Ajit Agarkar : ವೆಸ್ಟ್ ಇಂಡೀಸ್’ನಲ್ಲಿ ರೋಹಿತ್, ಕೊಹ್ಲಿಯನ್ನು ಭೇಟಿ ಮಾಡಲಿದ್ದಾರೆ ಅಗರ್ಕರ್, ಕಾರಣ ಇಂಟ್ರೆಸ್ಟಿಂಗ್

ಬೆಂಗಳೂರು: ಬಿಸಿಸಿಐ ಸೀನಿಯರ್ ಆಯ್ಕೆ ಸಮಿತಿಯ ನೂತನ ಮುಖ್ಯಸ್ಥರಾಗಿ ನೇಮಕಗೊಂಡಿರುವ ಮಾಜಿ ಕ್ರಿಕೆಟಿಗ ಅಜಿತ್ ಅಗರ್ಕರ್ (Ajit Agarkar) ವೆಸ್ಟ್ ಇಂಡೀಸ್’ನಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) ಹಾಗೂ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಅವರನ್ನು ಭೇಟಿ ಮಾಡಲಿದ್ದಾರೆ.

ಗುರುವಾರ ಪೋರ್ಟ್ ಆಫ್ ಸ್ಪೇನ್’ನಲ್ಲಿ ಆರಂಭವಾಗಲಿರುವ ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟೆಸ್ಟ್ ಪಂದ್ಯದ ವೇಳೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರನ್ನು ಅಜಿತ್ ಅಗರ್ಕರ್ ಭೇಟಿ ಮಾಡಲಿದ್ದು, ಮಹತ್ವದ ಮಾತುಕತೆ ನಡೆಸಲಿದ್ದಾರೆ. ಟೀಮ್ ಇಂಡಿಯಾದ ಬ್ಯಾಟಿಂಗ್ ದಿಗ್ಗಜರ ಕ್ರಿಕೆಟ್ ಭವಿಷ್ಯದ ಕುರಿತಾಗಿ ಈ ಮಾತುಕತೆ ನಡೆಯಲಿದೆ. ಮಾತುಕತೆಯ ವೇಳೆ ಟಿ20 ಕ್ರಿಕೆಟ್ ಭವಿಷ್ಯದ ಬಗ್ಗೆ ರೋಹಿತ್ ಮತ್ತು ವಿರಾಟ್ ಕೊಹ್ಲಿ ಜೊತೆ ಅಗರ್ಕರ್ ಮಾತುಕತೆ ನಡೆಸಲಿದ್ದಾರೆ. ಇಬ್ಬರೂ ಆಟಗಾರರಿಗೆ ಮುಂದಿನ ದಿನಗಳಲ್ಲಿ ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್’ನತ್ತ ಮಾತ್ರ ಗಮನ ಹರಿಸುವಂತೆ ಆಯ್ಕೆ ಸಮಿತಿಯ ಮುಖ್ಯಸ್ಥ ಅಜಿತ್ ಅಗರ್ಕರ್ ಸ್ಪಷ್ಟ ಸಂದೇಶ ರವಾನಿಸುವ ಸಾಧ್ಯತೆಯಿದೆ.

ಟೆಸ್ಟ್ ಹಾಗೂ ಏಕದಿನ ತಂಡದ ನಾಯಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ, ಇತ್ತೀಚಿನ ದಿನಗಳಲ್ಲಿ ಟಿ20 ತಂಡದಿಂದ ಹೊರಗುಳಿದಿದ್ದಾರೆ. ಹಾರ್ದಿಕ್ ಪಾಂಡ್ಯ ಅವರನ್ನು ಟಿ20 ತಂಡದ ನಾಯಕನಾಗಿ ನೇಮಕ ಮಾಡಿದ ನಂತರ ಚುಟುಕು ಕ್ರಿಕೆಟ್’ನಲ್ಲಿ ಕೊಹ್ಲಿ ಮತ್ತು ರೋಹಿತ್ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿಲ್ಲ. ಮುಂದಿನ ವರ್ಷ ನಡೆಯುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೂ ರೋಹಿತ್ ಮತ್ತು ಕೊಹ್ಲಿ ಆಯ್ಕೆಯಾಗುವ ಸಾಧ್ಯತೆಗಳು ಕಡಿಮೆ. ಇದನ್ನು ಇಬ್ಬರೂ ಆಟಗಾರರಿಗೆ ಅಜಿತ್ ಅಗರ್ಕರ್ ಮನವರಿಕೆ ಮಾಡಿ ಕೊಡಲಿದ್ದಾರೆ.

ಇದನ್ನೂ ಓದಿ : KL Rahul : ರೂಮರ್ಸ್’ಗಳಿಗೆ ಬ್ರೇಕ್ ಹಾಕಿದ ರಾಹುಲ್, ಎನ್‌ಸಿಎನಲ್ಲಿ ಶುರು ಕನ್ನಡಿಗನ ಬ್ಯಾಟಿಂಗ್ ತಾಲೀಮು

ಇದನ್ನೂ ಓದಿ : VVS Laxman : ಏಷ್ಯನ್ ಗೇಮ್ಸ್’ನಲ್ಲಿ ಆಡಲಿರುವ ಯಂಗ್ ಇಂಡಿಯಾಗೆ ವಿವಿಎಸ್ ಲಕ್ಷ್ಲ್ಮಣ್ ಕೋಚ್

ರೋಹಿತ್ ಮತ್ತು ಕೊಹ್ಲಿ ಜೊತೆಗಿನ ಮಾತುಕತೆಗೂ ಮುನ್ನ ಅಜಿತ್ ಅಗರ್ಕರ್, ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಅವರನ್ನೂ ಭೇಟಿ ಮಾಡಿ, ಭಾರತ ತಂಡದ ಭವಿಷ್ಯದ ಸರಣಿಗಳು, ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ಹಾಗೂ ಮುಂದಿನ ರೋಡ್ ಮ್ಯಾಪ್ ಬಗ್ಗೆ ಮಹತ್ವದ ಚರ್ಚೆ ನಡೆಸಲಿದ್ದಾರೆ.

Ajit Agarkar to meet Rohit and Kohli in West Indies

Comments are closed.