Hanuman ji Photo : ಯಾವುದೇ ಕಾರಣಕ್ಕೂ ಮನೆಯಲ್ಲಿ ಹನುಮಂತನ ಈ ಫೋಟೋವನ್ನು ಇಡಲೇಬೇಡಿ

Hanuman ji Photo :ಹಿಂದೂ ಧರ್ಮದಲ್ಲಿ ಹನುಮಂತನಿಗೆ ಮಹತ್ವದ ಸ್ಥಾನವಿದೆ. ಅದರಲ್ಲೂ ಯುವಕರು ಹನುಮಂತನನ್ನು ಆರಾಧನೆ ಮಾಡುವುದು ಹೆಚ್ಚು. ಜೀವನದಲ್ಲಿ ಯಾವುದೇ ರೀತಿಯ ಸಂಕಷ್ಟಗಳು ಬಂದರೂ ಸಹ ಅದನ್ನು ಹನುಮಂತ ದೂರ ಮಾಡುತ್ತಾನೆ ಎಂಬ ನಂಬಿಕೆ ಇರುತ್ತದೆ.

ಹನುಮಂತನ ಆರಾಧನೆಯಿಂದ ಮನಸ್ಸಿಗೆ ಶಾಂತಿ ಸಿಗುತ್ತದೆ ಎಂದು ಹೇಳಲಾಗುತ್ತದೆ. ಇದರೊಂದಿಗೆ ಆರ್ಥಿಕ ಮತ್ತು ದೈಹಿಕ ಸಮಸ್ಯೆಗಳೂ ಕೊನೆಗೊಳ್ಳುತ್ತವೆ. ಹನುಮಂತನ ಭಕ್ತರು ಆಂಜನೇಯನನ್ನು ದೇವಸ್ಥಾನದಲ್ಲಿ ಮಾತ್ರವಲ್ಲದೆ ಮನೆಯಲ್ಲಿಯೂ ಪೂಜಿಸುತ್ತಾರೆ. ಇದಕ್ಕಾಗಿ ಮನೆಯ ದೇವಸ್ಥಾನದಲ್ಲಿ ಭಜರಂಗ ಬಲಿಯ ವಿಗ್ರಹ ಅಥವಾ ಚಿತ್ರವನ್ನೂ ಹಾಕುತ್ತಾರೆ. ಆದರೆ ವಾಸ್ತು ಪ್ರಕಾರ ಮನೆಯಲ್ಲಿ ಹನುಮಂತನ ಚಿತ್ರವನ್ನು ಇಡುವಾಗ ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.

ಹನುಮಂತನ ಫೊಟೋದ ವಿಚಾರದಲ್ಲಿ ನೀವು ವಾಸ್ತು ನಿಯಮಗಳನ್ನು ಪಾಲನೆ ಮಾಡದೇ ಇದ್ದಲ್ಲಿ ಮನೆಯಲ್ಲಿ ಆರ್ಥಿಕ ಹಾಗೂ ಕುಟುಂಬಸ್ಥರಲ್ಲಿ ದೈಹಿಕವಾಗಿ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ. ಹಾಗಾದರೆ ಹನುಮಂತನ ಫೋಟೋ ಇಡುವಾಗ ಯಾವೆಲ್ಲ ವಿಚಾರಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂಬುದಕ್ಕೆ ಇಲ್ಲಿದೆ ಮಾಹಿತಿ :

ವಾಸ್ತು ಪ್ರಕಾರ ಆಂಜನೇಯ ಎದೆ ಸೀಳಿರುವ ಫೋಟೋವನ್ನು ಯಾವುದೇ ಕಾರಣಕ್ಕೂ ಮನೆಯಲ್ಲಿ ಇಡಬಾರದು ಎಂದು ನಂಬಲಾಗಿದೆ. ಹನುಮಂತ ಸ್ಥಿರ ಸ್ಥಿತಿಯಲ್ಲಿ ಇರುವಂತಹ ಚಿತ್ರಗಳನ್ನು ಮಾತ್ರ ಮನೆಯಲ್ಲಿ ಇಡಬೇಕು. ಪವನಪುತ್ರ ಆಂಜನೇಯ ಗಾಳಿಯಲ್ಲಿ ಹಾರುತ್ತಿರುವ ಅಥವಾ ಪರ್ವತವನ್ನು ಎತ್ತಿಕೊಂಡಿರುವಂತಹ ಫೋಟೋಗಳನ್ನು ಮನೆಯಲ್ಲಿ ಹಾಕುವುದು ಒಳ್ಳೆಯದಲ್ಲ. ಶ್ರೀರಾಮ ಹಾಗೂ ಲಕ್ಷ್ಮಣರನ್ನು ಭುಜದ ಮೇಲೆ ಹೊತ್ತಿಕೊಂಡಿರುವ ಹನುಮಂತನ ಫೋಟೋವನ್ನೂ ಮನೆಯಲ್ಲಿ ಇಡುವುದು ಒಳ್ಳೆಯದಲ್ಲ ಎಂಬ ನಂಬಿಕೆಯಿದೆ. ಇದರ ಜೊತೆಯಲ್ಲಿ ಲಂಕಾ ದಹನಕ್ಕೆ ಸಂಬಂಧಿಸಿ ಹನುಮಂತನ ಫೋಟೋವನ್ನೂ ಮನೆಯಲ್ಲಿ ಇಡುವುದು ಶುಭವಲ್ಲ ಎಂದು ಹೇಳಲಾಗುತ್ತದೆ. ಇದರಿಂದ ಮನೆಯ ಸಂತೋಷ ಹಾಗೂ ಸಮೃದ್ಧಿಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.

ಆಂಜನೇಯನ ಯಾವ ಫೋಟೋವನ್ನು ಮನೆಯಲ್ಲಿ ಇಡಬಹುದು..?
ವಾಸ್ತು ಪ್ರಕಾರ ನೀವು ಮನೆಯಲ್ಲಿ ಹಳದಿ ಬಟ್ಟೆಯನ್ನು ಧರಿಸಿರುವ ಆಂಜನೇಯನ ಫೋಟೋವನ್ನು ಇಟ್ಟುಕೊಳ್ಳಬಹುದು. ಹಳದಿ ಬಣ್ಣದ ಸಿಂಧೂರವು ಹನುಮಂತನಿಗೆ ಅತ್ಯಂತ ಪ್ರಿಯಕರ, ಇದು ಮನೆಯಲ್ಲಿ ಸಕಾರಾತ್ಮಕ ಪರಿಣಾಮವನ್ನು ಉಂಟು ಮಾಡುತ್ತದೆ.

ಇದನ್ನು ಓದಿ : Puja Vastu Tips : ದೇವರ ಕೋಣೆಯಲ್ಲಿ ಈ ವಸ್ತುಗಳಿದ್ದರೆ ಮಾತ್ರ ಲಕ್ಷ್ಮೀ ನೆಲೆಸುತ್ತಾಳೆ

ಇದನ್ನೂ ಓದಿ : never see these things : ಬೆಳಗ್ಗೆ ಎದ್ದ ತಕ್ಷಣ ಈ ವಸ್ತುಗಳನ್ನು ನೋಡಲೇ ಬೇಡಿ

vastu tips for bajrang bali photo do not keep these type of Hanuman ji Photo at home

Comments are closed.