MLC Election : ಎಂಎಲ್​ಸಿ ಚುನಾವಣೆಗೆ ಮುಹೂರ್ತ ಫಿಕ್ಸ್​ : ಜೂ.3ರಂದು ಚುನಾವಣೆ, ಅಂದೇ ಫಲಿತಾಂಶ

ಬೆಂಗಳೂರು :MLC Election: ಮುಂದಿನ ತಿಂಗಳು 14ನೇ ತಾರೀಖಿನಂದು ಕೊನೆಗೊಳ್ಳಲಿರುವ ರಾಜ್ಯದ ವಿಧಾನಪರಿಷತ್​​ ಸ್ಥಾನಗಳಿಗೆ ಚುನಾವಣಾ ಆಯೋಗವು ಚುನಾವಣೆಗಳನ್ನು ನಡೆಸಲು ದಿನಾಂಕವನ್ನು ಪ್ರಕಟಿಸಿದೆ. ಹಾಲಿ ಇರುವ ವಿಧಾನ ಪರಿಷತ್​ ಸ್ಥಾನಗಳ ಅಧಿಕಾರಾವಧಿಯು ಜೂನ್​ 14ರಂದು ಕೊನೆಗೊಳ್ಳಲಿದೆ. ಹಾಗೂ ಹೊಸ ಸ್ಥಾನಗಳಿಗೆ ಜೂನ್​ ಮೂರನೇ ತಾರೀಖಿನಂದು ಚುನಾವಣೆಯು ನಡೆಯಲಿದೆ.


ಮೇ 15ರಂದು ಚುನಾವಣಾ ಅಧಿಸೂಚನೆ ಪ್ರಕಟಿಸಲಾಗುತ್ತದೆ. ಇದೇ ತಿಂಗಳ 24ರಂದು ನಾಮಪತ್ರ ಸಲ್ಲಿಕೆ ಮಾಡಲು ಕೊನೆಯ ದಿನಾಂಕವಾಗಿದೆ. ಮೇ 25ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರ ವಾಪಸ್ ಪಡೆಯಲು ಮೇ 27 ಕೊನೆಯ ದಿನಾಂಕವಾಗಿದೆ.ಇದಾದ ಬಳಿಕ ಜೂನ್​ ಮೂರನೇ ತಾರೀಖಿನಂದು ಬೆಳಗ್ಗೆ 9 ರಿಂದ ಸಂಜೆ 4 ಗಂಟೆಯವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ. ಅದೇ ದಿನ ಸಂಜೆ ಐದು ಗಂಟೆಗೆ ಮತ ಎಣಿಕೆ ಮಾಡಿ ಫಲಿತಾಂಶ ಘೋಷಣೆ ಮಾಡಲಾಗುತ್ತದೆ. ಜೂನ್​ ಆರರ ವೇಳೆಗೆ ಚುನಾವಣಾ ಕಾರ್ಯಗಳು ಸಂಪೂರ್ಣವಾಗಿ ಪೂರ್ಣಗೊಳ್ಳಲಿವೆ.


ಪ್ರಸ್ತುತ ರಾಜ್ಯದ ವಿಧಾನಪರಿಷತ್​ ಸದಸ್ಯರಾಗಿ ಲೇಹರ್​ ಸಿಂಗ್​, ಲಕ್ಷ್ಮಣ ಸವದಿ, ನಾರಾಯಣ ಸ್ವಾಮಿ ಕೆ.ವಿ, ರಾಮಪ್ಪ ತಿಮ್ಮಾಪೂರ್​, ವೀಣಾ ಅಚ್ಚಯ್ಯ ಎಸ್​, ಅಲ್ಲಂ ವೀರಭದ್ರಪ್ಪ, ಹೆಚ್​.ಎಂ ರಮೇಶ ಗೌಡ ಇದ್ದಾರೆ. ಇವರೆಲ್ಲರ ಅಧಿಕಾರಾವಧಿಯು ಜೂನ್​ 14ರಂದು ಕೊನೆಗೊಳ್ಳಲಿದೆ.

ಇದನ್ನು ಓದಿ : ಹೆಬ್ರಿಯ ಮನೆಯಲ್ಲಿ ಅನುಮಾನಾಸ್ಪದವಾಗಿ ತಾಯಿ, ಮಗಳ ಮೃತದೇಹ ಪತ್ತೆ : ಕೊಲೆ ಶಂಕೆ

ಇದನ್ನೂ ಓದಿ : three died in ksrtc bus and car collision : ಸರ್ಕಾರಿ ಬಸ್​ಗೆ ಕಾರು ಡಿಕ್ಕಿ : ಭಯಾನಕ ಅಪಘಾತದಲ್ಲಿ ಆರು ತಿಂಗಳ ಮಗು ಸೇರಿದಂತೆ ಮೂವರು ಸಾವು

MLC Election Date Announced

Comments are closed.