Special Story: ಉಮಾಮಹೇಶ್ವರಿ ದೇವಸ್ಥಾನದಲ್ಲಿ ಕಣ್ಣು ತೆರೆದ ಶಿವ: ಹರಿದು ಬರುತ್ತಿದೆ ಜನಸಾಗರ

ರಾಮನಗರ: (Special Story) ಶಿವಲಿಂಗ ಕಣ್ಣು ತೆರೆದಿರುವುದನ್ನು ನಾವು ಡಾ. ರಾಜಕುಮಾರ್‌ ಅವರ ಬೇಡರ ಕಣ್ಣಪ್ಪ ಚಿತ್ರದಲ್ಲಿ ನೋಡಿದ್ದೇವೆ. ಆದರೆ ಕಲಿಯುಗದಲ್ಲೂ ಕೂಡ ಶಿವಲಿಂಗ ಕಣ್ಣು ತೆರೆದಿದೆ ಎಂಬ ಸುದ್ದಿ ಈಗ ಕಾಡ್ಗಿಚ್ಚಿನಂತೆ ಹಬ್ಬುತ್ತಿದೆ. ಪುರಾತನ ಕಾಲದ ಉಮಾಮಹೇಶ್ವರಿ ದೇಗುಲದಲ್ಲಿ ಈ ರೀತಿಯ ಪವಾಡವೊಂದು ನಡೆದಿದೆ. ದೇವರ ಪೂಜೆಗೆ ಅಲಂಕಾರ ಮಾಡುತ್ತಿದ್ದ ವೇಳೆ ಲಿಂಗದಲ್ಲಿ ಕಣ್ಣಿನ ಆಕಾರ ಕಾಣಿಸಿಕೊಂಡಿದ್ದು, ನಂತರ ಕಣ್ಣು ಮುಚ್ಚಿದೆ.

ಹೌದು..! ಕಲಿಯುಗದಲ್ಲಿ ಇದೊಂದು ಪವಾಡವೇ(Special Story). ಈ ಸುದ್ದಿ ತಿಳಿಯುತ್ತಿದ್ದಂತೆ ದೇವರು ಕಣ್ಣು ಬಿಟ್ಟಿದ್ದಾನೆ ಎಂದು ಜನರು ದೇವರ ದರ್ಶನಕ್ಕೆ ಮುಗಿಬಿದ್ದು ಬಂದಿದ್ದಾರೆ. ಸುದ್ದಿ ಹಬ್ಬುತ್ತಿದ್ದಂತೆ ಊರಿನ, ಪರ ಊರಿನ ಜನರು ದೌಡಾಯಿಸಿದ್ದಾರೆ. ಶಿವಲಿಂಗದಲ್ಲಿ ಕಣ್ಣು ತೆರೆದಿರುವ ಚಿತ್ರಗಳು ಎಲ್ಲೆಡೆ ವೈರಲ್‌ ಆಗುತ್ತಿದ್ದು, ಇದನ್ನು ಕಣ್ತುಂಬಿಕೊಳ್ಳಲು ಜನಸಾಗರವೇ ದೇವಸ್ಥಾನದತ್ತ ಹರಿದು ಬರುತ್ತಿದೆ.

ಉಮಾಮಹೇಶ್ವರಿ ದೇವಸ್ಥಾನ ಐವತ್ತು ವರ್ಷ ಹಳೆಯದಾಗಿದ್ದು, ಬಸವೇಶ್ವರ ಟ್ರಸ್ಟ್‌ ವತಿಯಿಂದ ಐದು ವರ್ಷದ ಹಿಂದೆ ಜೀರ್ಣೋದ್ದಾರ ಮಾಡಲಾಗಿತ್ತು. ದೇವಸ್ಥಾನದ ಅರ್ಚಕ ರುದ್ರೇಶ್‌ ಎನ್ನುವವರು ಶುಕ್ರವಾರ ದೇವಸ್ಥಾನಕ್ಕೆ ಬಂದಿರಲಿಲ್ಲ ಅವರ ಬದಲಾಗಿ ಸಹೋದರ ಚಂದನ್‌ ಎನ್ನುವವರು ಪೂಜೆ ಮಾಡುತ್ತಿದ್ದರು. ದೇವಸ್ಥಾನದಲ್ಲಿ ಪೂಜೆ ಮುಗಿದ ನಂತರ ತಮ್ಮ ಮೊಬೈಲ್‌ ನಲ್ಲಿ ಫೋಟೋ ತೆಗೆದು ಕೊಂಡಿದ್ದಾರೆ. ನಂತರ ಫೋಟೋವನ್ನು ಗಮನಿಸಿದಾಗ ಲಿಂಗದಲ್ಲಿ ಕಣ್ಣು ತೆರದಿರುವ ದೃಶ್ಯ ಕಂಡುಬಂದಿದೆ. ದೇವಸ್ಥಾನದ ಟ್ರಸ್ಟ್‌ ಅಧ್ಯಕ್ಷ ವಿಜಯಸಿಂಹ ಪರೀಕ್ಷೆ ಮಾಡಿಸಿದ್ದು, ಅರ್ಚಕರ ಕೈಯಲ್ಲಿ ಶಿವಲಿಂಗವನ್ನು ಒರೆಸಿದ್ದಾರೆ. ಆದರೂ ಕೂಡ ಯಾವುದೇ ಬದಲಾವಣೆ ಕಂಡುಬಂದಿಲ್ಲ. ರಾತ್ರಿ ಆಗುತ್ತಿದ್ದಂತೆ ಕಣ್ಣು ಮುಚ್ಚಿಕೊಂಡ ರೀತಿಯಲ್ಲಿ ಕಾಣಿಸುತ್ತಿದ್ದು,ಇದನ್ನು ತಿಳಿಯುತ್ತಿದ್ದಂತೆ ಭಕ್ತರು ಈ ವಿಸ್ಮಯವನ್ನು ನೋಡಲು ದೇವಸ್ಥಾನದತ್ತ ಹರಿದು ಬರುತ್ತಿದ್ದಾರೆ.

ಇದನ್ನೂ ಓದಿ : Indian Army : ಭಾರತೀಯ ಸೇನೆಯನ್ನು ಮದುವೆಗೆ ಆಮಂತ್ರಿಸಿದ ಕೇರಳ ವಧು : ನವ ವಿವಾಹಿತರಿಗೆ ಶುಭ ಹಾರೈಸಿದ ಸೇನೆ

ಇದನ್ನೂ ಓದಿ : World Toilet Day 2022 : ವಿಶ್ವ ಶೌಚಾಲಯ ದಿನ : ಸ್ವಚ್ಛತೆಯ ಕಡೆಗೆ ಒಂದು ಹೆಜ್ಜೆ

ಇನ್ನೂ ಶಿವಲಿಂಗ ಕಣ್ಣು ಬಿಟ್ಟ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಕತ್‌ ವೈರಲ್‌ ಆಗುತ್ತಿದೆ. ಆಧುನಿಕ ಯುಗದಲ್ಲೂ ಶಿವ ಕಣ್ಣು ಬಿಟ್ಟಂತೆ ಹಲವು ಚಮತ್ಕಾರಗಳು ಇದುವರೆಗೆ ನಡೆಯುತ್ತಲೇ ಬಂದಿದೆ.

(Special Story) We Dr. Shivalinga’s eyes are open. We saw it in Rajkumar’s Bedara Kannappa. But even in Kali Yuga, the news that Shivlinga has opened its eyes is now spreading like wildfire. One such miracle happened in the ancient Umamaheswari temple. While decorating for the worship of God, the shape of an eye appeared in the lingam, and then the eye closed.

Comments are closed.