Ashiwn breaks Bhajji record : ಅಶ್ವಿನ್ ಮತ್ತೊಂದು ಮೈಲುಗಲ್ಲು; ಭಜ್ಜಿ ದಾಖಲೆ ಮುರಿದ ಸ್ಪಿನ್ ಮಾಂತ್ರಿಕ, ಜಂಬೋ ದಾಖಲೆ ಮೇಲೆ ಕಣ್ಣು

ಪೋರ್ಟ್ ಆಫ್ ಸ್ಪೇನ್: Ashiwn breaks Bhajji record : ಟೀಮ್ ಇಂಡಿಯಾದ ಸ್ಪಿನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್ (R Ashwin), ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಮತ್ತೊಂದು ಮೈಲುಗಲ್ಲು ನೆಟ್ಟಿದ್ದಾರೆ. ಭಾರತ ಪರ ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದವರ ಸಾಲಿನಲ್ಲಿ ತಮಿಳುನಾಡಿನ ಅಶ್ವಿನ್, ಟರ್ಬನೇಟರ್ ಖ್ಯಾತಿಯ ಹರ್ಭಜನ್ ಸಿಂಗ್ ಅವರನ್ನು ಹಿಂದಿಕ್ಕಿ 2ನೇ ಸ್ಥಾನಕ್ಕೇರಿದ್ದಾರೆ.

ಆತಿಥೇಯ ವೆಸ್ಟ್ ಇಂಡೀಸ್ ವಿರುದ್ಧ ಪೋರ್ಟ್ ಆಫ್ ಸ್ಪೇನ್’ನಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್’ನಲ್ಲಿ 2 ವಿಕೆಟ್ ಪಡೆಯುವ ಮೂಲಕ ಅಶ್ವಿನ್ ಈ ಸಾಧನೆ ಮಾಡಿದ್ದಾರೆ. ವಿಂಡೀಸ್’ನ ದ್ವಿತೀಯ ಇನ್ನಿಂಗ್ಸ್’ನಲ್ಲಿ ಅಶ್ವಿನ್ ಕ್ರೇಗ್ ಬ್ರಾತ್’ವೇಟ್ ಮತ್ತು ಕಿರ್ಕ್ ಮೆಕ್’ಕೆಂಜಿ ವಿಕೆಟ್ ಪಡೆದಿದ್ದಾರೆ.

ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಅಶ್ವಿನ್ ಇದೀಗ 712 ವಿಕೆಟ್’ಗಳನ್ನು ಉರುಳಿಸಿದ್ದು, ಇಂಟರ್’ನ್ಯಾಷನಲ್ ಕ್ರಿಕೆಟ್’ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದವರ ಸಾಲಿನಲ್ಲಿ 2ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಅಶ್ವಿನ್ 272 ಪಂದ್ಯಗಳ 354 ಇನ್ನಿಂಗ್ಸ್’ಗಳಿಂದ 712 ವಿಕೆಟ್’ಗಳನ್ನು ಪಡೆದಿದ್ದರೆ, ಹರ್ಭಜನ್ ಸಿಂಗ್ 365 ಪಂದ್ಯಗಳ 442 ಇನ್ನಿಂಗ್ಸ್’ಗಳಿಂದ 711 ವಿಕೆಟ್ ಕಬಳಿಸಿದ್ದಾರೆ.

401 ಪಂದ್ಯಗಳ 499 ಇನ್ನಿಂಗ್ಸ್’ಗಳಿಂದ 953 ವಿಕೆಟ್ ಪಡೆದಿರುವ ಕರ್ನಾಟಕದ ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ಭಾರತ ಪರ ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದವರ ಸಾಲಿನಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. 37 ವರ್ಷದ ಅಶ್ವಿನ್ ಆಡಿರುವ 94 ಟೆಸ್ಟ್ ಪಂದ್ಯಗಳಲ್ಲಿ 34 ಬಾರಿ ಇನ್ನಿಂಗ್ಸ್ ಒಂದರಲ್ಲಿ ಐದು ಅಥವಾ ಐದಕ್ಕಿಂತ ಹೆಚ್ಚು ವಿಕೆಟ್ ಉರುಳಿಸಿದ್ದಾರೆ.

ಇದನ್ನೂ ಓದಿ : Maharaja Trophy T20 : ಮಹಾರಾಜ ಟ್ರೋಫಿ ಟಿ20ಗೆ ಆಟಗಾರರ ಹರಾಜು: ಅಭಿನವ್ ಮನೋಹರ್’ಗೆ 15 ಲಕ್ಷ, ಮಯಾಂಕ್’ಗೆ 14 ಲಕ್ಷ, ಮನೀಶ್ ಪಾಂಡೆಗೆ 10.60 ಲಕ್ಷ

ಇದನ್ನೂ ಓದಿ : Suryakumar Yadav : ಟೀಮ್ ಇಂಡಿಯಾ ಟಿ20 ತಂಡಕ್ಕೆ ಸೂರ್ಯಕುಮಾರ್ ಯಾದವ್ ಕ್ಯಾಪ್ಟನ್, ಪಾಂಡ್ಯಾಗೆ ಶಾಕ್

ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಭಾರತ ಪರ ಅತೀ ಹೆಚ್ಚು ವಿಕೆಟ್ ಪಡೆದವರು (ಟಾಪ್ 5)
953: ಅನಿಲ್ ಕುಂಬ್ಳೆ (401 ಪಂದ್ಯ, 499 ಇನ್ನಿಂಗ್ಸ್)
712*: ರವಿಚಂದ್ರನ್ ಅಶ್ವಿನ್ (272 ಪಂದ್ಯ, 354 ಇನ್ನಿಂಗ್ಸ್)
711: ಹರ್ಭಜನ್ ಸಿಂಗ್ (365 ಪಂದ್ಯ, 442 ಇನ್ನಿಂಗ್ಸ್)
687: ಕಪಿಲ್ ದೇವ್ (356 ಪಂದ್ಯ, 448 ಇನ್ನಿಂಗ್ಸ್)
597: ಜಹೀರ್ ಖಾನ್ (303 ಪಂದ್ಯ, 373 ಇನ್ನಿಂಗ್ಸ್)

Ashiwn breaks Bhajji record : Ashwin another milestone; Bhajji’s record-breaking spin wizard, eyes on Jumbo’s record

Comments are closed.