ಸೋಶಿಯಲ್ ಮೀಡಿಯಾದಲ್ಲೀಗ ಬ್ಯಾಟ್ ಬ್ಯಾಲೆನ್ಸ್ ಚಾಲೆಂಜ್ ಬಾರೀ ಸದ್ದು ಮಾಡುತ್ತಿದೆ. ಇದೀಗ ಟೀಂ ಇಂಡಿಯಾ ನಾಯಕ ವಿರಾಟ್ ಕೊಯ್ಲಿ, ನಟಿ ಅನುಷ್ಕಾ ಶರ್ಮಾ ಚಾಲೆಂಜ್ ಪೂರ್ತಿ ಗೊಳಿಸಿದ್ದಾರೆ. ಅಲ್ಲದೇ ಇತರಿಗೂ ಚಾಲೆಂಜ್ ಮಾಡಿದ್ದಾರೆ.

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ತಮ್ಮ ಪತಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರೊಂದಿಗೆ ‘ಬ್ಯಾಟ್ ಬ್ಯಾಲೆನ್ಸ್ ಚಾಲೆಂಜ್’ ಸ್ವೀಕರಿಸಿದ್ರು. ಪತಿಯ ಜೊತೆಗೆ ತಮ್ಮ ಕೈ ಬೆರಳಿನ ಮೇಲೆ ಬ್ಯಾಟ್ ಬ್ಯಾಲೆನ್ಸ್ ಮಾಡುವ ವಿಡಿಯೋವನ್ನು ಅನುಷ್ಕಾ ಶರ್ಮಾ ತಮ್ಮ ಇಬ್ ಸ್ಟಾ ಗ್ರಾಮ್ ಪೇಜ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಟೀಂ ಇಂಡಿಯಾ ನಾಯಕ ವಿರಾಟ್ ಈ ಸವಾಲನ್ನು ಸ್ವೀಕರಿಸಿ ಬ್ಯಾಟ್ ಬೆರಳ ತುದಿಯಲ್ಲಿ ಎತ್ತಿ ಹಿಡಿದಿದ್ದಾರೆ. ನಾನೇನು ಕಡಿಮೆ ಇಲ್ಲಾ ಅನ್ನುವಂತೆ ಪತ್ನಿ ಅನುಷ್ಕಾ ಶರ್ಮಾ ಕೊಯ್ಲಿಗರ ಉತ್ತಮ ಸ್ಪರ್ಧೆ ಯನ್ನು ನೀಡಿದರು. ನಟಿ ಆಶ್ಚರ್ಯಕರವಾಗಿ ತನ್ನ ಬೆರಳಿನ ಬ್ಯಾಟ್ ಅನ್ನು ಚೆನ್ನಾಗಿ ಸಮತೋಲನ ಗೊಳಿಸಿದರು. ಅಲ್ಲದೇ ತಾನು ಚಾಲೆಂಜ್ ಸ್ವೀಕರಿಸಿ ಆನಂದಿಸಿದ್ದೇನೆ ನೀವೂ ಕೂಡ ಮಾಡಿ ಅಂತಾ ಅಭಿಮಾನಿಗಳಿಗೆ ಚಾಲೆಂಜ್ ಎಸೆದಿದ್ದಾರೆ.

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿ ಸುಮಾರು ಒಂದು ತಿಂಗಳಿನಿಂದಲೂ ಇಂಗ್ಲೆಂಡ್ ನಲ್ಲಿದ್ದಾರೆ. ದಂಪತಿಗಳು ತಮ್ಮ ಮಗಳು ವಮಿಕಾ ಅವರೊಂದಿಗೆ ವಿರಾಟ್ ಅವರ ಕ್ರಿಕೆಟ್ ಪಂದ್ಯಾವಳಿಗೆ ತೆರಳಿದ್ದಾರೆ. ವಿರುಷ್ಕಾ ದಂಪತಿ ಹಲವು ಪೋಟೋಗಳನ್ನು ಈಗಾಗಲೇ ಅಪ್ಲೋಡ್ ಮಾಡಿ ಅಭಿಮಾನಿಗಳಿಗೆ ಖುಷಿಕೊಡುತ್ತಿದ್ದಾರೆ.

ನಟಿ ಅನುಷ್ಕಾ ಶರ್ಮಾ ಕಳೆದ ಏಪ್ರಿಲ್‌ನಲ್ಲಿ ಶೂಟಿಂಗ್ ಪ್ರಾರಂಭಿಸಿ ದ್ದಾರೆ ಎಂದು ವರದಿ ಯಾಗಿದೆ. ಇಲ್ಲಿಯವರೆಗೆ, ಅವರು ಎದುರು ನೋಡ ಬೇಕಾದ ಎರಡು ಚಿತ್ರಗಳಿವೆ. ನವದೀಪ್ ಸಿಂಗ್ ನಿರ್ದೇಶನದ ಕನೆಡಾ ಮತ್ತು ಕ್ರಿಕೆಟಿಗ ಜುಲಾನ್ ಗೋಸ್ವಾಮಿ ಅವರ ಜೀವನ ಚರಿತ್ರೆಯಲ್ಲಿ ಈ ನಟಿ ಕಾಣಿಸಿಕೊಳ್ಳಲಿದ್ದಾರೆ.