Divya Uruduga : ಬಿಗ್‌‌ಬಾಸ್ ನಲ್ಲಿ ಹೊಸ ದಾಖಲೆ ಬರೆದ ದಿವ್ಯಾ ಉರುಡುಗ

ಕಿರುತೆರೆಯಲ್ಲಿ ದಿನೆ ದಿನೇ ಕುತೂಹಲ ಹುಟ್ಟಿಸುತ್ತಿದೆ ಕನ್ನಡದ ಬಿಗ್ ಬಾಸ್. ಈಗಾಗಲೇ ಅರವಿಂದ್ ಜೊತೆಗಿನ ಪ್ರೀತಿಯ ಕಾರಣಕ್ಕೆ ಸುದ್ದಿಯಲ್ಲಿದ್ದ ದಿವ್ಯಾ ಉರುಡುಗ ಇದೀಗ ಹೊಸ ದಾಖಲೆ ಬರೆದಿದ್ದು, ಬಿಗ್‌ಬಾಸ್ 8 ನೇ ಆವೃತ್ತಿಯ ಮೊದಲ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ.

ಕೊರೊನಾ‌ ಕಾರಣಕ್ಕೆ ಅರ್ಧಕ್ಕೆ ನಿಂತಿದ್ದ ಬಿಗ್ ಬಾಸ್ ಮತ್ತೆ ಎರಡನೇ ಇನ್ನಿಂಗ್ಸ್ ಶುರುವಾಗಿದೆ. ಮತ್ತೆ ಕೊರೊನಾ ಶುರುವಾಗುತ್ತಲೇ ಬಿಗ್ ಬಾಸ್ ಮನೆಯಲ್ಲಿ ಒಂದಿಲ್ಲೊಂದು ವಿಚಾರಕ್ಕೆ ಗಲಾಟೆ ನಡೆಯುತ್ತಿದೆ.

ಈ ನಡುವಲ್ಲೇ ದಿವ್ಯಾ ಉರುಡುಗ ಹಾಗೂ ಅರವಿಂದ್ ಅವರ ಲವ್ ಸ್ಟೋರಿ ಮುಂದುವರಿದಿದೆ. ಜೊತೆಗೆ ದಿವ್ಯಾ ಬಿಗ್ ಬಾಸ್ ಮನೆಯಲ್ಲಿ ಚೆನ್ನಾಗಿಯೇ ಆಟವಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಪ್ರಸಕ್ತ ಬಿಗ್ ಬಾಸ್ ಸೀಸನ್ ನಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರೂ ಕೂಡ ಇದುವರೆಗೆ ಯಾರೊಬ್ಬರೂ ಕೂಡ ಕ್ಯಾಪ್ಟನ್ ಆಗಿ ಆಯ್ಕೆ ಯಾಗಿಲ್ಲ. ಈ ವಿಚಾರದ ಬಗ್ಗೆ ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ಚರ್ಚೆಯೂ ನಡೆದಿತ್ತು. ಆದ್ರೀಗ ಬಿಗ್ ಬಾಸ್ ಮನೆಯಲ್ಲಿ ದಿವ್ಯಾ ಉರುಡುಗ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಹೊಸ ದಾಖಲೆ ಬರೆದಿದ್ದಾರೆ.

ಯಾರೇ ತಪ್ಪು ಮಾಡಿದ್ರೂ ಅದನ್ನು ಪ್ರೀತಿಯಿಂದ ತಿಳಿ ಹೇಳೋ ದಿವ್ಯಾ ಉರುಡುಗ ಕಂಡ್ರೆ ಬಿಗ್ ಬಾಸ್ ಮನೆಯಲ್ಲಿರೋ ಎಲ್ಲರಿಗೂ ಇಷ್ಟ. ಜೊತೆಗೆ ಮಲೆನಾಡಿನ ಹುಡುಗಿ ದಿವ್ಯಾ ಉರುಡುಗ ಜೊತೆ ಅರವಿಂದ್ ಪ್ರೀತಿಗೆ ಬಿಗ್ ಬಾಸ್ ಮನೆ ಮಂದಿ ಸಾಥ್ ಕೊಟ್ಟಿದ್ದಾರೆ.

ಇದೀಗ ಕ್ಯಾಪ್ಟನ್ ಆಗಿ ದಿವ್ಯಾ ಉರುಡುಗ ಬಿಗ್ ಬಾಸ್ ಮನೆಯಲ್ಲಿ ಹೇಗಿರ್ತಾರೆ ಅನ್ನೋದು ಕುತೂಹಲ ಮೂಡಿಸಿದೆ.

Comments are closed.