Woman Grows Biz to Rs 1 Crore : ಮನಸ್ಸಿದ್ದಲ್ಲಿ ಮಾರ್ಗವಿದೆ ಎಂಬ ಮಾತನ್ನು ಕೇಳಿರುತ್ತೀರಿ. ಆದರೆ ಇದೇ ರೀತಿಯಲ್ಲಿ ಜೀವನ ನಡೆಸಿದರೆ ಯಶಸ್ಸು ಖಂಡಿತವಾಗಿಯೂ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ ಎಂಬ ಮಾತಿಗೆ ಇಲ್ಲೊಬ್ಬ ಮಹಿಳೆ ಪ್ರತ್ಯಕ್ಷ ಸಾಕ್ಷಿಯಾಗಿ ನಿಂತಿದ್ದಾರೆ. ಮಹಿಳೆಯು ಮನಸ್ಸು ಮಾಡಿದರೆ ಆಕೆ ಸಮಾಜದಲ್ಲಿಯೂ ಏನನ್ನಾದರೂ ಸಾಧಿಸಬಲ್ಲಳು ಎಂಬುದನ್ನು ಮಹಾರಾಷ್ಟ್ರದ ಮಹಿಳೆಯೊಬ್ಬರು ತೋರಿಸಿಕೊಟ್ಟಿದ್ದಾರೆ.
ಭೌತಶಾಸ್ತ್ರ ವಿಭಾಗದಲ್ಲಿ ಪದವಿ ಪಡೆದಿದ್ದ ಮಹಾರಾಷ್ಟ್ರದ ಥಾಣೆಯ ಲಲಿತಾ ಪಾಟೀಲ್ ಇದೀಗ ಉದ್ಯಮಿಯಾಗಿ ಯಶಸ್ಸನ್ನು ಸಾಧಿಸಿದ್ದಾರೆ. ಅಂದಹಾಗೆ ಇವರು ಉದ್ಯಮವನ್ನು ಆರಂಭಿಸಲು ಹೂಡಿಕೆ ಮಾಡಿದ್ದು ಲಕ್ಷಗಟ್ಟಲೇ ಹಣವನ್ನಲ್ಲ. ಕೇವಲ 2000 ರೂಪಾಯಿಯಿಂದ ಹೂಡಿಕೆ ಮಾಡಿದ ಉದ್ಯಮದಿಂದ ಲಲಿತಾ ಪಾಟೀಲ್ ಇಂದು ಕೋಟಿ ಕೋಟಿ ಹಣವನ್ನು ಗಳಿಸುತ್ತಿದ್ದಾರೆ.
ಪದವಿ ವ್ಯಾಸಂಗವನ್ನು ಪೂರ್ಣಗೊಳಿಸಿದ್ದ ಲಲಿತಾ ಪಾಟೀಲ್ ಮೊದಲು ಮಕ್ಕಳಿಗೆ ಟ್ಯೂಷನ್ ಹೇಳಲು ಆರಂಭಿಸಿದರು. ಆದರೆ ಈ ಕೆಲಸದಲ್ಲಿ ಅವರಿಗೆ ಅಂದುಕೊಂಡ ಲಾಭ ಸಿಗಲಿಲ್ಲ. ಹೀಗಾಗಿ ಫಾರ್ಮಸಿ ಕಂಪನಿಗಳಿಗೆ ಔಷಧಿ ಮಾರಾಟ ಮಾಡಲು ಆರಂಭಿಸಿದರು. ಆದರೆ ಈ ಕೆಲಸವು ಅವರಿಗೆ ಸಮಾಧಾನಕರ ಎನಿಸಲಿಲ್ಲ. ಕೊನೆಗೆ ಸಾಕಷ್ಟು ಯೋಚನೆ ಮಾಡಿ ಮನೆಯಲ್ಲಿಯೇ ಟಿಫಿನ್ ವ್ಯವಹಾರ ನಡೆಸುವ ನಿರ್ಧಾರಕ್ಕೆ ಲಲಿತಾ ಪಾಟೀಲ್ ಬಂದರು. 2000 ರೂಪಾಯಿಗಳಲ್ಲಿ ಅವರು ಟಿಫಿನ್ ಬಾಕ್ಸ್ಗಳನ್ನು ಖರೀದಿ ಮಾಡಿ ಬಳಿಕ ಕರಪತ್ರಗಳನ್ನು ಅಂಟಿಸಿ 2016ರಲ್ಲಿ ಈ ಹೊಸ ವ್ಯವಹಾರಕ್ಕೆ ಕೈ ಹಾಕಿಯೇ ಬಿಟ್ಟರು.
ಗ್ಯಾಸ್ ಏಜೆನ್ಸಿಯನ್ನು ನಡೆಸುತ್ತಿದ್ದ ವ್ಯಕ್ತಿಯ ಪತ್ನಿಯಾಗಿದ್ದ ಲಲಿತಾ ಪಾಟೀಲ್ಗೆ ಜೀವನವನ್ನು ನಡೆಸಲು ಪರ್ಯಾಯ ಆದಾಯದ ಮೂಲವೊಂದು ಬೇಕಿತ್ತು. ಭೌತಶಾಸ್ತ್ರದಲ್ಲಿ ಪದವಿ ಎಂಬುದನ್ನು ಬಿಟ್ಟರೆ ಲಲಿತಾ ಬಳಿ ಇದ್ದ ಮತ್ತೊಂದು ಪ್ರತಿಭೆ ಎಂದರೆ ಅಡುಗೆ ಮಾಡುವುದು. ಆಗಾಗ ಕುಟುಂಬಸ್ಥರಿಂದ ಹಾಗೂ ಸ್ನೇಹಿತರಿಂದ ಕೈ ರುಚಿಯ ಬಗ್ಗೆ ಒಳ್ಳೆಯ ಅಭಿಪ್ರಾಯಗಳನ್ನು ಕೇಳಿದ್ದ ಲಲಿತಾ ಕೊನೆಗೆ ಅದನ್ನೇ ತಮ್ಮ ವೃತ್ತಿಯನ್ನಾಗಿ ಆಯ್ಕೆ ಮಾಡಿಕೊಂಡರು. ಫುಡ್ ಲೈಸೆನ್ಸ್ ಪಡೆದುಕೊಂಡು ಘರಾಚಿ ಅಥವನ್ ಅಂದರೆ ಮನೆಯ ನೆನಪುಗಳು ಎಂಬ ಟಿಫಿನ್ ಸೇವೆಯನ್ನು ಆರಂಭಿಸಿಯೇ ಬಿಟ್ಟರು. ಇದೀಗ ತಮ್ಮ ಉದ್ಯಮದಲ್ಲಿ ಯಶಸ್ಸು ಕಂಡಿರುವ ಲಲಿತಾ ಪಾಟೀಲ್ ಇದೇ ಟಿಫಿನ್ ಸೆಂಟರ್ನಿಂದ ಕೋಟಿ ಕೋಟಿ ರೂಪಾಯಿ ಆದಾಯ ಗಳಿಸುತ್ತಿದ್ದಾರೆ.
ಇದನ್ನು ಓದಿ : ಹೆಬ್ರಿಯ ಮನೆಯಲ್ಲಿ ಅನುಮಾನಾಸ್ಪದವಾಗಿ ತಾಯಿ, ಮಗಳ ಮೃತದೇಹ ಪತ್ತೆ : ಕೊಲೆ ಶಂಕೆ
With Rs 2000 & Tasty Home Food for Those Away from Home, Woman Grows Biz to Rs 1 Crore