ಎಲ್ಲಾ ಮಾಸ್ಕ್‌ ಗಿಂತ ಈ ಮಾಸ್ಕ್‌ ಬೆಸ್ಟ್‌ ಅಂತೆ ! ಅಷ್ಟಕ್ಕೂ ಯಾವುದು ಈ ಮಾಸ್ಕ್‌

ನವದೆಹಲಿ : ಕೊರೊನಾ ಲಸಿಕೆ ಪಡೆದ ನಂತರವೂ ಮಾಸ್ಕ್ ಹಾಕುವುದು ಅನಿವಾರ್ಯವಾಗಿದೆ. ಕೊರೊನಾ ನಿಯಂತ್ರಣದಲ್ಲಿ ಮಾಸ್ಕ್ ಮಹತ್ವದ ಕೆಲಸ ಮಾಡ್ತಿದೆ ಅಂತಿದ್ದಾರೆ ತಜ್ಞರು. ಮಾರುಕಟ್ಟೆಗೆ ಅನೇಕ ವಿಧದ ಮಾಸ್ಕ್ಗಳು ಲಗ್ಗೆಯಿಟ್ಟಿವೆ. ಕೊರೊನಾ ನಿಯಂತ್ರಣಕ್ಕೆ ಯಾವ ಮಾಸ್ಕ್ ಬೆಸ್ಟ್ ಅನ್ನೋ ಚರ್ಚೆ ಹಲವು ದಿನಗಳಿಂದಲೂ ನಡೆಯುತ್ತಿದೆ. ಆದರೀಗ ಮಾಸ್ಕ್ ಬಗ್ಗೆ ಈಗ ಮತ್ತೊಂದು ಅಧ್ಯಯನ ನಡೆದಿದೆ.

ಸರ್ಜಿಕಲ್ ಮಾಸ್ಕ್ ಗಳು ಕೊರೊನಾ ನಿಯಂತ್ರಣಕ್ಕೆ ಉತ್ತಮ ಎನ್ನಲಾಗ್ತಿದೆ. ಬಾಂಗ್ಲಾದೇಶದಲ್ಲಿ ನಡೆದ ಅಧ್ಯಯನದಲ್ಲಿ ಈ ವಿಷ್ಯ ಹೊರ ಬಿದ್ದಿದೆ. ಅಧ್ಯಯನದಲ್ಲಿ ಎಲ್ಲವನ್ನೂ ಗಣನೆಗೆ ತೆಗೆದುಕೊಳ್ಳಲಾಗಿದೆ. ಯೇಲ್ ವಿಶ್ವವಿದ್ಯಾಲಯದ ಜೇಸನ್ ಅಬಲಕ್ ಈ ಅಧ್ಯಯನವನ್ನು ಮಾಡಿದ್ದಾರೆ. ಈ ಅಧ್ಯಯನದ ವರದಿಯನ್ನು ಇತ್ತೀಚೆಗೆ ವಾಷಿಂಗ್ಟನ್ ಪೋಸ್ಟ್ ನಲ್ಲಿ ಪ್ರಕಟಿಸಲಾಗಿದೆ.

ಇದನ್ನೂ ಓದಿ: ಭಾರತದಲ್ಲಿ ನಡೆದಿದೆ ಬೃಹತ್‌ ಲಸಿಕಾ ಅಭಿಯಾನ : ಇದುವರೆಗೆ ಎಷ್ಟು ಜನರಿಗೆ ಲಸಿಕೆ ನೀಡಲಾಗಿದೆ ಗೊತ್ತಾ ?

ಸರ್ಜಿಕಲ್ ಮಾಸ್ಕ್, ಕೊರೊನಾ ನಿಯಂತ್ರಣದ ಜೊತೆಗೆ ಉಸಿರಾಡಲು ಯಾವುದೇ ಸಮಸ್ಯೆ ಮಾಡುವುದಿಲ್ಲವೆಂದು ಅಧ್ಯಯನದಲ್ಲಿ ಹೇಳಲಾಗಿದೆ. ಬಾಂಗ್ಲಾದೇಶದ 600 ಗ್ರಾಮಗಳನ್ನು ಅಧ್ಯಯನ ಮಾಡಲಾಗಿದೆ. ಮಾಸ್ಕ್ ಧರಿಸಿದವರು ಮತ್ತು ಮಾಸ್ಕ್ ಧರಿಸದವರು ಇಬ್ಬರ ಅಧ್ಯಯನ ನಡೆದಿದೆ.

ಇದನ್ನೂ ಓದಿ: TAX PAYERS ಗೆ ಸಿಹಿ ಸುದ್ಧಿ: ʼತೆರಿಗೆ ರಿಟರ್ನ್ಸ್ʼ ಸಲ್ಲಿಸಲು ಅವಧಿ ವಿಸ್ತರಿಸಿದ ಕೇಂದ್ರ ಸರಕಾರ

ಸರ್ಜಿಕಲ್ ಮಾಸ್ಕ್ ಬಗ್ಗೆ ನವೆಂಬರ್ 2020 ರಿಂದ ಏಪ್ರಿಲ್ 2021 ರವರೆಗೆ ಅಧ್ಯಯನ ನಡೆಯಿತು. ಸರ್ಜಿಕಲ್ ಮಾಸ್ಕ್ ಧರಿಸಿದ್ದ 1.78 ಲಕ್ಷ ಜನರು ಹಾಗೂ ಸರ್ಜಿಕಲ್ ಮಾಸ್ಕ್ ಧರಿಸದ 1.64 ಲಕ್ಷ ಜನರ ಅಧ್ಯಯನ ನಡೆಸಲಾಗಿದೆ.

(This mask is the best of all masks!)

Comments are closed.