ಸೋಮವಾರ, ಏಪ್ರಿಲ್ 28, 2025
HomeSpecial Storytaamboola prashne :ಏನಿದು ತಾಂಬೂಲ ಪ್ರಶ್ನೆ: ಹೇಗೆ ನಡೆಯುತ್ತೆ ಈ ಶಾಸ್ತ್ರ, ಇಲ್ಲಿದೆ ಮಾಹಿತಿ

taamboola prashne :ಏನಿದು ತಾಂಬೂಲ ಪ್ರಶ್ನೆ: ಹೇಗೆ ನಡೆಯುತ್ತೆ ಈ ಶಾಸ್ತ್ರ, ಇಲ್ಲಿದೆ ಮಾಹಿತಿ

- Advertisement -

taamboola prashne : ಮಂಗಳೂರು ಹೊರವಲಯದಲ್ಲಿರುವ ಮಳಲಿ ಮಸೀದಿಯಲ್ಲಿಂದು ನಡೆದ ತಾಂಬೂಲ ಪ್ರಶ್ನೆಯು ರಾಜ್ಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಕೇರಳದ ಪ್ರಸಿದ್ಧ ಜ್ಯೋತಿಷಿಗಳಾದ ಗೋಪಾಲಕೃಷ್ಣ ಪಣಿಕ್ಕರ್​ ಮಳಲಿ ಮಸೀದಿ ಇರುವ ಜಾಗದಲ್ಲಿ ಹಿಂದೆ ಗುರುಪೀಠವಿದ್ದು ಇದು ಯಾವುದೋ ವಿವಾದದಿಂದಾಗಿ ನಾಶವಾಗಿದೆ. ಆದರೆ ಇದೀಗ ಈ ಜಾಗಕ್ಕೆ ದೈವಿ ಶಕ್ತಿ ಬಂದಿದ್ದು ಪುನರ್​ ಪ್ರತಿಷ್ಠಾಪನಾ ಕಾರ್ಯ ನಡೆಯಲೇಬೇಕು. ಇಲ್ಲವಾದಲ್ಲಿ ಇಡೀ ಊರಿಗೆ ಕೆಡುಕು ಉಂಟಾಗಲಿದೆ ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ. ಈ ವಿಚಾರದ ಬಳಿಕ ಅನೇಕರಲ್ಲಿ ಈ ತಾಂಬುಲ ಪ್ರಶ್ನೆ ಎಂದರೇನು? ಅಷ್ಟಮಂಗಳ, ಕವಡೆ ಪ್ರಶ್ನೆ ಇವೆಲ್ಲ ಹೇಗೆ ನಡೆಯುತ್ತೆ ಎಂಬ ಪ್ರಶ್ನೆ ಅನೇಕರಲ್ಲಿ ಮೂಡಿದೆ.


ದಕ್ಷಿಣಕನ್ನಡ ಹಾಗೂ ಉಡುಪಿ ಭಾಗದಲ್ಲಿ ಈ ತಾಂಬೂಲ, ಅಷ್ಟಮಂಗಳಮ ಆರೂಢ ಪ್ರಶ್ನೆಗಳಿಗೆ ತುಂಬಾನೇ ಮಹತ್ವವಿದೆ. ತಾಂಬೂಲದ ಸಂಖ್ಯೆ, ಸ್ವರೂಪದ ಆಧಾರದಲ್ಲಿ ಪ್ರಶ್ನೆ ಫಲ ಹೇಳುವ ವ್ಯವಸ್ಥೆಯನ್ನು ತಾಂಬೂಲ ಪ್ರಶ್ನೆ ಎಂದು ಹೇಳಲಾಗುತ್ತದೆ. ಪ್ರಶ್ನೆಕರ್ತ ಕೊಡುವ ತಾಂಬೂಲದ ಸಹಾಯದಿಂದ ಶುಭಾ ಶುಭಫಲಗಳನ್ನು ಹೇಳಲಾಗುತ್ತದೆ.


ಮೇಲಿನಿಂದ ಕೆಳಕ್ಕೆ ಕೆಳಗಿನಿಂದ ಮೇಲಕ್ಕೆ ಎಣಿಸಿ ಲಗ್ನಾದಿ ಹನ್ನೆರಡು ಭಾವಗಳ ಕಲ್ಪನೆ ಮಾಡಲಾಗುತ್ತದೆ. ಮೊದಲನೆ ಎಲೆ ಲಗ್ನ, ಎರಡನೆಯದು ಧನಭಾವ, ಮೂರನೆಯದು ಸಹಜ ಭಾವ , ಹನ್ನೆರಡನೆಯ ಅಲೆಯು ವ್ಯಯ ಭಾವವನ್ನು ಸೂಚಿಸುತ್ತದೆ. ಯಾವ ಎಲೆಯು ಬಾಡಿ , ಹರಿದು, ಅಥವಾ ಛಿದ್ರವಾಗಿರುವುದೋ ಆ ಭಾವದ ಫಲಗಳನ್ನು ಅನಿಷ್ಟ ಎಂದು ಪರಿಗಣಿಸಲಾಗುತ್ತದೆ.


ವೀಳ್ಯದೆಲೆಯು ವಿಶಾಲವಾಗಿದ್ದು , ನಿರ್ಮಲವಾಗಿ, ನಳನಳಿಸುವ , ಕಾಂತಿಯುತವಾಗಿ ಇರುತ್ತದೆಯೋ ಆ ಭಾವದ ಫಲ ಶುಭ ವೃದ್ಧಿ ಎಂಬ ನಂಬಿಕೆಯಿದೆ. ಪ್ರಶ್ನೆಕರ್ತನಿಂದ ಕೊಡಲ್ಪಟ್ಟ ವೀಳ್ಯದೆಲೆಗಳ ಸಂಖ್ಯೆಯನ್ನು ಎರಡುಪಟ್ಟು ಮಾಡುವ ಪ್ರಕ್ರಿಯೆ ಕೂಡ ಇದೆ. ಐದರಿಂದ ಭಾಗಾಕಾರ ಮಾಡಿ, ಗುಣನ ಫಲದಲ್ಲಿ 1 ಕೂಡಿಸಿ ಪುನಃ 7 ರಿಂದ ಭಾಗಾಕಾರ ಮಾಡಬೇಕು. ಇಲ್ಲಿ ಶೇಷವು 1 ಉಳಿದರೆ ಸೂರ್ಯ, ಎರಡು ಉಳಿದರೆ ಚಂದ್ರ, ಮೂರು ಉಳಿದರೆ ಶನಿ ಗ್ರಹವು ಉದಯವಾಗಿದೆ ಎಂಬರ್ಥವಿದೆ. ಯಾವ ಗ್ರಹವು ಉದಯವಾಗಿರುವುದೋ ಅದು ಯಾವ ರಾಶಿಯಲ್ಲಿರುವುದೋ ಆ ರಾಶಿ ಪ್ರಶ್ನೆ ಲಗ್ನ ಎಂದು ಪರಿಗಣಿಸಲಾಗುತ್ತದೆ.

ಸೂರ್ಯ ಉದಯವಾದರೆ ದುಃಖದಾಯಕ ಹಾಗೂ ಚಂದ್ರ ಉದಯವಾದರೆ ಸುಖದಾಯಕ ಮತ್ತು ಮಂಗಲ ಉದಯವಾದರೆ ಕಲಹಕಾರಕ .ಬುಧ-ಗುರು ಉದಯವಾದರೆ ಧನದಾಯಕ, ಶುಕ್ರ ಉದಯವಾದರೆ ಇಷ್ಟಾರ್ಥಸಿದ್ಧಿದಾಯಕ ಹಾಗೂ ಶನಿ ಉದಯವಾದರೆ ಪ್ರಶ್ನೆಕರ್ತೃವಾಗಿ ಮೃತ್ಯುದಾಯಕ ಎಂಬ ನಂಬಿಕೆಯಿದೆ.

ಇದನ್ನು ಓದಿ : temple in the malali mosque : ಮಳಲಿ ಮಸೀದಿಯಲ್ಲಿತ್ತು ಹಿಂದೂ ಧಾರ್ಮಿಕ ಸ್ಥಳ : ತಾಂಬೂಲ ಪ್ರಶ್ನೆಯಲ್ಲಿ ಉತ್ತರ

ಇದನ್ನೂ ಓದಿ : IPL Crickter Umran Mailk ಭರವಸೆಯ ದ್ರುವತಾರೆ ಉಮ್ರಾನ್ ಮಲ್ಲಿಕ್

what is taamboola prashne, here is the complete details

RELATED ARTICLES

Most Popular