Indian Cricket Team – BCCI : ಬೆಂಗಳೂರು: ಟಿ20 ವಿಶ್ವಕಪ್ ಗೆದ್ದ ಭಾರತ ಕ್ರಿಕೆಟ್ ತಂಡಕ್ಕೆ ಬಿಸಿಸಿಐ 125 ಕೋಟಿ ರೂಪಾಯಿಗಳ ಭರ್ಜರಿ ನಗದು ಬಹುಮಾನ ಘೋಷಿಸಿತ್ತು. ಬಾರ್ಬೆಡೋಸ್’ನಲ್ಲಿ ಜೂನ್ 29ರಂದು ನಡೆದ ಐಸಿಸಿ ಟಿ20 ವಿಶ್ವಕಪ್ ಫೈನಲ್ ಪಂದ್ಯವನ್ನು ಗೆದ್ದು ಭಾರತ ಚಾಂಪಿಯನ್ ಪಟ್ಟಕ್ಕೇರುತ್ತಿದ್ದಂತೆ ಬಿಸಿಸಿಐ ಅಧ್ಯಕ್ಷ ಜಯ್ ಶಾ ಈ ದೊಡ್ಡ ಘೋಷಣೆ ಮಾಡಿದ್ದರು. 125 ಕೋಟಿ ರೂಪಾಯಿಗಳಲ್ಲಿ ಆಟಗಾರರಿಗೆ ಸಿಗುವ ಹಣ ಎಷ್ಟು? ಕೋಚ್ ದ್ರಾವಿಡ್ ಅವರಿಗೆಷ್ಟು? ತಂಡದ ಸಹಾಯಕ ಸಿಬ್ಬಂದಿಗೆ ಸಿಗಲಿರುವ ದುಡ್ಡೆಷ್ಟು ಎಂಬುದು ಭಾರೀ ಕುತೂಹಲಕ್ಕೆ ಕಾರಣವಾಗಿತ್ತು. ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ಟಿ20 ವಿಶ್ವಕಪ್ ತಂಡದಲ್ಲಿದ್ದ 15 ಮಂದಿ ಆಟಗಾರರಿಗೆ ತಲಾ 5 ಕೋಟಿ ರೂಪಾಯಿ ಸಿಗಲಿದೆ. ಹೆಡ್ ಕೋಚ್ ರಾಹುಲ್ ದ್ರಾವಿಡ್ (Rahul Dravid) , ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ (Vikram Rathod) , ಬೌಲಿಂಗ್ ಕೋಚ್ ಪರಾಸ್ ಮಾಂಬ್ರೆ (Paras Mabre) ಮತ್ತು ಫೀಲ್ಡಿಂಗ್ ಕೋಚ್ ಟಿ.ದಿಲೀಪ್’ (Dileep) ಗೆ ತಲಾ 2.5 ಕೋಟಿ ರೂಪಾಯಿ ಸಿಗಲಿದೆ. ತಂಡದ ಮೂವರು ಫಿಸಿಯೊಗಳು, ಮೂವರು ಥ್ರೋಡೌನ್ ಸ್ಪೆಷಲಿಸ್ಟ್’ಗಳು (throwdown specialists), ಇಬ್ಬರು ಮಸಾಜ್’ಮ್ಯಾನ್’ಗಳು (masseurs) ಮತ್ತು ಇಬ್ಬರು ಸ್ಟ್ರೆಂತ್ & ಕಂಡಿಷನಿಂಗ್ ಕೋಚ್’ಗಳಿಗೆ (strength and conditioning coach) ತಲಾ 2 ಕೋಟಿ ರೂಪಾಯಿ ನಗದು ಬಹುಮಾನ ಸಿಗಲಿದೆ.
ಟಿ20 ವಿಶ್ವಕಪ್ ಟೂರ್ನಿಗಾಗಿ ಭಾರತ ತಂಡದ ಜೊತೆ ಒಟ್ಟು 42 ಮಂದಿ ಅಮೆರಿಕ ಹಾಗೂ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ತೆರಳಿದ್ದರು. ಇದರಲ್ಲಿ 15 ಮಂದಿ ಆಟಗಾರರು, ನಾಲ್ವರು ಮೀಸಲು ಆಟಗಾರರು, ಕೋಚಿಂಗ್ ಸ್ಟಾಫ್, ಸಹಾಯಕ ಸಿಬ್ಬಂದಿ, ಮ್ಯಾನೇಜರ್, ಲಾಜಿಸ್ಟಿಕ್ ಮ್ಯಾನೇಜರ್ ಹಾಗೂ ಮೀಡಿಯಾ ಟೀಮ್’ನ ಸದಸ್ಯರು ಸೇರಿದ್ದಾರೆ.

ಇದನ್ನೂ ಓದಿ : Virat Kohli: ನಿವೃತ್ತಿಯ ನಂತರ ಭಾರತ ತೊರೆಯಲಿದ್ದಾರೆ ಕಿಂಗ್ ವಿರಾಟ್ ಕೊಹ್ಲಿ
ಟಿ20 ವಿಶ್ವ ಚಾಂಪಿಯನ್ನರಿಗೆ ₹125 ಕೋಟಿ ಬಂಪರ್ ಗಿಫ್ಟ್, ಯಾರಿಗೆಷ್ಟು?
(T20 World Cup Prize Money Breakdown)
* 15 ಮಂದಿ ಆಟಗಾರರಿಗೆ: ತಲಾ ₹5 ಕೋಟಿ
* ರಾಹುಲ್ ದ್ರಾವಿಡ್ (ಕೋಚ್): ₹2.5 ಕೋಟಿ
* ವಿಕ್ರಮ್ ರಾಥೋರ್ (ಬ್ಯಾಟಿಂಗ್ ಕೋಚ್): ₹2.5 ಕೋಟಿ
* ಪರಾಸ್ ಮಾಂಬ್ರೆ (ಬೌಲಿಂಗ್ ಕೋಚ್): ₹2.5 ಕೋಟಿ
* ಟಿ.ದಿಲೀಪ್ (ಫೀಲ್ಡಿಂಗ್ ಕೋಚ್): ₹2.5 ಕೋಟಿ
ಇದನ್ನೂ ಓದಿ : Abhishek Sharma: ಸಿಡಿಲಬ್ಬರದ ಶತಕ ಬಾರಿಸಿ ರೋಹಿತ್ ಶರ್ಮಾ ಜಾಗ ತುಂಬಲು ಬಂದ ಅಭಿಷೇಕ್ ಶರ್ಮಾ
* 3 ಥ್ರೋಡೌನ್ ಸ್ಪೆಷಲಿಸ್ಟ್ಸ್: ₹2 ಕೋಟಿ
* 3 ಫಿಸಿಯೊಗಳು: ₹2 ಕೋಟಿ
* 2 ಮಸಾಜ್’ಮ್ಯಾನ್: ₹2 ಕೋಟಿ
* 2 ಸ್ಟ್ರೆಂತ್ & ಕಂಡಿಷನಿಂಗ್ ಕೋಚ್’ಗಳಿಗೆ: ₹2 ಕೋಟಿ
* ಮೀಸಲು ಆಟಗಾರರು: ₹1 ಕೋಟಿ
ಇದನ್ನೂ ಓದಿ : Mohammad Siraj: ವಿಶ್ವಕಪ್ ಪದಕವನ್ನು ತಾಯಿಯ ಕೊರಳಿಗೆ ತೊಡಿಸಿದ ಮೊಹಮ್ಮದ್ ಸಿರಾಜ್
125 crore for the world champions Indian Team Give BCCI how much for the players, how much for the coach ?