VASTU TIPS :ಮನೆಯ ಪ್ರತಿಯೊಂದು ಮೂಲೆಗೂ ಅದರದ್ದೇ ಆದ ಮಹತ್ವವಿದೆ, ದೇವರ ಕೋಣೆ, ಮಲಗುವ ಕೋಣೆ, ಅಡುಗೆ ಕೋಣೆ ಹೀಗೆ ಪ್ರತಿಯೊಂದು ಕೋಣೆಗಳಿಗೂ ವಾಸ್ತು ಶಾಸ್ತ್ರದಲ್ಲಿ ಅದರದ್ದೇ ಆದ ನಿಯಮಗಳಿವೆ. ನೀವು ವಾಸ್ತು ಶಾಸ್ತ್ರವು ಹೇಳುವಂತೆಯೇ ಸಂಬಂಧಪಟ್ಟ ದಿಕ್ಕಿನಲ್ಲಿಯೇ ಆಯಾ ಕೋಣೆಗಳನ್ನು ನಿರ್ಮಿಸಬೇಕಾಗುತ್ತದೆ. ಅದರಲ್ಲೂ ದೇವರ ಕೋಣೆಯ ವಿಚಾರದಲ್ಲಿ ನೀವು ಇಂಚಿಂಚೂ ಜಾಗರೂಕರಾಗಿರಬೇಕು.
ದೇವರ ಕೋಣೆ ವಿಚಾರಕ್ಕೆ ಬಂದರೆ ನೀವು ಅಲ್ಲಿ ಪ್ರತಿಷ್ಟಾಪಿಸುವ ದೇವರ ವಿಗ್ರಹಗಳು, ಬಳಸುವ ಹೂವುಗಳು. ಪೂಜಾ ಸಾಮಗ್ರಿ ಹೀಗೆ ಸಾಕಷ್ಟು ವಿಚಾರಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಏಕೆಂದರೆ ಪ್ರತಿಯೊಂದರ ಹಿಂದೆಯೂ ವಾಸ್ತು ಶಾಸ್ತ್ರ ಅಡಗಿದೆ. ಎಷ್ಟರ ಮಟ್ಟಿಗೆ ಅಂದರೆ ದೇವರ ಕೋಣೆಗೆ ನೀವು ಹಚ್ಚುವ ಬಣ್ಣ ಕೂಡ ಯಾವುದಾಗಿರಬೇಕೆಂದು ವಾಸ್ತು ಶಾಸ್ತ್ರವೇ ನಿರ್ಧರಿಸುತ್ತದೆ.
ದೇವರ ಕೋಣೆಗೆ ಹೋದ ತಕ್ಷಣ ನಿಮಗೆ ಧನಾತ್ಮಕ ಶಕ್ತಿಯ ಅನುಭವವಾಗುತ್ತದೆ. ಹಾಗೂ ನಕಾರಾತ್ಮಕ ಶಕ್ತಿಗಳು ತನ್ನಿಂದ ತಾನಾಗಿಯೇ ದೂರಾಗುತ್ತದೆ. ದೇವರ ಕೋಣೆಯಲ್ಲಿ ನೀವು ಸಕಾರಾತ್ಮಕ ಶಕ್ತಿಯನ್ನು ಕಾಪಾಡಿಕೊಳ್ಳಬೇಕು ಅಂದರೆ ಪೂಜೆಯ ಗೃಹದಲ್ಲಿ ನೀವು ಸೂಕ್ತವಾದ ಬಣ್ಣವನ್ನು ಆಯ್ಕೆ ಮಾಡುವುದು ತುಂಬಾನೇ ಮುಖ್ಯವಾಗಿದೆ.
ವಾಸ್ತು ಶಾಸ್ತ್ರವು ಹೇಳುವಂತೆ ನೀವು ದೇವರ ಕೋಣೆಯ ಗೋಡೆಗೆ ತಿಳಿ ಹಳದಿ ಬಣ್ಣವನ್ನು ಬಳಕೆ ಮಾಡುವುದು ಮಂಗಳಕರ ಎಂದು ಪರಿಗಣಿಸಲಾಗುತ್ತದೆ. ಹಾಗೂ ದೇವರ ಕೋಣೆಯ ನೆಲಕ್ಕೆ ನೀವು ತಿಳಿ ಹಳದಿ ಅಥವಾ ಬಿಳಿ ಬಣ್ಣದ ಕಲ್ಲನ್ನು ಆಯ್ಕೆ ಮಾಡುವುದು ಉತ್ತಮ. ಈ ಬಣ್ಣಗಳನ್ನು ಆಯ್ಕೆ ಮಾಡುವುದರಿಂದ ನಿಮ್ಮ ಮನೆಯಲ್ಲಿ ಧನಾತ್ಮಕ ಶಕ್ತಿ ನೆಲೆಸಲಿದೆ. ಜೊತೆಗೆ ಮನೆಯಲ್ಲಿ ಶಾಂತಿಯುತ ವಾತಾವರಣ ಇರಲಿದೆ.
vastu tips : using these colors in house of worship positive energy is transmitted
ಇದನ್ನು ಓದಿ : Surya Temple : ಮಣ್ಣಿಗೆ ಒಲಿತಾನೆ ಶಿವ : ಮಣ್ಣಿನ ಗೊಂಬೆಯ ಹರಕೆಯಿಂದ ಈಡೇರುತ್ತೆ ಅಭೀಷ್ಟ
ಇದನ್ನೂ ಓದಿ : Vaastu tips for married Life : ಸುಖವಾದ ದಾಂಪತ್ಯ ಜೀವನಕ್ಕೆ ಇಲ್ಲಿದೆ ನೋಡಿ ವಾಸ್ತು ಟಿಪ್ಸ್