Vaastu Tips for Success :ಮನೆಯ ಅಂದವನ್ನು ಹೆಚ್ಚಿಸಬೇಕು ಅಂತಾ ಅನೇಕರು ತಮ್ಮ ಮನೆಯ ಗೋಡೆಗಳಿಗೆ ವಿವಿಧ ಪೇಂಟಿಂಗ್ಸ್ಗಳನ್ನು ಅಂಟಿಸುವುದುಂಟು. ಆದರೆ ಈ ಪೇಂಟಿಂಗ್ಸ್ ಸಹ ನಿಮ್ಮ ಹಣೆಬರಹವನ್ನು ಬದಲಾಯಿಸಬಲ್ಲವು ಅಂದರೆ ನೀವು ನಂಬಲೇಬೇಕು. ಉದಾಹರಣೆಗೆ ಈಗ ನೀವು ಎಷ್ಟೇ ಕಷ್ಟ ಪಟ್ಟು ದುಡಿದರೂ ನಿಮಗೆ ಯಶಸ್ಸು ಎನ್ನುವುದು ಸಿಗುತ್ತಿಲ್ಲ ಅಥವಾ ಸಮಾಜದಲ್ಲಿ ಉತ್ತಮ ಸ್ಥಾನಮಾನ ಸಿಗುತ್ತಿಲ್ಲ ಎಂದಾದರೆ ನಿಮಗೆ ವಾಸ್ತುಶಾಸ್ತ್ರದಲ್ಲಿ ಒಂದು ಉಪಾಯವಿದೆ. ಇದಕ್ಕಾಗಿ ನೀವು ಮಾಡಬೇಕಾದದ್ದು ಇಷ್ಟೇ. ಒಂದು ವಿಶೇಷವಾದ ಪೇಂಟಿಂಗ್ಸ್ನ್ನು ನಿಮ್ಮ ಮನೆಯಲ್ಲಿ ತಂದು ಇರಿಸಿದಲ್ಲಿ ನಿಮಗೆ ಯಾವುದೇ ರೀತಿಯಲ್ಲಿ ಸಮಸ್ಯೆ ಉಂಟಾಗೋದಿಲ್ಲ.
ಹಾಗಾದರೆ ಆ ಚಿತ್ರ ಯಾವುದಪ್ಪಾ ಎಂಬ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಮೂಡಿರುತ್ತದೆ. ಇದಕ್ಕೆ ಉತ್ತರ ಹಕ್ಕಿಗಳ ಚಿತ್ರ. ವಾಸ್ತು ಶಾಸ್ತ್ರವು ಪ್ರತಿಯೊಬ್ಬರ ಜೀವನದಲ್ಲಿಯೂ ಮಹತ್ವದ ಪಾತ್ರವನ್ನು ವಹಿಸುತ್ತದೆ. ನಿಮ್ಮ ಮನೆಯಲ್ಲಿ ಯಾವ್ಯಾವ ವಸ್ತುಗಳು ಇವೆ ಎನ್ನುವುದು ನಿಮ್ಮ ಅದೃಷ್ಟವನ್ನು ನಿರ್ಧರಿಸುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಹಕ್ಕಿಗಳ ಚಿತ್ರವು ಮನೆಯಲ್ಲಿ ಸಕಾರಾತ್ಮಕ ಶಕ್ತಿಯು ನೆಲೆಸುವಂತೆ ಮಾಡುತ್ತದೆ. ಇದರಿಂದ ಮನೆಯ ಸದಸ್ಯರ ಜೀವನದಲ್ಲಿ ಯಶಸ್ಸು ನೆಲೆಸಲಿದೆ.
ಯಶಸ್ಸು ಹಾಗೂ ಪ್ರಖ್ಯಾತಿ ನಿಮಗೆ ಪ್ರಾಪ್ತಿಯಾಗಬೇಕು ಅಂತಾದರೆ ಮನೆಯ ದಕ್ಷಿಣ ದಿಕ್ಕಿನಲ್ಲಿ ಪಕ್ಷಿಯ ಚಿತ್ರವನ್ನು ಇಡುವುದು ಹೆಚ್ಚು ಸೂಕ್ತ. ಏಕೆಂದರೆ ಹಕ್ಕಿಗಳು ಯಶಸ್ಸು, ಖ್ಯಾತಿ ಹಾಗೂ ಬೆಳವಣಿಗೆಯ ಸಂಕೇತವಾಗಿದೆ. ಮನೆಯ ದಕ್ಷಿಣ ಭಾಗದಲ್ಲಿ ನೀವು ಹಕ್ಕಿಯ ಮೂರ್ತಿಯನ್ನು ಕೂಡ ಇಡಬಹುದು. ಅದರಲ್ಲೂ ಫೀನಿಕ್ಸ್ ಹಕ್ಕಿಯು ಎಲ್ಲಕ್ಕಿಂತ ಒಳ್ಳೆಯದು, ಇದರ ಚಿತ್ರವು ನಿಮಗೆ ಯಶಸ್ಸಿನ ಹಾದಿಯಲ್ಲಿ ಉಂಟಾಗುವ ಕಷ್ಟಗಳಿಂದ ನಿಮ್ಮನ್ನು ಪಾರು ಮಾಡುತ್ತದೆ. ವಾಸ್ತವದಲ್ಲಿ ಫೀನಿಕ್ಸ್ ಎಂಬುದು ಒಂದು ಹಕ್ಕಿಯಲ್ಲ. ಇದು ಕೇವಲ ಒಂದು ಕಾಲ್ಪನಿಕ ಚಿತ್ರವಾಗಿದೆ. ಇದನ್ನು ಯಶಸ್ಸಿನ ರೂಪವೆಂದು ಪರಿಗಣಿಸಲಾಗುತ್ತದೆ.
ಇದನ್ನು ಓದಿ : Best Vaastu Tips :ಮಲಗುವ ಕೋಣೆ ಹಾಗೂ ಅಡುಗೆ ಕೋಣೆಯಲ್ಲಿ ಈ ವಸ್ತುಗಳನ್ನು ತಪ್ಪಿಯೂ ಇಡಬೇಡಿ
ಇದನ್ನೂ ಓದಿ : Vaastu Tips Money loss : ಧನಹಾನಿಯಿಂದ ಪಾರಾಗಲು ಮನೆಯಲ್ಲಿ ಈ ಬದಲಾವಣೆಯನ್ನು ಮಾಡಿ
Vaastu Tips for Success : Know why keeping a picture of birds at home brings success