ಇಲ್ಲಿ ಪುರುಷರು ಮಾತಾಡೋ ಭಾಷೆಯನ್ನು ಮಹಿಳೆಯರು ಮಾತಾಡಲ್ಲ ! ಇಬ್ಬರಿಗೂ ಇದೆ ಪ್ರತ್ಯೇಕ ಭಾಷೆ, ಅಷ್ಟಕ್ಕೂ ಇದು ಎಲ್ಲಿ ಗೊತ್ತಾ ?

ನೈಜೀರಿಯಾ : ಸಂವಹನಕ್ಕೆ ಭಾಷೆ ಅತ್ಯಂತ್ರ ಪ್ರಾಮುಖ್ಯ. ಭಾಷಾ ಜ್ಞಾನ ವಿಲ್ಲದಿದ್ರೆ ಇಂದಿನ ಕಾಲದಲ್ಲ ಬದುಕೋದೆ ಕಷ್ಟ ಸಾಧ್ಯ. ಆದ್ರೆ ಈ ದೇಶದಲ್ಲಿನ ಜನರೇ ವಿಚಿತ್ರ, ವಿಭಿನ್ನ. ಇಲ್ಲಿ ಮಹಿಳೆಯರು ಮಾತನಾಡೋ ಭಾಷೆಯನ್ನು, ಪುರುಷರು ಮಾತನಾಡೋದಿಲ್ಲ. ಇಬ್ಬರೂ ಪ್ರತ್ಯೇಕ ಭಾಷೆ ಮಾತನಾಡುತ್ತಾರೆ. ಅಷ್ಟಕ್ಕೂ ಅಲ್ಲಿನ ಜನರ ಬದುಕು ಹೇಗಿದೆ ಅನ್ನೋದೇ ಕುತೂಹಲ.

ವಿಶ್ವದಲ್ಲಿ ಒಟ್ಟು 6,500 ಭಾಷೆಗಳು ಅಸ್ತಿತ್ವದಲ್ಲಿದೆ ಎಂದು ಹೇಳಲಾಗಿದೆ. ಪ್ರತಿಯೊಂದು ದೇಶ, ಪ್ರಾಂತ್ಯದಲ್ಲಿ ಬೇರೆ-ಬೇರೆ ಭಾಷೆಗಳನ್ನು ಮಾತನಾಡುವ ಜನರಿದ್ದಾರೆ. ಪ್ರತೀ ಹದಿನೈದು ಕಿಲೋ ಮೀಟರ್‌ಗೆ ಜನರು ಆಡುವ ಭಾಷೆ ಬದಲಾಗುತ್ತಂತೆ. ಆದರೆ ದಕ್ಷಿಣ ನೈಜೀರಿಯಾದ ಜನರು ಮಾತ್ರ ವಿಭಿನ್ನ. ಇಲ್ಲಿ ಪುರುಷರು ಹಾಗೂ ಮಹಿಳೆಯರು ಬೇರೆ-ಬೇರೆ ಭಾಷೆ ಮಾತನಾಡುತ್ತಾರೆ.

ಇದನ್ನೂ ಓದಿ: ಚರ್ಚ್‌ಗೆ ಭೇಟಿ ನೀಡಿದ ವಿಘ್ನವಿನಾಶಕ ಗಣಪತಿ ! ಸ್ಪೇನ್ ನಲ್ಲಿ ನಡೆಯಿತು ಅಪರೂಪದ ಘಟನೆ

ಹೌದು, ದಕ್ಷಿಣ ನೈಜೀರಿಯಾದ ಹಳ್ಳಿಯಲ್ಲಿ ಪುರುಷರು ಹಾಗೂ ಮಹಿಳೆಯರು ಬೇರೆ-ಬೇರೆ ಭಾಷೆಗಳನ್ನು ಮಾತನಾಡುತ್ತಾರೆ. ಉಬಾಂಗ್ ನ ರೈತ ಸಮುದಾಯದ ಪುರುಷರು ಹಾಗೂ ಮಹಿಳೆಯರು ಬೇರೆ-ಬೇರೆ ಭಾಷೆಗಳನ್ನು ಮಾತನಾಡುವುದು ದೇವರ ಆಶೀರ್ವಾದ ಎಂದು ಭಾವಿಸಿಕೊಂಡಿದ್ದಾರೆ.

ಈ ಸಮುದಾಯದಲ್ಲಿನ ಪುರುಷ ಹಾಗೂ ಮಹಿಳೆಯರು ಮಾತನಾಡುವ ಭಾಷೆಯಲ್ಲಿನ ಪದಗಳು ವಿಭಿನ್ನವಾಗಿದೆ. ಆದರೆ ಸಾಮಾನ್ಯವಾಗಿ ಹಂಚಿಕೊಳ್ಳುವ ಪದಗಳು ಸಾಕಷ್ಟು ಇದೆ. ಆದರೆ ಅವರು ಒಂದೇ ರೀತಿಯ ಪದಗಳನ್ನು ಮಾತನಾಡುವುದಿಲ್ಲ, ಮಾತನಾಡುವ ಪದಗಳು ಒಂದೇ ಅಕ್ಷರಗಳನ್ನು ಹೊಂದಿಲ್ಲ. ಅವುಗಳು ಸಂಪೂರ್ಣವಾಗಿ ವಿಭಿನ್ನ ಪದಗಳಾಗಿವೆ” ಎಂದು ಸಮುದಾಯವನ್ನು ಅಧ್ಯಯನ ಮಾಡಿದ ಮಾನವ ಶಾಸ್ತ್ರಜ್ಞ ರುಡಿ ತಿಳಿಸಿದ್ದಾರೆ.

ಇದನ್ನೂ ಓದಿ: ಗೌರಿಕುಂಡದಲ್ಲಿರುವ ಬಿಸಿನೀರಿಗೂ, ಗೌರಿ ಹಬ್ಬಕ್ಕೂ ಇರುವ ನಂಟು ನಿಮಗೆ ಗೊತ್ತಾ ?

ಇನ್ನು ಇದರಲ್ಲಿ ಕುತೂಹಲಕಾರಿ ಅಂಶವೆಂದರೆ, ಪುರುಷರು ಹಾಗೂ ಮಹಿಳೆಯರು ಪರಸ್ಪರ ಭಾಷೆಯನ್ನು ಅರ್ಥಮಾಡಿಕೊಳ್ಳಲು ಸಮರ್ಥರಾಗಿದ್ದಾರೆ. ಬಾಲ್ಯದಲ್ಲಿ ಗಂಡುಮಕ್ಕಳು ತಮ್ಮ ತಾಯಂದಿರ ಜೊತೆ ಬೆಳೆಯುವುದರಿಂದ ಹೆಣ್ಣುಮಕ್ಕಳು ಮಾತನಾಡುವ ಭಾಷೆ ಮಾತನಾಡುತ್ತಾರೆ. ಆದರೆ ತಮಗೆ 10 ವರ್ಷ ತುಂಬುತ್ತಿದ್ದಂತೆ ಗಂಡು ಮಕ್ಕಳಿಗೆ ಪುರುಷರ ಭಾಷೆಯನ್ನು ಮಾತನಾಡಲು ಕಲಿಸಲಾಗುತ್ತದೆ.

ಇನ್ನು ಉಬಾಂಗ್‌ನ ರೈತ ಸಮುದಾಯದವರು ಮಾತನಾಡು ಭಾಷೆಗಳಿಗೆ ನಿರ್ದಿಷ್ಟ ಲಿಪಿ ಇಲ್ಲ ಎಂದು ಹೇಳಲಾಗಿದೆ. ಉಬಂಡ್ ಭಾಷೆಗಳನ್ನು ಶಾಲೆಗಳಲ್ಲಿ ಪಠ್ಯ ರೂಪದಲ್ಲಿ ಅಧ್ಯಯನ ಮಾಡುವುದಿಲ್ಲ. ಹೀಗಾಗಿ ಸಮುದಾಯದ ಭಾಷೆಯನ್ನು ಸಂರಕ್ಷಿಸಲು ಪ್ರಯತ್ನ ಮಾಡಬೇಕಿದೆ ಎಂದು ಹಲವರು ನಂಬುತ್ತಾರೆ. ಒಟ್ಟಿನಲ್ಲಿ ಇಲ್ಲಿನ ಜನರ ಜೀವನ ನಿಜಕ್ಕೂ ಕುತೂಹಲದ ಜೊತೆಗೆ ಅಚ್ಚರಿಯನ್ನೂ ಮೂಡಿಸಿದೆ.

(They both have a separate language, so do you know where it is?)

Comments are closed.