ಸೋಮವಾರ, ಏಪ್ರಿಲ್ 28, 2025
HomeSportsCricketUmran Malik shines in ODI debut: ಪದಾರ್ಪಣೆಯ ಪಂದ್ಯದಲ್ಲೇ ಬೆಂಕಿ ಚೆಂಡುಗಳನ್ನು ಉಗುಳಿದ ಜಮ್ಮು...

Umran Malik shines in ODI debut: ಪದಾರ್ಪಣೆಯ ಪಂದ್ಯದಲ್ಲೇ ಬೆಂಕಿ ಚೆಂಡುಗಳನ್ನು ಉಗುಳಿದ ಜಮ್ಮು ಎಕ್ಸ್‌ಪ್ರೆಸ್ ಉಮ್ರಾನ್ ಮಲಿಕ್

- Advertisement -

ಆಕ್ಲೆಂಡ್: ಭಾರತೀಯ ಕ್ರಿಕೆಟ್’ನ ಶರವೇಗದ ಸರದಾರ, ಗಂಟೆಗೆ ಸತತವಾಗಿ 150 ಕಿ.ಮೀ ವೇಗದಲ್ಲಿ( Umran Malik 153.1 kmph) ಬೌಲಿಂಗ್ ಮಾಡುವ ಅಪರೂಪದ ವೇಗದ ಬೌಲರ್ ಉಮ್ರಾನ್ ಮಲಿಕ್ (Umran Malik), ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್’ನ (NZ Vs IND 1st ODi) ಪದಾರ್ಪಣೆ ಪಂದ್ಯದಲ್ಲೇ ಗಮನ ಸೆಳೆದಿದ್ದಾರೆ.

ಆತಿಥೇಯ ನ್ಯೂಜಿಲೆಂಡ್ ವಿರುದ್ಧ ಆಕ್ಲೆಂಡ್’ನ ಈಡನ್ ಪಾರ್ಕ್ ಮೈದಾನದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ (India Vs New Zeeland ODI series) ತಮ್ಮ ಶರವೇಗದ ಬೌಲಿಂಗ್’ನಿಂದ ಅಬ್ಬರಿಸಿದ ಉಮ್ರಾನ್ ಮಲಿಕ್ 2 ವಿಕೆಟ್ ಪಡೆದು ಮಿಂಚಿದರು. ಜಮ್ಮು ಎಕ್ಸ್’ಪ್ರೆಸ್ ಖ್ಯಾತಿಯ ಉಮ್ರಾನ್ ಮಲಿಕ್ ಗಂಟೆಗೆ 150 ಕಿ.ಮೀ ವೇಗದಲ್ಲಿ ಎಸೆದ ಚೆಂಡುಗಳ ಮುಂದೆ ನ್ಯೂಜಿಲೆಂಡ್’ನ ಅಗ್ರಕ್ರಮಾಂಕದ ದಾಂಡಿಗಳು ಬೆದರಿ ಬೆಂಡಾಗಿ ಹೋದರು.

ತಮ್ಮ 3ನೇ ಓವರ್’ನಲ್ಲಿ ನ್ಯೂಜಿಲೆಂಡ್ ಓಪನರ್ ಡೆವೋನ್ ಕಾನ್ವೇ ವಿಕೆಟ್ ಪಡೆದ ಉಮ್ರಾನ್, ನಂತರ ಡ್ಯಾರಿಲ್ ಮಿಚೆಲ್ ವಿಕೆಟ್ ಕಬಳಿಸಿ ಪದಾರ್ಪಣೆಯ ಪಂದ್ಯದಲ್ಲೇ ಮಿಂಚಿದರು.
ಪವರ್’ಪ್ಲೇ ಮುಗಿದ ಬೆನ್ನಲ್ಲೇ ನಾಯಕ ಶಿಖರ್ ಧವನ್ ಜಮ್ಮು ಎಕ್ಸ್’ಪ್ರೆಸ್ ಉಮ್ರಾನ್ ಮಲಿಕ್ ಅವರನ್ನು ದಾಳಿಗಿಳಿಸಿದರು. ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಉಮ್ರಾನ್ ಮಲಿಕ್ ಎಸೆದ ಮೊದಲ ಎಸೆತದ ವೇಗ 145.9kmph. ತಮ್ಮ 3ನೇ ಓವರ್’ನ ಮೊದಲ ಎಸೆತವನ್ನು 150kmph ವೇಗದಲ್ಲಿ ಎಸೆದ ಮಲಿಕ್, ಡೆವೋನ್ ಕಾನ್ವೇ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ತಮ್ಮ 10 ಓವರ್’ಗಳ ಸ್ಪೆಲ್’ನಲ್ಲಿ ಉಮ್ರಾನ್ ಮಲಿಕ್ 153kmph ವೇಗದ ಎಸೆತವೊಂದನ್ನು ಎಸೆದರು.

ಜಮ್ಮು ಕಾಶ್ಮೀರದ ಶ್ರೀನಗರದವರಾಗಿರುವ 23 ವರ್ಷದ ಯುವ ವೇಗದ ಬೌಲರ್ ಉಮ್ರಾನ್ ಮಲಿಕ್ ಐಪಿಎಲ್’ನಿಂದ ಬೆಳಕಿಗೆ ಬಂದ ಪ್ರತಿಭೆ. ಕಳೆದ ಐಪಿಎಲ್ ಟೂರ್ನಿಯಲ್ಲಿ ಸನ್’ರೈಸರ್ಸ್ ಪರ ಮಿಂಚಿದ್ದ ಉಮ್ರಾನ್, ಶರವೇಗದ ಎಸೆತಗಳಿಂದ ಘಟಾನುಘಟಿ ದಾಂಡಿಗರನ್ನೇ ದಂಗುಬಡಿಸಿದ್ದರು.

ಆಸ್ಟ್ರೇಲಿಯಾದಲ್ಲಿ ಇತ್ತೀಚೆಗೆ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಉಮ್ರಾನ್ ಮಲಿಕ್ ಅವರನ್ನು ಆಡಿಸಬೇಕೆಂಬ ಮಾತುಗಳು ಕೇಳಿ ಬಂದಿದ್ದವು. ಗಂಟೆಗೆ 150 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡುವ ಸಾಮರ್ಥ್ಯವುಳ್ಳ ಮಲಿಕ್ ಟಿ20 ವಿಶ್ವಕಪ್’ನಲ್ಲಿ ಟೀಮ್ ಇಂಡಿಯಾದ X ಫ್ಯಾಕ್ಟರ್ ಆಗುವ ಸಾಧ್ಯತೆಯಿತ್ತು ಎಂದು ಕ್ರಿಕೆಟ್ ಪಂಡಿತರು ಅಭಿಪ್ರಾಯ ಪಟ್ಟಿದ್ದರು. ಆದರೆ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಉಮ್ರಾನ್ ಮಲಿಕ್ ಭಾರತ ತಂಡದ ನೆಟ್ ಬೌಲರ್ ಆಗಿದ್ದರು. ಇದುವರೆಗೆ ಒಟ್ಟು 33 ಟಿ20 ಪಂದ್ಯಗಳನ್ನಾಡಿರುವ ಉಮ್ರಾನ್ ಮಲಿಕ್ 45 ವಿಕೆಟ್’ಗಳನ್ನು ಪಡೆದಿದ್ದಾರೆ.

ಇದನ್ನೂ ಓದಿ : Vijay Hazare Trophy : ಲೀಗ್‌ನಲ್ಲಿ ಕರ್ನಾಟಕ ಟೇಬಲ್ ಟಾಪರ್, ಕ್ವಾರ್ಟರ್ ಫೈನಲ್‌ನಲ್ಲಿ ಜಾರ್ಖಂಡ್ ಎದುರಾಳಿ

ಇದನ್ನೂ ಓದಿ : Pro Kabaddi League: ಕೆಂಪುಗೂಳಿಗಳನ್ನು ಹಿಂದಿಕ್ಕಿ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದ ಜೈಪುರ ಪಿಂಕ್ ಪ್ಯಾಂಥರ್ಸ್

153.1 kmph Umran Malik Impressed His ODI debut NZ Vs IND 1st ODi

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular