ಬೆಂಗಳೂರು : ಇನ್ನೇನು ಕೆಲವೇ ದಿನಗಳಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭವಾಗಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳು ಈ ಬಾರಿಯಾದ್ರೂ ತಂಡ ಗೆಲ್ಲುತ್ತೆ ಅಂತಾ ಕನಸು ಕಾಣುತ್ತಿದ್ದಾರೆ. ಈ ಬಾರಿಯೂ ಕಪ್ ನಮ್ಮದೇ ಅಂತಾ ಕನ್ನಡಿಗರು ಬೀಗುತ್ತಿದ್ದಾರೆ. ಆದ್ರೆ ಆರ್ ಸಿಬಿ ತನ್ನ ಅಭಿಮಾನಿಗಳಿಗೆ ಬಿಗ್ ಶಾಕ್ ಕೊಟ್ಟಿದೆ.

ಇದುವರೆಗೆ 12 ಋತುಗಳನ್ನು ಕಂಡಿರುವ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ವಿರಾಟ್ ಕೊಯ್ಲಿಯಂತಹ ಕ್ರಿಕೆಟ್ ದಿಗ್ಗಜರೇ ರಾಯಲ್ ಚಾಲೆಂಜರ್ಸ್ ತಂಡವನ್ನು ಮುನ್ನೆಡೆಸಿದ್ದರು. 2009, 2011 ಹಾಗೂ 2016ರಲ್ಲಿ ಫೈನಲ್ ಪ್ರವೇಶಿಸಿದ್ದರು.

ಡೆಕ್ಕನ್ ಚಾರ್ಜಸ್ ಹೈದ್ರಾಬಾದ್, ಚೆನೈ ಸೂಪರ್ ಕಿಂಗ್ಸ್, ಸನ್ ರೈಸಸ್ ಹೈದ್ರಾಬಾದ್ ವಿರುದ್ದ ಸೋತು ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತ್ತು. ಈ ಬಾರಿ ಆರ್ ಸಿಬಿ ತನ್ನ ತಂಡವನ್ನು ಸಂಪೂರ್ಣವಾಗಿ ಬದಲಾಯಿಸಿಕೊಂಡಿದೆ. ಹಲವು ಆಟಗಾರರನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿರೋ ರಾಯಲ್ ಚಾಲೆಂಜರ್ಸ್ ತಂಡ ಈ ಈ ಬಾರಿ ಶತಾಯಗತಾಯ ಗೆಲ್ಲಲೇ ಬೇಕೆಂಬ ಹಠಕ್ಕೆ ಬಿದ್ದಿದ್ದು, ಗೆಲುವಿಗೆ ಬೇಕಾದ ಎಲ್ಲಾ ಪ್ಲಾನ್ ಗಳನ್ನೂ ರೂಪಿಸಿಕೊಳ್ಳುತ್ತಿದೆ.

ಆದ್ರೀಗ ಆರ್ ಸಿಬಿ ತಂಡ ಬೌಲರ್ ಯಜುವೇಂದ್ರ ಚಹಲ್ ಮಾಡಿರೋ ಆ ಟ್ವೀಟ್ ಇದೀಗ ಆರ್ ಸಿಬಿ ಅಭಿಮಾನಿಗಳಿಗೆ ಶಾಕ್ ನೀಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಆರ್ ಸಿಬಿ ಲೋಗೋ ಎಲ್ಲಿ ಹೋಗಿದೆ ಅಂತಾ ಕೇಳಿದ್ದಾರೆ. ಇದಕ್ಕೆ ರೀ ಟ್ವೀಟ್ ಮಾಡಿರೋ ತಂಡ ನಾಯಕ ವಿರಾಟ್ ಕೊಯ್ಲಿ, ಈ ಟ್ವೀಟ್ ಮಾಡೋದ್ರಿಂದ ನಿನಗೆ ಎಷ್ಟು ಹಣ ಬಂತು ಅಂತಾ ಚಹಲ್ ಕಾಲೆಳಿದಿದ್ದಾರೆ.

ಚಹಲ್ ಮಾಡಿರೋ ಟ್ವೀಟ್ ಬೆನ್ನಲ್ಲೇ ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಚರ್ಚೆಗಳು ನಡೆಯೋದಕ್ಕೆ ಶುರುವಾಗಿದೆ. ರಾಯಲ್ ಚಾಲೆಂಜರ್ಸ್ ತಂಡ ತನ್ನೆಲ್ಲಾ ಸೋಲಿಯಲ್ ಮೀಡಿಯಾ ಖಾತೆಯಿಂದ ಪ್ರೋಪೈಲ್ ಫಿಕ್ಚರ್ಸ್ ನ್ನು ತೆಗೆದುಹಾಕಿದೆ.

ಮಾತ್ರವಲ್ಲ ಫೆಬ್ರವರಿ 16ರಂದು ಹೊಸ ಲೋಗೋವನ್ನು ಅನಾವರಣಗೊಳಿಸಲಿದೆ. ಇದೇ ಕಾರಣಕ್ಕೆ ಲೋಗೋವನ್ನು ತೆಗೆಯಲಾಗಿದೆ ಎಂದು ಹೇಳಲಾಗುತ್ತಿದೆ.

ಸತತ ಸೋಲನ್ನು ಕಾಣುತ್ತಿರೋ ಹಿನ್ನೆಲೆಯಲ್ಲಿ ಹಲವರು ತಂಡದ ಹೆಸರಿನ ಮುಂದೆ ಬೆಂಗಳೂರು ಅಂತಾ ಇರುವುದನ್ನು ತೆಗೆದು ಹಾಕಿ ಅಂತಾ ಸಾಕಷ್ಟು ಮಂದಿ ಟ್ರಾಲ್ ಮಾಡಿದ್ದರು. ಅಲ್ಲದೇ ಕೆಲವರು BANGALORE ಅಂತಾ ಇರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಆರ್ ಸಿಬಿ ತನ್ನ ಹೆಸರಿನ ಮುಂದೆ BENAGALURU ಪದದೊಂದಿಗೆ ಹೊಸ ಲೋಗೋ ಬರಲಿದೆ ಅನ್ನೋ ಮಾಹಿತಿ ಹರಿದಾಡುತ್ತಿದೆ.

ರಾಯಲ್ ಚಾಲೆಂಜರ್ಸ್ ತಂಡದ ಹೊಸ ಲೋಗೋ ಹೇಗಿರುತ್ತೇ ಅನ್ನೋ ಕುತೂಹಲದಲ್ಲಿದ್ದಾರೆ ಅಭಿಮಾನಿಗಳು. ಆರ್ ಸಿಬಿ ಯಾವ ಕಾರಣಕ್ಕೆ ತನ್ನ ಡಿಪಿ ತೆಗೆದಿದೆ ಅನ್ನೋ ಉತ್ತರ ಬೇಕಾದ್ರೆ ಫೆಬ್ರವರಿ 16ರ ವರೆಗೆ ಕಾಯಲೇ ಬೇಕು.