Bangalore Karaga : ಮತ್ತೆ ಕೊರೋನಾ ಕರಿನೆರಳು : ರದ್ದಾಗುತ್ತಾ ಬೆಂಗಳೂರು ಕರಗ, ಜಾರಿಯಾಗುತ್ತಾ ಪ್ರತ್ಯೇಕ ಗೈಡ್ ಲೈನ್ಸ್

ಬೆಂಗಳೂರು : ರಾಜಕೀಯ ಹಾಗೂ ಹಿಜಾಬ ಸಂಘರ್ಷದ ನಡುವೆ ಜನರು ಕೊರೋನಾ ಹಾಗೂ ಓಮೈಕ್ರಾನ್ ಆತಂಕವನ್ನು ಮರೆತು ಬಿಟ್ಟಿದ್ದಾರೆ. ಈ ಮಧ್ಯೆ ರಾಜ್ಯದಲ್ಲಿ ಜನಜೀವನ ಸಹಜ ಸ್ಥಿತಿಗೆ‌‌ ಮರಳುತ್ತಿದ್ದು, ನಿಧಾನಕ್ಕೆ ಜಾತ್ರೆ ಹಾಗೂ ಉತ್ಸವಗಳು ಆರಂಭವಾಗುತ್ತಿದೆ. ಈ ಮಧ್ಯೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೂ ಐತಿಹಾಸಿಕ ಉತ್ಸವ ಕರಗಕ್ಕೆ (Bangalore Karaga) ಸಿದ್ಧತೆ ನಡೆದಿದೆ. ಆದರೆ ಇನ್ನೂ ಕೂಡ ಓಮೈಕ್ರಾನ್ ಹಾಗೂ ಕೊರೋನಾ ಆತಂಕ ಸಂಪೂರ್ಣವಾಗಿ ಕಡಿಮೆಯಾಗದ ಹಿನ್ನೆಲೆಯಲ್ಲಿ ಕರಗಕ್ಕೆ ಅನುಮತಿ ಸಿಗೋದೇ ಅನುಮಾನ ಎನ್ನಲಾಗುತ್ತಿದೆ.

ಬೆಂಗಳೂರಿನ ಐತಿಹಾಸಿಕ ಉತ್ಸವ ಕರಗ. ಲಕ್ಷಾಂತರ ಜನರು ಪಾಲ್ಗೊಳ್ಳುವ ಅಹೋರಾತ್ರಿ ನಡೆಯುವ ಈ ಉತ್ಸವ ಕಳೆದ ಎರಡು ವರ್ಷಗಳಿಂದ ಕೊರೋನಾ ಕಾರಣಕ್ಕೆ ಸ್ಥಗಿತ ಗೊಂಡಿತ್ತು. ಈ ವರ್ಷ ಕರಗಕ್ಕೆ ಅನುಮತಿ ನೀಡಲಾಗಿದ್ದು, ಈಗಾಗಲೇ ಸಿದ್ಧತೆಗಳು ನಡೆದಿದೆ. ಆದರೆ ಆರೋಗ್ಯ ಇಲಾಖೆ ಕರಗಕ್ಕೆ ಫುಲ್ ರಿಲ್ಯಾಕ್ಸ್ ನೀಡೋದಿಕ್ಕೆ ಆತಂಕ ವ್ಯಕ್ತಪಡಿಸು ತ್ತಿದೆ. ಮೂರನೇ ಅಲೆ ಇನ್ನು ಮುಗಿಯದಿಲ್ಲ. ಹೀಗಾಗಿ ಜಾತ್ರೆಗಳಿಗೆ ಅವಕಾಶ ಕೊಡೋದು ಸೂಕ್ತವಲ್ಲ ಎಂಬುದು ಆರೋಗ್ಯ ಇಲಾಖೆ ಅಭಿಮತ.

ಈಗಾಗಲೇ ಬೆಂಗಳೂರು ಕರಗಕ್ಕೆ ಸಿದ್ಧತೆ ನಡೆದಿದೆ. ಆದರೆ ರಾಜ್ಯದಲ್ಲಿ ಈಗಲೂ ಒಮಿಕ್ರಾನ್ ಕೇಸ್‌ಗಳು ಸಕ್ರಿಯವಾಗಿದೆ. ಕೇಸ್‌ಗಳ ಸಂಖ್ಯೆಯಲ್ಲಿ ಇಳಿಮುಖವಾದರೂ ಡೆತ್ ರೇಟ್‌ ಕಡಿಮೆಯಾಗಿಲ್ಲ. ಹೀಗಾಗಿ ಈ ಸಂದರ್ಭದಲ್ಲಿ ಕರಗ ನಡೆಸೋದು ಎಷ್ಟು ಸರಿ ಅನ್ನೋದು ಆರೋಗ್ಯ ಇಲಾಖೆ ಪ್ರಶ್ನೆ. ಹೀಗಾಗಿ ಕರಗ ಉತ್ಸವ ಆಚರಿಸೋ ಬಗ್ಗೆ ಕ್ಲಿನಿಕಲ್ ಎಕ್ಸ್‌ಪರ್ಟ್ಸ್ ಹಾಗೂ ತಾಂತ್ರಿಕ ಸಲಹಾ ಸಮಿತಿಯ ಆಭಿಪ್ರಾಯ ಸಂಗ್ರಹಿಸಲು ಆರೋಗ್ಯ ಇಲಾಖೆ ಸಿದ್ದವಾಗಿದೆ.

ಈ ಬಗ್ಗೆ ಮಾಹಿತಿ ನೀಡಿರೋ ಆರೋಗ್ಯ ಇಲಾಖೆ ಆಯುಕ್ತ ರಂದೀಪ್.‌ ಡಿ ಈಗಲೇ ಕರಗ ಉತ್ಸವ ನಡೆಸೋದು ಸೂಕ್ತವಲ್ಲ. ಒಂದೊಮ್ಮೇ ಕರಗ ನಡೆಸಲೇ ಬೇಕೆಂದರೇ ಕರಗಕ್ಕೆ ಪ್ರತ್ಯೇಕವಾದ ಗೈಡ್ ಲೈನ್ಸ್ ತರೋದು ಉತ್ತಮ. ಕರಗದಲ್ಲಿ ಎಷ್ಟು ಜನರು ಇರಬೇಕು. ಯಾವ ರೀತಿ ಕರಗದಲ್ಲಿ ಮುಂಜಾಗೃತೆ ವಹಿಸಬೇಕು ಈ ಕುರಿತು ಪ್ರತ್ಯೇಕ ಗೈಡ್‌ಲೈನ್ಸ್‌‌ಗೆ ಇಲಾಖೆ ಸಿದ್ಧತೆ ನಡೆಸಿದ್ದು, ಈ ಬಗ್ಗೆ ವರದಿ ತಯಾರಿಸಿ ಸರ್ಕಾರಕ್ಕೆ ನೀಡಲು ಆರೋಗ್ಯ ಇಲಾಖೆ ಮುಂದಾಗಿದೆ ಎಂದಿದ್ದಾರೆ. ತಾಂತ್ರಿಕ ಸಲಹಾ ಸಮಿತಿಯ ನಿರ್ಧಾರದಂತೆ ಗೈಡ್ ಲೈನ್ಸ್ ರೆಡಿಯಾಗಲಿದ್ದು, ಇದನ್ನು ನೋಡಿದ ಬಳಿಕ ಸರ್ಕಾರ ಕರಗದ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.

ಇದನ್ನೂ ಓದಿ : ಭಜರಂಗದಳ ಕಾರ್ಯಕರ್ತ ಹರ್ಷ ಬರ್ಬರ ಹತ್ಯೆ: 144 ಸೆಕ್ಷನ್ ಜಾರಿ, ಶಿವಮೊಗ್ಗದಲ್ಲಿ ಶಾಲೆ, ಕಾಲೇಜಿಗೆ ರಜೆ ಘೋಷಣೆ

ಇದನ್ನೂ ಓದಿ : ವಿಶ್ವ ಚಾಂಪಿಯನ್ ನನ್ನು ಬಗ್ಗುಬಡಿದ ಭಾರತದ ಲಿಟ್ಲ್ ಗ್ರ್ಯಾಂಡ್ ಮಾಸ್ಟರ್ ಆರ್. ಪ್ರಗ್ನಾನಂದ

( Karnataka Corona Fear May be Cancel Bangalore Karaga )

Comments are closed.