ಸೋಮವಾರ, ಏಪ್ರಿಲ್ 28, 2025
HomeSpecial Storytulsi vastu tips : ತುಳಸಿ ಗಿಡದ ಸಮೀಪ ತಪ್ಪಿಯೂ ಈ ವಸ್ತುಗಳನ್ನು ಇಡಬೇಡಿ

tulsi vastu tips : ತುಳಸಿ ಗಿಡದ ಸಮೀಪ ತಪ್ಪಿಯೂ ಈ ವಸ್ತುಗಳನ್ನು ಇಡಬೇಡಿ

- Advertisement -

tulsi vastu tips : ಹಿಂದೂಗಳ ಮನೆ ಅಂದಮೇಲೆ ಅಲ್ಲಿ ತುಳಸಿಗಿಡಗಳು ಇದ್ದೇ ಇರುತ್ತವೆ. ಈ ರೀತಿ ಮನೆಯ ಅಂಗಳದಲ್ಲಿ ತುಳಸಿ ಗಿಡವನ್ನು ನೆಡುವುದು ಅತ್ಯಂತ ಮಂಗಳಕರ ಎಂದು ಪರಿಗಣಿಸಲಾಗಿದೆ. ಧಾರ್ಮಿಕ ರೀತಿಯಲ್ಲಿ ತುಳಸಿಗೆ ಎಷ್ಟು ಬೆಲೆ ಇದೆಯೋ ವೈಜ್ಞಾನಿಕ ದೃಷ್ಟಿಯಿಂದಲೂ ತುಳಸಿಗೆ ಅಷ್ಟೇ ಮಹತ್ವವಿದೆ. ಅಲ್ಲದೇ ತುಳಸಿ ಗಿಡವನ್ನು ಮನೆಯಲ್ಲಿ ಇಡುವುದು ವಾಸ್ತು ಶಾಸ್ತ್ರದಲ್ಲಿ ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗಿದೆ. ಈ ಎಲ್ಲ ಕಾರಣಗಳಿಂದ ಬಹುತೇಕ ಮನೆಗಳಲ್ಲಿ ತುಳಸಿ ಗಿಡವನ್ನು ನೆಡಲಾಗುತ್ತದೆ. ವಿಷ್ಣುವಿಗೆ ತುಳಸಿ ಪ್ರಿಯವಾಗಿದೆ. ಹೀಗಾಗಿ ವಿಷ್ಣುವಿನ ಆರಾಧನೆಯ ವೇಳೆಯಲ್ಲಿ ತುಳಸಿ ಗಿಡವನ್ನು ಬಳಸುತ್ತಾರೆ. ಅಲ್ಲದೇ ತುಳಸಿ ಇರುವ ಮನೆಯಲ್ಲಿ ಲಕ್ಷ್ಮೀಯ ಕೃಪೆ ಇರುತ್ತದೆ ಎಂದು ನಂಬಲಾಗಿದೆ.


ಆದರೆ ತುಳಸಿ ಗಿಡವನ್ನು ಮನೆಯಲ್ಲಿ ಇಡುವ ಮುನ್ನ ನೀವು ಕೆಲವೊಂದು ವಿಚಾರಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಇಲ್ಲವಾದಲ್ಲಿ ಅದು ನಿಮಗೆ ಹಾನಿಯನ್ನುಂಟು ಮಾಡಬಹುದು.


ತುಳಸಿ ಗಿಡವನ್ನು ಯಾವಾಗಲೂ ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ನೆಡಬೇಕು. ತುಳಸಿ ಗಿಡವನ್ನು ತಪ್ಪು ದಿಕ್ಕಿನಲ್ಲಿ ಇಡುವುದರಿಂದ ಯಾವುದೇ ಪ್ರಯೋಜನವಿಲ್ಲ.


ತುಳಸಿ ಗಿಡವನ್ನು ಮನೆಯಲ್ಲಿ ನೆಟ್ಟರೆ ಸಾಲದು, ಅದನ್ನು ಪ್ರತಿನಿತ್ಯವೂ ಪೂಜಿಸಿ ಸೇವೆ ಮಾಡಬೇಕು. ಇದಕ್ಕಾಗಿ ಪ್ರತಿದಿನ ಬೆಳಗ್ಗೆ ಸ್ನಾನ ಮಾಡಿ ತುಳಸಿಗೆ ನೀರು ಅರ್ಪಿಸಿ ಸಂಜೆ ದೀಪ ಹಚ್ಚಬೇಕು.


ತುಳಸಿಗೆ ನೀರನ್ನು ಅರ್ಪಿಸುವಾಗ ಮಹಿಳೆಯರು ಎಂದಿಗೂ ತಮ್ಮ ಕೂದಲನ್ನು ತೆರೆದಿಡಬಾರದು. ಮುತ್ತೈದೆಯರು ತಮ್ಮ ಕೂದಲನ್ನು ಕಟ್ಟಿಕೊಂಡೇ ತುಳಸಿಗೆ ನೀರನ್ನು ಅರ್ಪಿಸಬೇಕು. ಸಾಧ್ಯವಾದರೆ ಹಾಲು ಬೆರೆಸಿದ ನೀರನ್ನು ತುಳಸಿಗೆ ಅರ್ಪಿಸಿ.


ಭಾನುವಾರ ಮತ್ತು ಏಕಾದಶಿಯಂದು ತುಳಸಿಗೆ ನೀರನ್ನು ಅರ್ಪಿಸಬೇಡಿ. ಏಕೆಂದರೆ ಈ ದಿನದಂದು ತುಳಸಿಯು ವಿಷ್ಣುವಿಗಾಗಿ ಉಪವಾಸ ಮಾಡುತ್ತಾಳೆ ಎಂಬ ನಂಬಿಕೆಯಿದೆ.


ತಪ್ಪಿಯೂ ತುಳಸಿ ಗಿಡದ ಸಮೀಪದಲ್ಲಿ ಕಸ, ಕೊಳಕು ಪಾತ್ರೆ. ಪಾದರಕ್ಷೆಗಳು, ಪೊರಕೆಗಳನ್ನು ಇಡಬೇಡಿ. ಅಲ್ಲದೇ ತುಳಸಿ ಗಿಡದ ಮೇಲೆ ಕೊಳಕು ನೀರು ಬೀಳದಂತೆ ಎಚ್ಚರ ವಹಿಸಿ. ಇಲ್ಲವಾದಲ್ಲಿ ನೀವು ಹಣದ ಕೊರತೆಯನ್ನು ಅನುಭವಿಸಬೇಕಾಗಿ ಬರಬಹುದು.

ಇದನ್ನು ಓದಿ :keep money according to vastu : ಸಂಪತ್ತು ಹೆಚ್ಚಲು ಇಲ್ಲಿದೆ ವಾಸ್ತು ಟಿಪ್ಸ್​

ಇದನ್ನೂ ಓದಿ : Mallam Durga Parmeshwari : ತೀರ್ಥಸ್ನಾನ ಮಾಡಿದ್ರೆ ಸಂತಾನ ಭಾಗ್ಯ, ಕಂಕಣ ಭಾಗ್ಯ ಕರುಣಿಸುತ್ತಾಳೆ ಈ ತಾಯಿ

tulsi vastu tips never do these mistakes while keeping basil plant in home

RELATED ARTICLES

Most Popular