ಈ ಮರಕ್ಕೆ ಹೂವು, ಹಣ್ಣುಗಳನ್ನು ಅರ್ಪಿಸಲು ಆರಂಭಿಸಿದ್ದಾರೆ. ಈ ಬೇವಿನ ಮರ ಹಲವು ವರ್ಷಗಳಿಂದ ಇದೆ. ನಂತರ ದಿನಗಳಲ್ಲಿ ಬೆಳೆದು ಅದು ಆನೆಯ ಸೊಂಡಿಲ ಆಕೃತಿ ಪಡೆದಿದ್ದರಿಂದ ಸ್ಥಳೀಯ ಜನರು ಅದಕ್ಕೆ ಕಣ್ಣು ಹಾಗೂ ದಂತವನ್ನು ಬರೆದಿದ್ದಾರೆ. ಕೆಲವು ತಿಂಗಳ ಹಿಂದೆ ಅಷ್ಟೇ ಬಣ್ಣಹಾಕಿದ ನಂತರ ಈ ಮರ ಮತ್ತಷ್ಟು ಜನಪ್ರಿಯತೆಯನ್ನು ಗಳಿಸಿರುತ್ತದೆ. ಆ ಪ್ರದೇಶದಲ್ಲಿ ಹಾದುಹೋಗುವ ಜನರು ವಾಹನ ನಿಲ್ಲಿಸಿ ತಲೆಬಾಗಿ ನಮಸ್ಕರಿಸಿ ಮುಂದೆ ಹೋಗುತ್ತಾರೆ.

ಇದನ್ನೂ ಓದಿ : India’s Longest Train Journey : ಭಾರತದ ಅತಿ ಉದ್ದದ ರೈಲು ಮಾರ್ಗದಲ್ಲಿ ನೀವು ಪ್ರಯಾಣಿಸಿದ್ದೀರಾ?

ಇದನ್ನೂ ಓದಿ : Shabrimala Yatre : ಶಬರಿಮಲೆ ಯಾತ್ರಿಕರಿಗಾಗಿ ಕೊಟ್ಟಾಯಂ ರೈಲು ನಿಲ್ದಾಣದಲ್ಲಿ ಪ್ರಾರಂಭವಾದ ‘ಶಬರಿಮಲೆ ಯಾತ್ರಿಕ ಕೇಂದ್ರ’

ಇದನ್ನೂ ಓದಿ : Winter Tour : ಚಳಿಗಾಲದಲ್ಲಿ ಪ್ರವಾಸಕ್ಕೆ ಹೋಗಬೇಕಾ? ಈ ಸ್ಥಳಗಳಿಗೆ ಖಂಡಿತ ಭೇಟಿ ಕೊಡಿ

ಈ ಮರದ ಕುರಿತು ಅಲ್ಲಿನ ಸ್ಥಳೀಯರು ” ಈ ಮರವನ್ನು ನಾವು ಬಾಲ್ಯದಿಂದಲೂ ನೋಡುತ್ತಿದ್ದು, ಆನೆ ಆಕೃತಿಯನ್ನು ಹೊಂದಿರುವ ಬೇವಿನ ಮರವಾಗಿದ್ದು, ಪಕ್ಕದಲ್ಲೇ ಆಲದ ಮರವೂ ಇದೆ. ಎರಡೂ ಮರಗಳು ಕನಿಷ್ಠ ನೂರು ವರ್ಷಗಳಷ್ಟು ಹಳೆಯದ್ದಾಗಿದೆ. ನಾಲ್ಕು ವರ್ಷಗಳ ಹಿಂದೆಯೂ ಈ ಮರ ಆನೆಯ ಸೊಂಡಿಲ ಆಕೃತಿಯಲ್ಲಿ ಬೆಳೆದಿರುವುದನ್ನು ಯಾರೂ ಗಮನಿಸಿರಲಿಲ್ಲ. ಆದರೆ ಇತ್ತೀಚೆಗೆ ಈ ಪ್ರದೇಶದಲ್ಲಿರುವ ಮರ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದೆ ಎಂದು ಮಾಹಿತಿ ನೀಡಿದ್ದಾರೆ.

The centerpiece of the selfie was an elephant-shaped tree in Hubli

Comments are closed.