baraguru ramachandrappa : ಪಠ್ಯದಲ್ಲಿ ಕೇಸರಿಕರಣ, ಕಾಂಗ್ರೆಸ್ಸೀಕರಣ ನೋಡಬೇಡಿ : ಬರಗೂರು ರಾಮಚಂದ್ರಪ್ಪ ಕಿವಿಮಾತು

ಬೆಂಗಳೂರು : baraguru ramachandrappa : ರಾಜ್ಯದಲ್ಲಿ ಪಠ್ಯ ಪುಸ್ತಕದ ವಿವಾದ ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ತಿದೆ. ಪಠ್ಯ ಪುಸ್ತಕದ ವಿಚಾರವಾಗಿ ರಾಜ್ಯದಲ್ಲಿ ಪರ – ವಿರೋಧಗಳ ಚರ್ಚೆಯು ಜೋರಾಗಿರುವ ಬೆನ್ನಲ್ಲೇ ಕಾಂಗ್ರೆಸ್​ ಸರ್ಕಾರದ ಅವಧಿಯಲ್ಲಿ ಪಠ್ಯ ಪರಿಷ್ಕರಣೆ ಸಮಿತಿ ಮುಖ್ಯಸ್ಥರಾಗಿದ್ದ ಬರಗೂರು ರಾಮಚಂದ್ರಪ್ಪ ಪಂಥ ಪೂರ್ವಾಗ್ರಹವಿಲ್ಲದೆ, ಪಕ್ಷ ಪೂರ್ವಾಗ್ರಹವಿಲ್ಲದೆ ಪುಸ್ತಕಗಳನ್ನು ಪರಿಷ್ಕರಣೆ ಮಾಡಿದ್ದೇವೆ ಎಂದು ಹೇಳಿದ್ದಾರೆ.


ಬೆಂಗಳೂರಿನಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು, ಶಿಕ್ಷಣ ಕ್ಷೇತ್ರ ಹಾಗೂ ಪಠ್ಯ ಪುಸ್ತಕ ವಿಚಾರದಲ್ಲಿ ಗೊಂದಲ ಮೂಡಬಾರದೆಂದು ನಾನು ಕೆಲವು ವಿಚಾರಗಳ ಬಗ್ಗೆ ಸ್ಪಷ್ಟನೆ ನೀಡಲು ಇಚ್ಛಿಸುತ್ತೇನೆ. ನಾನು ಇಲ್ಲಿಯವರೆಗೆ ಟೀಕಾಕಾರರಿಗೆ ಉತ್ತರ ನೀಡಲು ಹೋಗಿಲ್ಲ. ಆದರೆ ಇದೀಗ ಸ್ಪಷ್ಟನೆ ರೂಪದಲ್ಲಿ ಕೆಲವೊಂದು ವಿಚಾರಗಳನ್ನು ಮನವರಿಕೆ ಮಾಡಬೇಕಾಗಿ ಬಂದಿದೆ. ನಮಗಿಂತ ಹಿಂದೆ ಪಠ್ಯ ಪುಸ್ತಕ ರಚನೆ ಮಾಡಿದವರ ಬಗ್ಗೆ ನಾನು ಎಲ್ಲಿಯೂ ಟೀಕೆ ಮಾಡಿರಲಿಲ್ಲ. 2014ರಲ್ಲಿ ಅಂದಿನ ರಾಜ್ಯದ ಸಿಎಂ ವ್ಯಕ್ತಿತ್ವ ವಿಕಸನ, ವೈಚಾರಿಕ ಮನೋಭಾವ ಹಾಗೂ ರಾಷ್ಟ್ರೀಯ ಬದ್ಧತೆಗಳನ್ನು ಗಮನದಲ್ಲಿಟ್ಟುಕೊಂಡು ತಜ್ಞರ ಸಮಿತಿಯನ್ನು ರಚನೆ ಮಾಡಿತ್ತು.ಅಂದಿನ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ನನಗೆ ಸರ್ವಾಧ್ಯಕ್ಷರ ಸ್ಥಾನ ಅಲಂಕರಿಸುವಂತೆ ಹೇಳಿದ್ದರು. ನಾವು ಒಟ್ಟು 172 ಮಂದಿ ಪಠ್ಯ ಪುಸ್ತಕ ರಚನೆಯಲ್ಲಿ ಕೆಲಸ ಮಾಡಿದ್ದೇವೆ. ನಾವು ಪಕ್ಷದ ಮುಖ ನೋಡಿರಲಿಲ್ಲ ಎಂದು ಹೇಳಿದ್ದಾರೆ.


ಪಠ್ಯ ಪುಸ್ತಕಗಳಲ್ಲಿ ಕೇಸರಿಕರಣ ಅಥವಾ ಕಾಂಗ್ರೆಸ್ಸೀಕರಣ ಎನ್ನುವುದು ಬರುವುದಿಲ್ಲ. ನಾನು ಈ ಹಿಂದೆಯೂ ಹೇಳಿದ್ದೆ. ಈಗಲೂ ಹೇಳುತ್ತಿದ್ದೇನೆ. ಪಠ್ಯ ಪುಸ್ತಕಗಳು ಪಕ್ಷದ ಪುಸ್ತಕಗಳಲ್ಲ.ಪಕ್ಷಕ್ಕೂ ಮೀರಿ ನಾವು ಮಕ್ಕಳಿಗೆ ಯಾವ ವಿಚಾರ ಬೇಕು ಎಂಬುದರ ಬಗ್ಗೆ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ನಾವು ಅಂದು 30ಕ್ಕೂ ಅಧಿಕ ಸಭೆಗಳನ್ನು ನಡೆಸಿ ಪಠ್ಯಗಳನ್ನು ತಯಾರಿಸಿದ್ದೇವೆ. ಸಂವಿಧಾನದ ಆಶಯಗಳಿಗೆ ಬದ್ಧರಾಗಿಯೇ ನಾವು ಪಠ್ಯ ಪುಸ್ತಕಗಳನ್ನು ತಯಾರಿಸಿದ್ದೆವು ಎಂದು ಹೇಳಿದ್ದಾರೆ .

ಇದನ್ನು ಓದಿ : young woman raped : ತಲೆಗೆ ಗನ್​ಪಾಯಿಂಟ್​ ಇಟ್ಟು ಯುವತಿ ಮೇಲೆ ಮನೆ ಮಾಲೀಕನಿಂದ ಅತ್ಯಾಚಾರ

ಇದನ್ನೂ ಓದಿ : Tilak Varma : IPL ಮೂಲಕ ಕನಸು ಬೆನ್ನತ್ತಿರುವ ಯುವ ಆಟಗಾರ ತಿಲಕ್ ವರ್ಮ

baraguru ramachandrappa reaction about to minister nagesh statement om school text books

Comments are closed.