Vastu Tips : ಮೊದಲೆಲ್ಲ ಮನೆ ಕಟ್ಟಿದರೆ ಮುಗೀತು. ಬಳಿಕ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುತ್ತಿದ್ದರೇ ಹೊರತು ಅಲಂಕಾರಿಕ ವಸ್ತುಗಳ ಕಡೆಗೆ ಯಾರೂ ಗಮನ ಕೊಡುತ್ತಿರಲಿಲ್ಲ. ಆದರೆ ಈಗ ಹಾಗಲ್ಲ. ಕಾಲ ಬದಲಾಗಿದೆ. ಮನೆಯನ್ನು ಸುಂದರವಾಗಿ ಇಟ್ಟುಕೊಳ್ಳಬೇಕೆಂದು ಜನರು ಅಲಂಕಾರಿಕ ವಸ್ತುಗಳಿಗೆ ಹೆಚ್ಚು ಖರ್ಚು ಮಾಡುತ್ತಾರೆ. ಈ ಅಲಂಕಾರಿಕ ವಸ್ತುಗಳ ಸಾಲಿಗೆ ಲಾಫಿಂಗ್ ಬುದ್ಧ ಕೂಡ ಒಂದು. ಲಾಫಿಂಗ್ ಬುದ್ಧನ ಮೂರ್ತಿಗಳು ಮನೆಯ ಅಲಂಕಾರವನ್ನು ಹೆಚ್ಚಿಸುವುದರ ಜೊತೆಯಲ್ಲಿ ವಾಸ್ತು ಶಾಸ್ತ್ರದ ಕಡೆಯಿಂದಲೂ ಮಹತ್ವದ ಪಾತ್ರವನ್ನು ವಹಿಸುತ್ತದೆ. ಆದರೆ ಈ ಲಾಫಿಂಗ್ ಬುದ್ಧವನ್ನು ಇರಿಸುವ ಮುನ್ನ ಕೆಲವೊಂದು ಮುಖ್ಯ ವಿಚಾರಗಳನ್ನು ನೀವು ಗಮನದಲ್ಲಿಟ್ಟುಕೊಳ್ಳಬೇಕು.

ಲಾಫಿಂಗ್ ಬುದ್ಧನ ಮೂರ್ತಿಯು ಮನೆಯ ಮುಖ್ಯ ದ್ವಾರದಿಂದ 30 ಇಂಚು ಎತ್ತರದಲ್ಲಿ ಇರಬೇಕು. ಹಾಗೂ 32.5 ಇಂಚಿಗಿಂತಲೂ ಹೆಚ್ಚು ಎತ್ತರದಲ್ಲಿ ಇರದಂತೆ ನೋಡಿಕೊಳ್ಳಬೇಕು. ವಿಗ್ರಹದ ಮೂಗು ಮನೆಯ ಯಜಮಾನನ ಎರಡೂ ಕೈಗಳ ಬೆರಳುಗಳಿಗೆ ಸಮನಾಗಿರಬೇಕು ಮತ್ತು ಗರಿಷ್ಠ ಎತ್ತರವು ಮನೆಯ ಯಜಮಾನನ ಕೈಯ ಗಾತ್ರಕ್ಕೆ ಸಮನಾಗಿರಬೇಕು.

ಮುಖ್ಯ ದ್ವಾರದ ಮುಂದೆ ಇಟ್ಟಿರುವ ವಿಗ್ರಹದ ಮುಖವೂ ಮುಖ್ಯ ದ್ವಾರದ ಕಡೆಗೆ ಇರಬೇಕು. ಯಾಕೆಂದರೆ ಬಾಗಿಲು ತೆರೆದ ತಕ್ಷಣ ಯಾರಿಗಾದರೂ ಮೊದಲು ಕಾಣಿಸುವುದು ಲಾಫಿಂಗ್ ಬುದ್ಧನ ವಿಗ್ರಹ. ನಗುವ ಬುದ್ಧನ ಪ್ರತಿಮೆಯನ್ನು ಅಡುಗೆಮನೆ, ಊಟದ ಕೋಣೆ ಅಥವಾ ಮಲಗುವ ಕೋಣೆಯಲ್ಲಿ ಇಡಬಾರದು ಎಂಬುದನ್ನು ನೆನಪಿನಲ್ಲಿಡಿ. ಅಲ್ಲದೆ, ಲಾಫಿಂಗ್ ಬುದ್ಧನ ಮೂರ್ತಿಯನ್ನು ಎಂದಿಗೂ ಪೂಜಿಸಬಾರದು.
ಇದನ್ನು ಓದಿ : vastu tips for sleeping pattern : ಮಲಗುವ ವೇಳೆಯಲ್ಲಿ ಈ ತಪ್ಪುಗಳನ್ನು ಮಾಡಲೇಬೇಡಿ
ಇದನ್ನೂ ಓದಿ : vastu tips : ಪೂರ್ವಜರ ಫೋಟೋಗಳನ್ನು ಯಾವುದೇ ಕಾರಣಕ್ಕೂ ಮನೆಯ ಈ ದಿಕ್ಕಿನಲ್ಲಿಡಬೇಡಿ
Vastu Tips: Don’t keep Laughing Buddha in THESE places for best results