Vaastu tips for footwear :ಈಗಿನ ಕಾಲದಲ್ಲಿ ಪಾದರಕ್ಷೆಗಳು ಕೇವಲ ಪಾದರಕ್ಷೆಗಳಾಗಿ ಉಳಿದಿಲ್ಲ. ನಿಮ್ಮ ಪಾದರಕ್ಷೆಗಳನ್ನು ನೋಡಿ ನಿಮ್ಮ ವ್ಯಕ್ತಿತ್ವವನ್ನು ಅಳೆಯುವಂತಹ ಜಮಾನ ಇದಾಗಿದೆ. ಚಪ್ಪಲಿಗಳಿಗೆ ನೀವು ಎಷ್ಟೇ ಬೆಲೆ ನೀಡಿದರೂ ಸಹ ಅದನ್ನು ಎಲ್ಲಿಡಬೇಕೋ ಅಲ್ಲೇ ಇಡಬೇಕು. ಮನೆಯಲ್ಲಿ ಪಾದರಕ್ಷೆಗಳನ್ನು ಇಡುವ ಮುನ್ನ ಅದರದ್ದೇ ಆದ ಕೆಲ ನಿಯಮಗಳಿವೆ. ಇದನ್ನು ನೀವು ನಿರ್ಲಕ್ಷಿಸಿದಲ್ಲಿ ಹಲವಾರು ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗಿ ಬರಬಹುದು.
ಈ ದಿನದಂದು ಚಪ್ಪಲಿ ಖರಿದೀಸಲೇಬೇಡಿ :
ಪಾದರಕ್ಷೆಗಳು ಚಂದ ಕಂಡಿತು ಎಂದಕೂಡಲೇ ನಾವದನ್ನು ಖರೀದಿ ಮಾಡಿಬಿಡುತ್ತೇವೆ. ಈಗಂತೂ ಆನ್ಲೈನ್ ಮೂಲಕವೂ ಚಪ್ಪಲಿ ಖರೀದಿ ಮಾಡಬಹುದಾದ ಕಾರಣ ನಾವು ಮನಬಂದ ಹಾಗೆ ಖರೀದಿ ಮಾಡಿ ಬಿಡುತ್ತೇವೆ. ಆದರೆ ವಾಸ್ತು ಪ್ರಕಾರ ಶೂ ,ಚಪ್ಪಲಿಗಳನ್ನು ಖರೀದಿ ಮಾಡಲು ನಿರ್ದಿಷ್ಟವಾದ ದಿನಗಳಿವೆ. ಮಂಗಳವಾರ, ಶನಿವಾರ ಹಾಗೂ ಗ್ರಹಣದಂದು ಚಪ್ಪಲಿ ಖರೀದಿಸಿದರೆ ಆರ್ಥಿಕ ಸಂಕಷ್ಟಕ್ಕೆ ಒಳಗಾಗುವಿರಿ.
ಆಹಾರ ಧಾನ್ಯ ಇರುವಲ್ಲಿ ಚಪ್ಪಲಿ ಧರಿಸಬೇಡಿ :
ಮನೆಯ ಉಗ್ರಾಣಗಳಲ್ಲಿ ಚಪ್ಪಲಿ ಅಥವಾ ಶೂಗಳನ್ನು ಧರಿಸಲೇಬಾರದು. ಆಹಾರ ಪದಾರ್ಥ ಹಾಗೂ ಆಹಾರ ಧಾನ್ಯಗಳನ್ನು ಇಡುವ ಸ್ಥಳದಲ್ಲಿ ನೀವು ಪಾದರಕ್ಷೆ ಧರಿಸಿ ಹೋದರೆ ಅದು ಆಹಾರ ಪದಾರ್ಥಗಳಿಗೆ ಅವಮಾನ ಮಾಡಿದಂತೆ. ಈ ರೀತಿ ಮಾಡುವುದರಿಂದ ಅನ್ನಪೂರ್ಣೆ ಕೋಪಗೊಳ್ಳುತ್ತಾಳೆ.
ಅಡುಗೆ ಮನೆ :
ಮನೆಯಲ್ಲಿ ಅಡುಗೆ ಕೋಣೆಯನ್ನು ಅನ್ನಪೂರ್ಣೆ ನೆಲೆಸಿರುವ ಸ್ಥಾನವೆಂದು ನಂಬಲಾಗುತ್ತದೆ. ಅಗ್ನಿದೇವನೂ ಇಲ್ಲಿ ನೆಲೆಸಿದ್ದಾನೆ ಎಂಬ ನಂಬಿಕೆಯಿದೆ. ಆದರೆ ಅನೇಕಬಾರಿ ಇಲ್ಲಿಗೆ ಕೆಲವರು ಪಾದರಕ್ಷೆಗಳನ್ನು ಧರಿಸಿ ಹೋಗುತ್ತಾರೆ . ಅಡುಗೆ ಮನೆಯನ್ನು ಅತ್ಯಂತ ಪವಿತ್ರ ಸ್ಥಳ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ನೀವು ಅಡುಗೆ ಕೋಣೆಗೆ ಚಪ್ಪಲಿ ಧರಿಸಿ ಹೋಗಲು ನಿಷೇಧವಿದೆ.
ಚಪ್ಪಲಿ ದಾನ
ಹಳೆಯ ಪಾದರಕ್ಷೆ, ಚಪ್ಪಲಿಗಳನ್ನು ಎಸೆಯುವ ಬದಲು ಯಾರಿಗಾದರೂ ದಾನ ಮಾಡುವುದು ಉತ್ತಮ. ಆದರೆ ಎಲ್ಲಾ ದಿನದಂದು ನೀವು ಪಾದರಕ್ಷೆಯನ್ನು ಮಾರುವಂತಿಲ್ಲ. ಹೀಗೆ ಮಾಡುವುದರಿಂದ ನಿಮಗೆ ದುರಾದೃಷ್ಟ ಎದುರಾಗಬಹುದು. ಶನಿವಾರದಂದು ಪಾದರಕ್ಷೆ ದಾನ ಮಾಡಿದರೆ ಅದನ್ನು ಮಂಗಳಕರ ಎಂದು ಹೇಳಲಾಗುತ್ತದೆ.
ಇದನ್ನು ಓದಿ : Sahasra lingeshwara Temple : ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರನ ವೈಭವದ ಬಗ್ಗೆ ಇಲ್ಲಿದೆ ಮಾಹಿತಿ
ಇದನ್ನೂ ಓದಿ : Amruteshwari Temple : ಹಲವು ಮಕ್ಕಳ ತಾಯಿಯ ಮಹಿಮೆ ಅಪಾರ : ಬೇಡಿ ಬಂದವರಿಗೆ ನೀಡುತ್ತಾಳೆ ಸಂತಾನ ಭಾಗ್ಯ
Vaastu tips for footwear : footwear can affect your life , know the rules