ಮಂಗಳವಾರ, ಏಪ್ರಿಲ್ 29, 2025
HomeSpecial StoryVastu Tips: ಮನೆಯಲ್ಲಿ ಧನಾಗಮನ ಹಾಗೂ ದಾಂಪತ್ಯ ಜೀವನ ಸುಧಾರಣೆಗಾಗಿ ಈ ವಸ್ತುವನ್ನು ಇರಿಸಿ

Vastu Tips: ಮನೆಯಲ್ಲಿ ಧನಾಗಮನ ಹಾಗೂ ದಾಂಪತ್ಯ ಜೀವನ ಸುಧಾರಣೆಗಾಗಿ ಈ ವಸ್ತುವನ್ನು ಇರಿಸಿ

- Advertisement -

Vastu Tips:ಜೀವನದಲ್ಲಿ ಹಣ ಹಾಗೂ ಆರೋಗ್ಯ ಎರಡು ವಿಷಯಗಳಿಗೆ ತುಂಬಾನೇ ಮಹತ್ವವಿದೆ. ಮನೆಯಲ್ಲಿ ಸಂಪತ್ತು ನೆಲೆಸಲಿ ಎಂದು ಹಗಲಿರುಳು ದುಡಿಯುವ ಜನರು ಇದ್ದಾರೆ. ಇದರಿಂದ ಕುಟುಂಬವನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಬಹುದು ಎಂಬ ಯೋಚನೆ ಹಲವರದ್ದು.

ಮನೆಯಲ್ಲಿ ಲಕ್ಷ್ಮಿಯ ಆಶೀರ್ವಾದ ಸದಾ ಇರಲಿ ಎಂದು ಎಲ್ಲರೂ ಬಯಸುತ್ತಾರೆ. ಆದರೆ ಲಕ್ಷಗಟ್ಟಲೆ ಪ್ರಯತ್ನ ಮಾಡಿದರೂ ಸಹ ಕೆಲ ಮನೆಗಳಲ್ಲಿ ಲಕ್ಷ್ಮೀ ನೆಲೆಸುವುದಿಲ್ಲ. ಇದರ ಪರಿಣಾಮವಾಗಿ ಅಂತಹ ಮನೆಗಳಲ್ಲಿ ಸುಖ ಸಂತೋಷ ಕೂಡ ಇರುವುದಿಲ್ಲ. ಇಂತಹ ಸಂದರ್ಭಗಳಲ್ಲಿ ಬೆಳ್ಳಿಯ ನವಿಲನ್ನು ಮನೆಯಲ್ಲಿ ಇಡುವುದು ಸೂಕ್ತ ಎಂದು ಹೇಳುತ್ತೆ ವಾಸ್ತುಶಾಸ್ತ್ರ. ಬೆಳ್ಳಿಯ ನವಿಲು ದೇವತೆಗಳಿಗೂ ಅತ್ಯಂತ ಪ್ರಿಯವಾದ್ದರಿಂದ ಮನೆಯಲ್ಲಿ ದೇವರ ಕೃಪೆ ಹೆಚ್ಚಾಗಿ ಇರುತ್ತದೆ ಎಂದು ನಂಬಲಾಗಿದೆ.

ಬೆಳ್ಳಿ ನವಿಲನ್ನು ಮನೆಯಲ್ಲಿ ಇಡುವುದರಿಂದ ಆರ್ಥಿಕ ಸಮಸ್ಯೆಗಳು ಕ್ರಮೇಣ ಕೊನೆಗೊಳ್ಳುತ್ತವೆ. ಅಷ್ಟೇ ಅಲ್ಲ ವೈವಾಹಿಕ ಜೀವನದಲ್ಲಿ ಸುಖ ಶಾಂತಿ ಕಾಪಾಡಲು ಕೂಡ ಇದನ್ನು ಇಟ್ಟುಕೊಳ್ಳಬಹುದು ಎಂದು ಹೇಳಲಾಗುತ್ತದೆ. ಅಲ್ಲದೆ, ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚುತ್ತದೆ. . ವಾಸ್ತು ಪ್ರಕಾರ, ಬೆಳ್ಳಿ ನವಿಲು ಮನೆಯಲ್ಲಿ ಸಂಪತ್ತನ್ನು ಹೆಚ್ಚಿಸುತ್ತದೆ.

ಒಬ್ಬ ವ್ಯಕ್ತಿಯು ಹಣಕಾಸಿನ ತೊಂದರೆಗಳಿಂದ ಬಳಲುತ್ತಿದ್ದರೆ ಅಂತಹ ಮನೆಗಳಲ್ಲಿ ನರ್ತಿಸುವ ಭಂಗಿಯಲ್ಲಿರುವ ಬೆಳ್ಳಿ ನವಿಲಿನ ಮೂರ್ತಿಯನ್ನು ಇಡಬೇಕು. ಇದರಿಂದಾಗಿ ಆರ್ಥಿಕ ಸಮಸ್ಯೆಗಳು ದೂರಾಗುತ್ತದೆ. ವೈವಾಹಿಕ ಸಂಬಂಧದಲ್ಲಿ ವೈಮನಸ್ಯ ಮೂಡಿದ್ದರೆ ನೀವು ಜೋಡಿ ನವಿಲನ್ನು ಮನೆಯಲ್ಲಿ ತಂದಿಟ್ಟರೆ ದಾಂಪತ್ಯ ಜೀವನ ನೆಮ್ಮದಿಯಿಂದ ಸಾಗಲಿದೆ ಎಂದು ಹೇಳುತ್ತೆ ವಾಸ್ತುಶಾಸ್ತ್ರ .

ಇದನ್ನು ಓದಿ : Puja Vastu Tips : ದೇವರ ಕೋಣೆಯಲ್ಲಿ ಈ ವಸ್ತುಗಳಿದ್ದರೆ ಮಾತ್ರ ಲಕ್ಷ್ಮೀ ನೆಲೆಸುತ್ತಾಳೆ

ಇದನ್ನೂ ಓದಿ : never see these things : ಬೆಳಗ್ಗೆ ಎದ್ದ ತಕ್ಷಣ ಈ ವಸ್ತುಗಳನ್ನು ನೋಡಲೇ ಬೇಡಿ

vastu tips for married life keep silver peacock for happiness and prosperity

RELATED ARTICLES

Most Popular