Afg Vs Aus T20 World Cup 2024 : ಕಿಂಗ್ಸ್ ಟೌನ್: ಐಸಿಸಿ ಟಿ20 ವಿಶ್ವಕಪ್ (ICC t20 World Cup 2024) ಟೂರ್ನಿಯಲ್ಲಿ ಅಫ್ಘಾನಿಸ್ತಾನ (Afghanistan Cricket Team) ತಂಡ ಬಲಿಷ್ಠ ಆಸ್ಟ್ರೇಲಿಯಾ ಗೆ (Australia Cricket Team) ಶಾಕ್ ನೀಡಿದೆೆ. ಇದು ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಅಫ್ಘಾನಿಸ್ತಾನ ತಂಡಕ್ಕೆ ಆಸೀಸ್ ವಿರುದ್ಧ ಸಿಕ್ಕ ಮೊದಲ ಗೆಲುವು. ಸೇಂಟ್ ವಿನ್ಸೆಂಟ್’ನಲ್ಲಿ ನಡೆದ ಭಾನುವಾರ ಬೆಳಗ್ಗೆ ನಡೆದ ಗ್ರೂಪ್-1ರ ಸೂಪರ್-8 ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಫ್ಘಾನಿಸ್ತಾನ 21 ರನ್’ಗಳ ಗೆಲುವು ಸಾಧಿಸಿತು.

ಇದೊಂದಿಗೆ ಅಫ್ಘಾನಿಸ್ತಾನ ತನ್ನ ಸೆಮಿಫೈನಲ್ ಕನಸನ್ನು ಜೀವಂತವಾಗಿಟ್ಟುಕೊಂಡರೆ, ಆಸ್ಟ್ರೇಲಿಯಾದ ಸೆಮೀಸ್ ಹಾದಿ ಕಠಿಣವಾಗಿದೆ. ಸೋಮವಾರ ನಡೆಯುವ ಪಂದ್ಯದಲ್ಲಿ ಭಾರತ ವಿರುದ್ಧ ಆಸ್ಟ್ರೇಲಿಯಾ ಸೋತರೆ, ಮತ್ತೊಂದು ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಅಫ್ಘಾನಿಸ್ತಾನ ಗೆದ್ದರೆ ಆಫ್ಘನ್ ಪಡೆ ಸೆಮಿಫೈನಲ್ ಪ್ರವೇಶಿಸಲಿದೆ. ಆಡಿರುವ ಎರಡೂ ಸೂಪರ್-8 ಪಂದ್ಯಗಳನ್ನು ಗೆದ್ದಿರುವ ಭಾರತ ಈಗಾಗಲೇ ಸೆಮಿಫೈನಲ್’ಗೆ ಲಗ್ಗೆ ಇಟ್ಟಿದೆ.
ಇದನ್ನೂ ಓದಿ : ಅಂದು ಬ್ರೆಟ್ ಲೀ , ಇಂದು ಪ್ಯಾಟ್ ಕುಮಿನ್ಸ್ ಹ್ಯಾಟ್ರಿಕ್, ಇದು ಭಾರತ ವಿಶ್ವಕಪ್ ಗೆಲ್ಲುವ ಸೂಚನೆನಾ ?
https://x.com/criccrazyjohns/status/1804732054497874173?s=46%E2%80%8C
ಆಸ್ಟ್ರೇಲಿಯಾ ವಿರುದ್ಧ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ ನಿಗದಿತ 20 ಓವರ್’ಗಳಲ್ಲಿ 6 ವಿಕೆಟ್ ನಷ್ಟಕ್ಕೆ 148 ರನ್ ಕಲೆ ಹಾಕಿತು. ಆರಂಭಿಕರಾಗ ರಹ್ಮನುಲ್ಲಾ ಗುರ್ಬಾಜ್ (60 ರನ್, 49 ಎಸೆತ) ಮತ್ತು ಇಬ್ರಾಹಿಂ ಜದ್ರಾನ್ (51 ರನ್, 48 ಎಸೆತ) ಮೊದಲ ವಿಕೆಟ್’ಗೆ 15.5 ಓವರ್’ಗಳಲ್ಲಿ 118 ರನ್ ಸೇರಿಸಿ ತಂಡಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟರು.

ಇದನ್ನೂ ಓದಿ : ಮುಂದಿನ ತಿಂಗಳು ಟೀಮ್ ಇಂಡಿಯಾಗೆ ಹೊಸ ಕೋಚ್ : ಗೌತಮ್ ಗಂಭೀರ್ ಅಲ್ಲ, ವಿವಿಎಸ್ ಲಕ್ಷ್ಮಣ್
ನಂತರ 149 ರನ್’ಗಳ ಸಾಧಾರಣ ಸವಾಲು ಬೆನ್ನಟ್ಟಿದ ಆಸ್ಟ್ರೇಲಿಯಾ ಅಫ್ಘಾನಿಸ್ತಾನ ಬೌಲರ್’ಗಳ ಸಂಘಟಿತ ದಾಳಿಗೆ ತತ್ತರಿಸಿ 19.2 ಓವರ್’ಗಳಲ್ಲಿ ಕೇವಲ 127 ರನ್ನಿಗೆ ಆಲೌಟಾಯಿತು. ಅಫ್ಘಾನಿಸ್ತಾನ ಪರ ಮಧ್ಯಮ ವೇಗಿ ನವೀನ್ ಉಲ್ ಹಕ್ 20 ರನ್ನಿತ್ತು 3 ವಿಕೆಟ್ ಪಡೆದರೆ, ಗುಲ್ಬದಿನ್ ನೈಬ್ 20 ರನ್ನಿತ್ತು 4 ವಿಕೆಟ್ ಪಡೆದರು. ಇದರೊಂದಿಗೆ ಆಸ್ಟ್ರೇಲಿಯಾ ವಿರುದ್ಧ 2023ರ ಏಕದಿನ ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಅನುಭವಿಸಿದ್ದ ಸೋಲಿಗೆ ಅಫ್ಘಾನಿಸ್ತಾನ ಸೇಡು ತೀರಿಸಿಕೊಂಡಿತು.
https://x.com/absay_ek/status/1804729276798849325?s=46
ಇದನ್ನೂ ಓದಿ : Virat Kohli: ಓಪನರ್ ಆಗಿ ವಿರಾಟ್ ಮತ್ತೆ ಫೇಲ್, ಈಗೇನ್ ಮಾಡ್ತಾನೆ ನಿಮ್ ಹೀರೋ ?
Afg Vs Aus T20 World Cup 2024 Afghanistan Beat Australia Historic win