Grand Welcome for Rohit Sharma : ಮುಂಬೈ: ಟಿ20 ವಿಶ್ವಕಪ್ ವಿಜೇತ ಭಾರತ ಕ್ರಿಕೆಟ್ ತಂಡದ (T20 World Champion Team India) ಆಟಗಾರರಿಗೆ ತವರಿನಲ್ಲಿ ಅದ್ಧೂರಿ ಸ್ವಾಗತ ಸಿಕ್ಕಿದ್ದು, ಗುರುವಾರ ಮುಂಬೈ ವಿಶ್ವಕಪ್ ಗೆಲುವಿನ ಸಂಭ್ರಮದಲ್ಲಿ ಮಿಂದೆದ್ದಿದೆ. ಗುರುವಾರ ಸಂಜೆ ಮುಂಬೈನ ಛತ್ರಪತಿ ಶಿವಾಜಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ವಿಶ್ವ ಚಾಂಪಿಯನ್ನರನ್ನು ಭವ್ಯ ಮೆರವಣಿಗೆ ಮೂಲಕ ವಾಂಖೆಗೆ ಕ್ರೀಡಾಂಗಣಕ್ಕೆ ಕರೆ ತರಲಾಯಿತು. ಮೆರವಣಿಗೆಯುದ್ದಕ್ಕೂ ಸೇರಿದ್ದ ಲಕ್ಷಾಂತರ ಮಂದಿ ಕ್ರಿಕೆಟ್ ಪ್ರಿಯರು ವಿಶ್ವವಿಜೇತ ಭಾರತ ತಂಡಕ್ಕೆ ಅದ್ಧೂರಿ ಸ್ವಾಗತ ಕೋರಿದರು.

ನಂತರ ಕಿಕ್ಕಿರಿದು ತುಂಬಿದ್ದ ವಾಂಖೆಡೆ ಕ್ರೀಡಾಂಗಣದಲ್ಲಿ ಭಾರತ ತಂಡದ ಆಟಗಾರರನ್ನು ಬಿಸಿಸಿಐ ವತಿಯಿಂತ ಸನ್ಮಾನಿಸಲಾಯಿತು. ಇದೇ ವೇಳೆ ವಿಶ್ವ ಚಾಂಪಿಯನ್ನರಿಗೆ ಘೋಷಿಸಲಾಗಿದ್ದ 125 ಕೋಟಿ ರೂ. ನಗದು ಬಹುಮಾನವನ್ನು ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಮತ್ತು ಕಾರ್ಯದರ್ಶಿ ಜೈ ಶಾ ಟೀಮ್ ಇಂಡಿಯಾ ಆಟಗಾರರಿಗೆ ಹಸ್ತಾಂತರಿಸಿದರು.
ಇದನ್ನೂ ಓದಿ : Hardik Pandya: ಅವಮಾನಿಸಿದ ನೆಲಕ್ಕೆ ವಿಶ್ವಕಪ್ ಟ್ರೋಫಿಯೊಂದಿಗೆ ಕಾಲಿಟ್ಟವನ ಕಥೆ..! ಹಾರ್ದಿಕ್ ಪಾಂಡ್ಯ ಸಾಧನೆಯ ಹಿಂದೆ ಕನ್ನಡಿಗನ ಶ್ರಮ
ವಾಂಖೆಡೆ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಮುಗಿಸಿ ಮನೆಗೆ ಮರಳಿದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) ಅವರಿಗೆ ಕುಟುಂಬ ಸದಸ್ಯರು ಭವ್ಯ ಸ್ವಾಗತ ಕೋರಿದರು. ಮನೆ ಬಾಗಿಲಿಗೆ ಹೂವಿನ ರಂಗೋಲಿ ಹಾಕಿ ಮನೆಮಗನನ್ನು ಸ್ವಾಗತಿಸಲಾಯಿತು. ರೋಹಿತ್ ಶರ್ಮಾ ತಮ್ಮ ಮನೆಗೆ ಬಂದಿಳಿಯುತ್ತಿದ್ದಂತೆ ಹಿಟ್ ಮ್ಯಾನ್ ಅವರ ಸ್ನೇಹಿತರೆಲ್ಲಾ ಸೇರಿ ವಿಶೇಷವಾಗಿ ಸ್ವಾಗತ ನೀಡಿದರು.

ಇದನ್ನೂ ಓದಿ : Rohit Sharma Retirement Plan: ಟಿ20 ವಿಶ್ವ ಚಾಂಪಿಯನ್ ನಾಯಕ ರೋಹಿತ್ ಶರ್ಮಾ ನಿವೃತ್ತಿ ಪ್ಲಾನ್ ರೆಡಿ
ವಿಶ್ವಕಪ್ ಟ್ರೋಫಿ ಎತ್ತಿ ಹಿಡಿಯುವ ಸಂದರ್ಭದಲ್ಲಿ ರೋಹಿತ್ ಶರ್ಮಾ ಮಾಡಿದ್ದ ಸ್ಟೈಲನ್ನೇ ಪುನರಾವರ್ತಿಸಿ ರೋಹಿತ್ ಅವರಿಗೆ ಸ್ವಾಗತ ಕೋರಲಾಯಿತು. ನಂತರ ರೋಹಿತ್ ಶರ್ಮಾ ಅವರನ್ನ ಹೆಗಲ ಮೇಲೆ ಎತ್ತಿಕೊಂಡ ಸ್ನೇಹಿತರು, ಟಿ20 ವಿಶ್ವಕಪ್ ವಿಜೇತ ನಾಯಕನಿಗೆ ಹೂಮಾಲೆಗಳನ್ನ ಹಾಕಿ ಸಂಭ್ರಮಿಸಿದರು.
https://x.com/imransiddique89/status/1809078120994971688?s=46
ಕಳೆದ ಶನಿವಾರ (ಜೂನ್ 29) ವೆಸ್ಟ್ ಇಂಡೀಸ್’ನ ಬಾರ್ಬೆಡೋಸ್’ನಲ್ಲಿರುವ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆದ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 7 ರನ್’ಗಳಿಂದ ರೋಚಕವಾಗಿ ಸೋಲಿಸಿದ್ದ ಟೀಮ್ ಇಂಡಿಯಾ, 17 ವರ್ಷಗಳ ನಂತರ ಟಿ20 ವಿಶ್ವಕಪ್ ಎತ್ತಿ ಹಿಡಿದಿತ್ತು.
ಇದನ್ನೂ ಓದಿ : ವಿರಾಟ್ ಕೊಹ್ಲಿ ಮೇಲೆ ಈ ಮುಂಬೈಕರ್‌ಗಳಿಗೇಕೆ ಈ ಪರಿ ಉರಿ?
A grand welcome at home for Rohit Sharma who won the World Cup 2024