ಮನೆ ಅಂದಮೇಲೆ ಅದು ವಾಸ್ತು ಪ್ರಕಾರವೇ ಇರಬೇಕು. ಮನೆ ವಾಸ್ತು ಪ್ರಕಾರ(Vastu Tips) ಇದ್ದರೆ ಮಾತ್ರ ಕುಟುಂಬಸ್ಥರ ನಡುವೆ ಪ್ರೀತಿ, ವಿಶ್ವಾಸ, ಹೊಂದಾಣಿಕೆಗಳು ನೆಲೆಸುತ್ತದೆ. ಮನೆಯಲ್ಲಿ ಹಣದ ಹರಿವಿರುತ್ತದೆ. ಮನೆಯವರ ಆರೋಗ್ಯ ಕೂಡ ಚೆನ್ನಾಗಿರುತ್ತದೆ. ಆದರೆ ಒಂದು ವೇಳೆ ಮನೆಯಲ್ಲಿ ಚಿಕ್ಕ ವಾಸ್ತು ದೋಷವುಂಟಾದರೂ ಸಹ ಈ ಎಲ್ಲಾ ಲೆಕ್ಕಾಚಾರಗಳು ತಲೆಕೆಳಗಾಗಬಹುದು. ವಾಸ್ತು ಎನ್ನುವುದು ಕೇವಲ ಮನೆಯ ಮುಖ್ಯ ಕೋಣೆಗಳಿಗೆ ಮಾತ್ರ ಸಂಬಂಧಿಸಿದ್ದಲ್ಲ. ಇದು ಶೌಚಾಲಯದಿಂದ ಹಿಡಿದು ಮನೆಯ ಮುಖ್ಯ ದ್ವಾರದವರೆಗೂ ವ್ಯಾಪಿಸಿರುತ್ತದೆ. ಹಾಗಾದರೆ ಶೌಚಾಲಯದಲ್ಲಿ ಯಾವೆಲ್ಲ ರೀತಿಯಲ್ಲಿ ವಾಸ್ತು ಇರಬೇಕು ಎಂಬುದಕ್ಕೆ ಇಲ್ಲಿದೆ ಮಾಹಿತಿ :
ಕೆಲವರು ಮನೆಯ ಉತ್ತರ ದಿಕ್ಕಿನಲ್ಲಿ ಶೌಚಾಲಯವನ್ನು ನಿರ್ಮಿಸಿರುತ್ತಾರೆ. ಉತ್ತರ ದಿಕ್ಕಿನ ಅಧಿಪತಿ ಕುಬೇರನಾಗಿದ್ದಾನೆ. ಹೀಗಾಗಿ ಮನೆಯ ಉತ್ತರ ದಿಕ್ಕಿನಲ್ಲಿ ಶೌಚಾಲವನ್ನು ನಿರ್ಮಾಣ ಮಾಡುವುದು ಖಂಡಿತ ಹಾನಿಕಾರಕವಾಗಿದೆ. ಇದರಿಂದ ಮನೆಯ ಸದಸ್ಯರಿಗೆ ನಾನಾ ಹಾನಿ ಉಂಟಾಗುತ್ತದೆ. ಸ್ವತಂತ್ರ ನಿರ್ಧಾರಗಳನ್ನು ಕೈಗೊಳ್ಳುವ ಸಾಮರ್ಥ್ಯವನ್ನೇ ಮನೆಯ ಸದಸ್ಯರು ಕಳೆದುಕೊಳ್ಳುತ್ತಾರೆ. ಮನೆಯ ಜೀವನವು ಪ್ರೀತಿಯಿಂದ ಇರುವುದಿಲ್ಲ. ಬಂದ ಆದಾಯವನ್ನು ಸದುಪಯೋಗ ಪಡಿಸಿಕೊಳ್ಳಲು ಸಮಸ್ಯೆಯಾಗುತ್ತದೆ. ಮನೆಯಲ್ಲಿ ಕೆಲವರು ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಕಿವಿಯಲ್ಲಿ ಸೋಂಕು ಉಂಟಾಗುತ್ತದೆ.
ಆದರೆ ಅನಿವಾರ್ಯ ಕಾರಣದಿಂದಾಗಿ ಉತ್ತರ ದಿಕ್ಕಿನಲ್ಲಿಯೇ ಶೌಚಾಲಯ ಕಟ್ಟಬೇಕಾದ ಪ್ರಸಂಗ ಎದುರಾದರೆ ಶೌಚಾಲಯದ ಗುಂಡಿಯನ್ನು ವಾಯುವ್ಯ ದಿಕ್ಕಿನಲ್ಲಿ ನಿರ್ಮಿಸಿ. ಶೌಚಾಲಯದ ಗೋಡೆಗೆ ಕಪ್ಪು ಬಣ್ಣವನ್ನು ಬಳಿಯಿರಿ. ರಾತ್ರಿ 11 ಗಂಟೆಯಿಂದ 1 ಗಂಟೆಯವರೆಗೆ ಶೌಚಾಲಯವನ್ನು ಯಾರೂ ಬಳಸದಂತೆ ನೋಡಿಕೊಳ್ಳಿ. ಪ್ರತಿ ಋತುವಿನಲ್ಲೂ ಉತ್ತರ ದಿಕ್ಕಿನಲ್ಲಿ ಬಿಳಿ ಬಣ್ಣದ ಲೋಹದ ಪಾತ್ರೆಯಲ್ಲಿ ಕೃತಕ ಹೂವುಗಳನ್ನು ಇಡಿ.
ಇದನ್ನು ಓದಿ : RCB KGF 2 : ಆರ್ ಸಿ ಬಿ ಅಂಗಳದಲ್ಲಿ ಕೆಜಿಎಫ್-2 ಹವಾ : ಸಿನಿಮಾ ವೀಕ್ಷಿಸಿದ ಕ್ರಿಕೆಟ್ ಟೀಂ
ಇದನ್ನೂ ಓದಿ : Groom Arrest : ತಾಳಿ ಕಟ್ಟುವ ವೇಳೆಯಲ್ಲೇ ಅತ್ಯಾಚಾರ ಕೇಸ್‌ನಲ್ಲಿ ವರ ಅರೆಸ್ಟ್
Vastu Tips: Don’t build toilets in the north direction. Know the disadvantages