ಒಂದು ಮನೆಯನ್ನು ನಿರ್ಮಿಸಬೇಕು ಅಂದರೆ ಅಲ್ಲಿ ವಾಸ್ತು ನಿಯಮಗಳನ್ನು ಪಾಲಿಸಲೇಬೇಕು. ವಾಸ್ತು ನಿಯಮಗಳನ್ನು ಪಾಲಿಸದೇ ನೀವು ಮನೆಯನ್ನು ಕಟ್ಟಿದಲ್ಲಿ ಮುಂದೆ ಬಹುದೊಡ್ಡ ಮಟ್ಟದಲ್ಲಿ ಸಮಸ್ಯೆ ಎದುರಿಸಬೇಕಾಗಿ ಬರಬಹುದು. ಆರ್ಥಿಕ ಸಂಕಷ್ಟ ಕೂಡ ಉಂಟಾಗುವ ಸಾಧ್ಯತೆ ಇರುತ್ತದೆ. ನೀವೆಷ್ಟೇ ಕಷ್ಟ ಪಟ್ಟರೂ ಹಣ ನಿಮ್ಮ ಕೈಯಲ್ಲಿ ಉಳಿಯುವುದಿಲ್ಲ. (Vaastu Tips Money loss) ಈ ಎಲ್ಲಾ ತೊಂದರೆಗಳನ್ನು ತೊಡೆದುಹಾಕಬೇಕು ಅಂಧರೆ ಮನೆ ಕಟ್ಟುವಾಗ ವಾಸ್ತು ಪರಿಣಿತರನ್ನು ಸಂಪರ್ಕಿಸಬೇಕು. ಆದರೆ ಹಲವು ಬಾರಿ ಎಷ್ಟೇ ಪ್ರಯತ್ನ ಮಾಡಿದರೂ ಹಣಕ್ಕೆ ಸಂಬಂಧಿಸಿದ ಒಂದಲ್ಲ ಒಂದು ಸಮಸ್ಯೆ ಜನರನ್ನು ಕಾಡುತ್ತಲೇ ಇರುತ್ತದೆ. ಇದಕ್ಕಾಗಿ ವಾಸ್ತು ಶಾಸ್ತ್ರದಲ್ಲಿ ನಿಷಿದ್ಧವೆಂದು ಪರಿಗಣಿಸಲಾದ ವಸ್ತುಗಳ ಬಗ್ಗೆ ಕಾಳಜಿ ವಹಿಸುವುದು ಅವಶ್ಯಕ. ಉದಾಹರಣೆಗೆ ಕೆಲ ವಸ್ತುಗಳನ್ನು ತಪ್ಪು ದಿಕ್ಕಿನಲ್ಲಿ ಮತ್ತು ತಪ್ಪು ಸ್ಥಾನದಲ್ಲಿ ಇಡುವುದರಿಂದಲೂ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ನೀವು ಒಂದು ಅಂಗಡಿಯ ಮಾಲೀಕರಾಗಿದ್ದು ಅಲ್ಲಿ ನಿಮಗೆ ಪದೇ ಪದೇ ನಷ್ಟ ಉಂಟಾಗುತ್ತಿದ್ದರೆ ನೀವು ಇದಕ್ಕಾಗಿ ಒಂದು ಉಪಾಯವನ್ನು ಮಾಡಬಹುದು. ಯಾವುದೇ ವ್ಯಕ್ತಿಗಳಿಗೂ ಕಾಣದಂತಹ ಸ್ಥಳದಲ್ಲಿ ಕಲ್ಲು ಸಕ್ಕರೆ ತುಂಡನ್ನು ಇಡಬೇಕು. ಈ ರೀತಿ ಮಾಡುವುದರಿಂದ ನಿಮ್ಮ ಆರ್ಥಿಕ ಸಮಸ್ಯೆ ಸರಿ ಹೋಗಲಿದೆ.
ಒಂದು ವೇಳೆ ನಿಮ್ಮ ಮನೆಯ ಮುಖ್ಯ ದ್ವಾರವು ಹಾನಿಯಾಗಿದ್ದರೆ ಬಾಗಿಲು ತೆರೆಯುವಾಗ ಅಥವಾ ಹಾಕುವಾರ ಶಬ್ದ ಉಂಟಾದರೆ ಅಥವಾ ಬಾಗಿಲು ಮುಚ್ಚುವಾಗ , ತೆರೆಯುವಾಗ ಸಿಲುಕಿಕೊಂಡರೆ ಈ ಮೂರು ಸಂದರ್ಭಗಳಲ್ಲಿಯೂ ನೀವು ಹಣ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ನಿಮ್ಮ ಮನೆಯಲ್ಲೂ ಇಂತದ್ದೇ ಸಮಸ್ಯೆ ಇದ್ದರೆ ನೀವು ಆದಷ್ಟು ಬೇಗ ಮನೆಯ ಬಾಗಿಲನ್ನು ಸರಿಪಡಿಸಿ.
ನಾವು ಸಣ್ಣ ಸಣ್ಣ ವಿಚಾರಗಳನ್ನೇ ಹೆಚ್ಚಾಗಿ ನಿರ್ಲಕ್ಷಿಸುತ್ತೇವೆ. ಮನೆಯ ಮೇಲ್ಛಾವಣಿಯ ಮೇಲಿನ ತೊಟ್ಟಿಯಿಂದ ನೀರು ತೊಟ್ಟಿಕ್ಕುತ್ತಿದ್ದರೆ ಅಥವಾ ಮನೆಯೊಳಗೆ ಕೆಟ್ಟ ನಲ್ಲಿಯಿಂದ ನೀರು ತೊಟ್ಟಿಕ್ಕುತ್ತಿದ್ದರೆ ಇದು ಕೂಡ ನಿಮ್ಮ ಜೇಬಿಗೆ ಕತ್ತರಿ ಹಾಕಬಹುದು. ನೀರು ಹರಿದಂತೆ ಮನೆಯ ಆದಾಯವು ನೀರಿನಂತೆ ಹರಿಯುತ್ತದೆ. ಮನೆಯನ್ನು ನಿರ್ಮಾಣ ಮಾಡುವಾಗ ನೀರಿನ ಒಳಚರಂಡಿ ಮನೆಯ ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿ ಇರಬೇಕು ಎಂಬುದು ನೆನಪಿನಲ್ಲಿಡಿ.
ಇದನ್ನು ಓದಿ : Career Vaastu Tips: ವೃತ್ತಿ ಜೀವನದಲ್ಲಿ ಯಶಸ್ಸು ಬೇಕೆಂದರೆ ಅನುಸರಿಸಿ ಈ ಸರಳ ಸೂತ್ರ
ಇದನ್ನೂ ಓದಿ : BIG BREAKING : ನನ್ನಮ್ಮ ಸೂಪರ್ಸ್ಟಾರ್ ಖ್ಯಾತಿಯ ಮಗು ಸಮನ್ವಿ ರಸ್ತೆ ಅಪಘಾತದಲ್ಲಿ ಸಾವು
vaastu tips for troubled by money loss