ಮಂಗಳವಾರ, ಏಪ್ರಿಲ್ 29, 2025
HomeSportsPraggnanandhaa beating Magnus Carlsen : ವಿಶ್ವ ಚಾಂಪಿಯನ್ ನನ್ನು ಬಗ್ಗುಬಡಿದ ಭಾರತದ ಲಿಟ್ಲ್...

Praggnanandhaa beating Magnus Carlsen : ವಿಶ್ವ ಚಾಂಪಿಯನ್ ನನ್ನು ಬಗ್ಗುಬಡಿದ ಭಾರತದ ಲಿಟ್ಲ್ ಗ್ರ್ಯಾಂಡ್ ಮಾಸ್ಟರ್ ಆರ್. ಪ್ರಗ್ನಾನಂದ

- Advertisement -

ನವದೆಹಲಿ : ಭಾರತದ ಲಿಟ್ಲ್ ಗ್ರ್ಯಾಂಡ್ ಮಾಸ್ಟರ್ ಖ್ಯಾತಿಯ ಆರ್. ಪ್ರಗ್ನಾನಂದ ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್ಸನ್ ಗೆ (Praggnanandhaa beating Magnus Carlsen) ಸೋಲಿನ ರುಚಿ ತೋರಿಸಿದ್ದಾರೆ. ಏರ್ಥಿಂಗ್ ಮಾಸ್ಟರ್ಸ್ (Air things Masters 2022) ಆನ್ಲೈನ್ ಟೂರ್ನಿಯಲ್ಲಿ ಈ ಸಾಧನೆ ಮೆರೆದಿರುವ 16 ವರ್ಷದ ಪೋರ, ಪಂದ್ಯಾವಳಿಯಲ್ಲಿ ಕಾರ್ಲ್ಸನ್ರ ಮೂರನೇ ಸರಣಿ ಗೆಲುವಿಗೆ ಬ್ರೇಕ್ ಹಾಕಿದ್ದಾರೆ.

ಕಪ್ಪು ಕಾಯಿಗಳೊಂದಿಗೆ ಆರಂಭಿಸಿದ ಪ್ರಗ್ನಾನಂದ ಕೇವಲ 39 ನಡೆಗಳಲ್ಲಿ ಚಾಂಪಿಯನ್ ಬಾಯಿಯಿಂದ ರಿಸೈನ್ ಹೇಳಿಸಿದರು. ಕುತೂಹಲ ಮೂಡಇಸಿದ್ದ ಪಂದ್ಯದಲ್ಲಿ ಟರ್ಯಾಷ್ ಓಪನಿಂಗ್ ಮೂಲಕ ಆಟವಾಡಿದ ಪ್ರಾಗ್, ಪಂದ್ಯಾವಳಿಯ 8 ನೇ ಸುತ್ತಿನಲ್ಲಿ ಈ ಸಾಧನೆ ಮೆರೆದಿದ್ದಾರೆ. ಈ ಹಿಂದೆ ಭಾರತ ನಂ.1 ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್ ಮತ್ತು ಪೆಂಡ್ಯಾಲ ಹರಿಕೃಷ್ಣ (ಭಾರತದ ನಂ.3) ಮಾತ್ರ ಈ ಸಾಧನೆಯನ್ನು ಮಾಡಿದ್ದರು. ಸದ್ಯ ಪ್ರಾಗ್, 4 ಸೋಲು ಹಾಗೂ ಎರಡು ಡ್ರಾಗಳ ಮೂಲಕ ಜಂಟಿ 12 ನೇ ಸ್ಥಾನದಲ್ಲಿದ್ದರೂ, ಮತ್ತೊಮ್ಮೆ ಗೆಲುವಿನ ಲಯಕ್ಕೆ ಮರಳುವ ಸೂಚನೆ ನೀಡಿದ್ದಾರೆ.

ಯಾರು ಈ ಪ್ರಗ್ನಾನಂದ :

ಭಾರತೀಯ ಚದುರಂಗದಲ್ಲಿ ಹಲವು ವರ್ಷಗಳಿಂದಲೂ ಭರವಸೆ ಮೂಡಿಸುತ್ತಿರುವ ಪ್ರಗ್ನಾನಂದ ಈ ಅವಕಾಶಕ್ಕಾಗಿ ಬಹಳ ದಿನದಿಂದ ಕಾಯುತ್ತಿದ್ದರು. ಕೆಳ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ್ದ ಪ್ರಗ್ನಾನಂದ ತಂದೆ ಪೊಲೀಯೋದಿಂದಾಗಿ ಅಂಗ ವೈಕಲ್ಯಕ್ಕೆ ಒಳಗಾಗಿದ್ದರೂ ಕೂಡ ತಮ್ಮ ಮಗನ ಸಾಧನೆಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಅಲ್ಲದೇ ಮೇಕಿಂಗ್ನಲ್ಲಿ ನಡೆಯಲಿರುವ ಮುಂದಿನ ವಿಶ್ವ ಚಾಂಪಿಯನ್ ಎಂದೇ ಪ್ರಾಗ್ ಪರಿಗಣಿಸಲ್ಪಟ್ಟಿದ್ದಾರೆ.

“ಪ್ರಗ್ನಾನಂದ ಅವರು ಈಗಾಗಲೇ ವಿಶ್ವ ಚಾಂಪಿಯನ್ ರೀತಿಯಲ್ಲಿ ಆಟವಾಡುತ್ತಿದ್ದಾರೆ”

  • ವ್ಲಾಡಿಮಿರ್ ಕ್ರಾಮ್ನಿಕ್ (ಮಾಜಿ ವಿಶ್ವ ಚಾಂಪಿಯನ್)

ಪ್ರಗ್ನಾನಂದ ಭಾರತದ ಮೂರನೇ ಕಿರಿಯ ಗ್ರ್ಯಾಂಡ್ ಮಾಸ್ಟರ್ ಎನ್ನುವ ಕೀರ್ತಿಗೆ ಪಾತ್ರರಾಗಿದ್ದಾರೆ. ತಮಿಳುನಾಡಿನ ಚೆನ್ನೈನಲ್ಲಿ 10 ಆಗಸ್ಟ್ 2005ರಲ್ಲಿ ಜನಿಸಿದ ಪ್ರಗ್ನಾನಂದ 2016 ರಲ್ಲಿ 10 ವರ್ಷಗಳು, 10 ತಿಂಗಳುಗಳು ಮತ್ತು 19 ದಿನಗಳ ವಯಸ್ಸಿನಲ್ಲಿ ಕಿರಿಯ ಅಂತರಾಷ್ಟ್ರೀಯ ಮಾಸ್ಟರ್ ಆಗುವ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ದಾಖಲೆಯನ್ನು ನಿರ್ಮಿಸಿದವರು. ನಂತರದಲ್ಲಿ 2018ರಲ್ಲಿ ಗ್ರ್ಯಾಂಡ್ಮಾಸ್ಟರ್ ಆಗಿ ಹೊರ ಹೊಮ್ಮಿದ್ದವರು. ಇನ್ನುಪ್ರಾಗ್ FIDE ರೇಟಿಂಗ್ 2612 ಇದ್ದು, ಜುಲೈ 2019 ರಲ್ಲಿ, ಪ್ರಗ್ನಾನಂದ ಅವರು ಡೆನ್ಮಾರ್ಕ್ನಲ್ಲಿ ನಡೆದ ಎಕ್ಸ್ಟ್ರಾಕಾನ್ ಚೆಸ್ ಓಪನ್ನಲ್ಲಿ 8½/10 ಅಂಕಗಳನ್ನು (+7–0=3) ಗಳಿಸಿದರು. ಅಲ್ಲದೇ 18 ವರ್ಷದೊಳಗಿನವರ ವಿಭಾಗದಲ್ಲಿ ವಿಶ್ವ ಯುವ ಚಾಂಪಿಯನ್‌ ಶಿಪ್‌ ಗಳನ್ನು 9/11 ಅಂಕಗಳೊಂದಿಗೆ ಜಯಿಸಿದ್ದಾರೆ. ಅಲ್ಲದೇ 2600 ರ ರೇಟಿಂಗ್ ಸಾಧಿಸಿದ ಎರಡನೇ ಕಿರಿಯ ವ್ಯಕ್ತಿ ಎನಿಸಿಕೊಂಡಿದ್ದಾರೆ. ಅಲ್ಲದೇ ಅವರು ಕೇವಲ 14 ವರ್ಷಗಳು, 3 ತಿಂಗಳುಗಳು ಮತ್ತು 24 ದಿನಗಳಲ್ಲಿ ಈ ಸಾಧನೆಯನ್ನು ಮಾಡಿದ್ದಾರೆ.

2021 ರ ಚೆಸ್ ವಿಶ್ವಕಪ್ ಅನ್ನು ಪ್ರಗ್ನಾನಂದ ಅವರು 90 ನೇ ಶ್ರೇಯಾಂಕವಾಗಿ ಪ್ರವೇಶಿಸಿದ್ದರು. ಅವರು 2ನೇ ಸುತ್ತಿನಲ್ಲಿ GM ಗೇಬ್ರಿಯಲ್ ಸರ್ಗಿಸ್ಸಿಯನ್ ಅವರನ್ನು 2-0 ಅಂತರದಲ್ಲಿ ಸೋಲಿಸಿದರು. 3ನೇ ಸುತ್ತಿನಲ್ಲಿ ರ್ಯಾಪಿಡ್ ಟೈಬ್ರೇಕ್ಗಳಲ್ಲಿ GM ಮೈಕಾಲ್ ಕ್ರಾಸೆಂಕೋವ್ ಅವರನ್ನು ಸೋಲಿಸಿದ ನಂತರ 4ನೇ ಸುತ್ತಿಗೆ ಮುನ್ನಡೆದರು. ಆದರೆ ಮ್ಯಾಕ್ಸಿಮ್ ವಾಚಿಯರ್-ಲಾಗ್ರೇವ್ ಅವರಿಂದ ನಾಲ್ಕನೇ ಸುತ್ತಿನಲ್ಲಿ ಸೋಲನ್ನು ಕಂಡಿದ್ದರು. ಇನ್ನು ಟಾಟಾ ಸ್ಟೀಲ್ ಚೆಸ್ ಟೂರ್ನಮೆಂಟ್ 2022 ರ ಮಾಸ್ಟರ್ಸ್ ವಿಭಾಗದಲ್ಲಿ ಆಟವಾಡಿದ್ದ ಪ್ರಗ್ನಾನಂದ, ಆಂಡ್ರೆ ಎಸಿಪೆಂಕೊ, ವಿದಿತ್ ಗುಜರಾತಿ ಮತ್ತು ನಿಲ್ಸ್ ಗ್ರಾಂಡೆಲಿಯಸ್ ವಿರುದ್ಧ ಜಯಿಸುವ ಮೂಲಕ ಅಂತಿಮವಾಗಿ 12 ನೇ ಸ್ಥಾನ ಪಡೆದುಕೊಂಡಿದ್ದಾರೆ.

ಪ್ರಗ್ನಾನಂದ ಅವರ ಹಿರಿಯ ಸಹೋದರಿ ವೈಶಾಲಿ ಕೂಡ ಅತ್ಯಂತ ಶ್ರೇಷ್ಠಆಟಗಾರ್ತಿ ಆಗಿದ್ದು (IM ಮತ್ತು ಮಹಿಳಾ ಗ್ರ್ಯಾಂಡ್ ಮಾಸ್ಟರ್) ಈಗಾಗಲೇ 12 ವರ್ಷದೊಳಗಿನ ಮತ್ತು 14 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ವಿಶ್ವ ಚಾಂಪಿಯನ್ ಶಿಪ್ ಪದಕಗಳನ್ನು ಗೆದ್ದಿದ್ದಾರೆ. ಪ್ರಸ್ತುತ 21 ವರ್ಷ ವಯಸ್ಸಿನ ಅವರು ಈಗಾಗಲೇ ಹಿರಿಯರಲ್ಲಿ (ಮಹಿಳಾ ವಿಭಾಗ) ಭಾರತದ ನಂ.4 ಆಗಿದ್ದಾರೆ.

ಇದನ್ನೂ ಓದಿ : ಐಪಿಎಲ್‌ ಮೆಗಾ ಹರಾಜು : ಯಾವ ಆಟಗಾರರು ಯಾವ ತಂಡಕ್ಕೆ ; ಇಲ್ಲಿದೆ ಎಲ್ಲಾ 10 ತಂಡಗಳ ಪೂರ್ಣ ವಿವರ

ಇದನ್ನೂ ಓದಿ : ವೆಸ್ಟ್‌ ಇಂಡಿಸ್‌ ವಿರುದ್ದ ಸರಣಿ ಗೆದ್ದ ಟೀಂ ಇಂಡಿಯಾ

( Air things Masters 2022 Final 16 years old Indian Junior Grand Master Rameshbabu Praggnanandhaa beating chess world Champion Magnus Carlsen )

Arun Gundmi | ಅರುಣ್ ಗುಂಡ್ಮಿ
Arun Gundmi Editor In Chief News Next Kannada. Working in more than 20 Years in Kannada Media (Print, Digital and News Channels. Kannada News Next Live brings latest news from Karnataka, India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular