Tirupati : ತಿರುಮಲ ತಿರುಪತಿಗೆ 5 ಕೋಟಿ ರೂಪಾಯಿ ವಿದೇಶಿ ಭೂಮಿ ದಾನ

ಇತಿಹಾಸ ಪ್ರಸಿದ್ಧ ತಿರುಪತಿ (Tirupati ) ತಿರುಮಲ ದೇವಸ್ಥಾನವು ಇದೇ ಮೊಟ್ಟ ಮೊದಲ ಬಾರಿಗೆ ವಿದೇಶದಲ್ಲಿಯೂ ಭೂಮಿಯನ್ನು ದಾನವಾಗಿ ಪಡೆಯಲು ಸಿದ್ಧತೆ ನಡೆಸಿದೆ. ಸೀಶೆಲ್ಸ್​​ನಲ್ಲಿ ವಾಸವಿರುವ ಭಾರತೀಯ ಮೂಲದ ವಿದೇಶಿ ನಾಗರಿಕ ರಾಮಕೃಷ್ಣ ಪಿಳ್ಳೈ ಎಂಬವರು ವಿದೇಶಿ ಭೂಮಿಯನ್ನು ತಿರುಪತಿ ತಿರುಮಲನಿಗೆ ದಾನದ ರೂಪದಲ್ಲಿ ನೀಡುವ ಬಗ್ಗೆ ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ.


ತಿರುಪತಿಯ ಸಂಸದ ಡಾ.ಎಂ. ಗುರುಮೂರ್ತಿ ಹಾಗೂ ಗ್ರೂಪ್​​ನ ಉಪಾಧ್ಯಕ್ಷ ಹಾಗೂ ಟಿಟಿಡಿ ಟ್ರಸ್ಟ್​​​ ಬೋರ್ಡ್​ನ ಸದಸ್ಯ ಡಾ. ಎಂ ಗುರುಮೂರ್ತಿ ಮತ್ತು ಗ್ರೂಪ್​ ಉಪಾಧ್ಯಕ್ಷ, ಟಿಟಿಡಿ ಟ್ರಸ್ಟ್​ ಬೋರ್ಡ್​ನ ಸದಸ್ಯ ಡಾ. ಎಸ್​ ಶಂಕರ್​​​ ಚೆನ್ನೈನಲ್ಲಿ ರಾಮಕೃಷ್ಣ ಪಿಳ್ಳೈರನ್ನು ಭೇಟಿಯಾಗಿದ್ದರು. ಈ ವೇಳೆ ರಾಮಕೃಷ್ಣ ಪಿಳ್ಳೈ ವೆಂಕಟೇಶ್ವರ ದೇವಾಲಯ ನಿರ್ಮಿಸಲು 5 ಕೋಟಿ ರೂಪಾಯಿ ಬೆಲೆ ಬಾಳುವ ಭೂಮಿಯನ್ನು ದಾನ ಮಾಡುವ ಪ್ರಸ್ತಾಪ ಮಾಡಿದ್ದಾರೆ.


ತಿರುಪತಿ ತಿರುಮಲ ದೇವಸ್ಥಾನಂಗೆ ನಾನು ಸೀಶೆಲ್ಸ್​ನ ವಿಕ್ಟೋರಿಯಾದಲ್ಲಿರುವ ಸುಮಾರು 5 ಕೋಟಿ ರೂಪಾಯಿ ಬೆಲೆ ಬಾಳುವ ನಾಲ್ಕು ಎಕರೆ ವಿಸ್ತಾರವಾದ ಭೂಮಿಯನ್ನು ದಾನ ಮಾಡಲು ಬಯಸುತ್ತೇನೆ. ಆ ಜಾಗದಲ್ಲಿ ವೆಂಕಟೇಶ್ವರ ದೇವಸ್ಥಾನವನ್ನು ನಿರ್ಮಿಸಬೇಕು ಎಂದು ಟ್ರಸ್ಟ್​ನ್ನು ವಿನಂತಿ ಮಾಡುತ್ತೇನೆ ಎಂದು ರಾಮಕೃಷ್ಣ ಪಿಳ್ಳೈ ಟಿಟಿಡಿಯನ್ನು ಮನವಿ ಮಾಡಿದ್ದಾರೆ.


ಸೀಶೆಲ್ಸ್​​ನಲ್ಲಿ ಹಿಂದೂಗಳು ಬಹು ಸಂಖ್ಯೆಯಲ್ಲಿದ್ದಾರೆ. ಅಲ್ಲಿನ ಹಿಂದೂ ಸಮುದಾಯವು ಗಣೇಶ ಮಂದಿರವನ್ನು ನಿರ್ಮಿಸಿದೆ. ಈ ದೇವಸ್ಥಾನವು ಹೆಚ್ಚಿನ ಸಂಖ್ಯೆಯ ವಿದೇಶಿಗರನ್ನು ತನ್ನತ್ತ ಸೆಳೆಯುವುದು ಗಮನಕ್ಕೆ ಬಂದ ಬಳಿಕ ಅಲ್ಲಿ ವೆಂಕಟೇಶ್ವರ ದೇವಸ್ಥಾನವನ್ನು ನಿರ್ಮಿಸಲು ಬಯಸಿದ್ದಾರೆ ಎನ್ನಲಾಗಿದೆ.

ಇದನ್ನು ಓದಿ : congress leader mallikarjuna kharge : ಇಡಿ ವಿಚಾರಣೆಗೆ ಹಾಜರಾದ ಕಾಂಗ್ರೆಸ್​ ನಾಯಕ ಮಲ್ಲಿಕಾರ್ಜುನ ಖರ್ಗೆ

ಇದನ್ನೂ ಓದಿ : gang rape on girl child : 16 ವರ್ಷದ ಬಾಲಕಿ ಮೇಲೆ 8 ಮಂದಿಯಿಂದ ಗ್ಯಾಂಗ್​ ರೇಪ್​​: ಆರೋಪಿಗಳ ಬಂಧನ

In a first, land in Seychelles offered to Tirupati shrine

Comments are closed.