ಎರಡನೇ ಇನ್ಸಿಂಗ್ಸ್ ಆರಂಭಿಸಿದ ಸಾನಿಯಾಗೆ ಭರ್ಜರಿ ಗೆಲುವು

ಹೋಬರ್ಟ್ : ಗ್ಲಾಮರ್ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಟ್ರೋಫಿಯೊಂದನ್ನು ಗೆಲ್ಲುವ ಮೂಲಕ ಎರಡೇ ಇನ್ನಿಂಗ್ಸ್ ಗೆ ಭರ್ಜರಿಯಾಗಿಯೇ ಎಂಟ್ರಿಕೊಟ್ಟಿದ್ದಾರೆ.

ತಸ್ಮೇನಿಯಾ ರಾಜಧಾನಿ ಹೋಬರ್ಟ್‍ನಲ್ಲಿ ನಡೆದ ಅಂತಾರಾಷ್ಟ್ರೀಯ ಪಂದ್ಯಾವಳಿಯ ಮಹಿಳೆಯರ ಡಬಲ್ಸ್‍ನಲ್ಲಿ ಉಕ್ರೇನ್‍ನ ನಾಡಿಯಾ ಕಿಚೆನೋಕ್ ಜೊತೆಗೂಡಿ ಫೈನಲ್‍ನಲ್ಲಿ ಗೆಲುವು ಸಾಧಿಸಿ ಸಾನಿಯಾ ಡಬ್ಲ್ಯುಟಿಎ ಸಕ್ರ್ಯೂಟ್‍ನಲ್ಲಿ ಮತ್ತೆ ಗಲುವಿನ ಅಭಿಯಾನ ಆರಂಭಿಸಿದ್ದಾರೆ. .
ಸಾನಿಯಾ – ನಾಡಿಯಾ ಜೋಡಿ ಚೀನಾದ ಶೌಯಿ ಪೆಂಗ್ ಮತ್ತು ಶೌಯಿ ಚಾಂಗ್ ಅವರನ್ನು 6-4, 6-4 ರಲ್ಲಿ ಮಣಿಸೋ ಮೂಲಕ ಟ್ರೋಪಿಗೆ ಮುತ್ತಿಟ್ಟಿದ್ದಾರೆ.

ಇದು ಮುತ್ತಿನ ನಗರಿಯ 33 ವರ್ಷದ ಸಾನಿಯಾ ಮಿರ್ಜಾ ನಾನಾ ಕಾರಣಗಳಿಂದಾಗಿ ಕಳೆದೆರಡು ವರ್ಷಗಳಿಂದಲೂ ಟೆನ್ನಿಸ್ ಅಂಗಳದಿಂದ ದೂರ ಉಳಿದಿದ್ದರು. ಇದೀಗ ಗ್ಲಾಮರ್ ಆಟಗಾರ್ತಿಗೆ ಎರಡು ವರ್ಷದ ಬಳಿಕ ದೊರೆತ ದೊಡ್ಡ ಗೆಲುವಾಗಿದೆ.