ಬೆಂಗಳೂರು : ರಾಯಲ್ ಚಾಲೆಂಜರ್ಸ್ ಬೆಂಗಳೂರ ತಂಡ ತನ್ನ ಹೆಸರನ್ನು ಬದಲಾಯಿಸಿಕೊಂಡಿದೆ. ಆರ್ ಸಿಬಿ ಇನ್ಮುಂದೆ ಬಿಆರ್ ಸಿ ಆಗಿ ಬದಲಾಗಲಿದೆ. ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡ ತನ್ನ ಹೊಸ ಲೋಗೋವನ್ನು ಬಿಡುಗಡೆ ಮಾಡಿದ್ದು, ಲೋಗದಲ್ಲಿ ಬೆಂಗಳೂರು ಹೆಸರನ್ನು ಮೊದಲಿಗೆ ಇರಿಸಿಕೊಂಡಿದೆ. ಅಲ್ಲದೇ ಹಳೆಯ ಲೋಗದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಬದಲಾವಣೆಗಳನ್ನು ಮಾಡಿಕೊಂಡಿದೆ.

ಮುಂಬೈ ಇಂಡಿಯನ್ಸ್, ಚೆನೈ ಸೂಪರ್ ಕಿಂಗ್ಸ್, ಕೊಲ್ಕತ್ತಾ ನೈಟ್ ರೈಡರ್ಸ್, ರಾಜಸ್ತಾನ್ ರಾಯಲ್ಸ್, ಡೆಲ್ಲಿ ಕ್ಯಾಪಿಟಲ್ ತಂಡಗಳು ತಮ್ಮ ಹೆಸರಿನ ಮೊದಲೇ ತಮ್ಮೂರಿನ ಹೆಸರನ್ನೇ ಮೊದಲು ಇರಿಸಿಕೊಂಡಿದ್ದವು. ಆದ್ರೆ ಈ ಬಾರಿ ಆರ್ ಸಿಬಿ ಕೂಡ ಇದೀಗ ಬೆಂಗಳೂರು ಹೆಸರಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದಂತಿದೆ.

ರಾಯಲ್ ಚಾಲೆಂಜರ್ಸ್ ತಂಡದ ಹೊಸ ಲೋಗೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈಗಾಗಲೇ ಲೋಗೋವನ್ನು ಬದಲಾಯಿಸಿಕೊಂಡಿರೋ ಆರ್ ಸಿಬಿ ಜರ್ಸಿಯನ್ನು ಕೂಡ ಬದಲಾಯಿಸಿಕೊಳ್ಳಲು ಚಿಂತನೆ ಮಾಡಿದೆ ಎನ್ನಲಾಗಿದೆ. ಅಲ್ಲದೇ ಆರ್ ಸಿಬಿ ತನ್ನ ಹೊಸ ಲೋಗೋವನ್ನು ಸಾಮಾಜಿಕ ಜಾಲತಾಣಗಳ ಡಿಪಿಯಲ್ಲಿ ಅಳವಡಿಸಿಕೊಂಡಿದೆ. 2020 ಐಪಿಎಲ್ ಪಂದ್ಯಕ್ಕೆ ಆರ್ ಬಿಸಿ ಸಕಲ ರೀತಿಯಲ್ಲಿಯೂ ಸಜ್ಜಾಗುತ್ತಿದೆ. ಈ ಬಾರಿ ತಂಡದಲ್ಲಿ ಬಾರಿ ಬದಲಾವಣೆಯನ್ನು ಮಾಡಿಕೊಂಡಿರೊ ಆರ್ ಸಿಬಿ ಇದೀಗ ಲೋಗೋವನ್ನು ಕೂಡ ಬದಲಾಯಿಸಿಕೊಂಡಿದೆ. ಈ ಮೂಲಕವಾದ್ರೂ ಈ ಬಾರಿ ಐಪಿಎಲ್ ನಲ್ಲಿ ಆರ್ ಸಿಬಿ ಹಣೆ ಬರಹ ಬದಲಾಗುತ್ತಾ ಅನ್ನೋದನ್ನು ಕಾದುನೋಡಬೇಕಿದೆ.