Ashwin 700 wickets : ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ 700 ವಿಕೆಟ್, ಸ್ಪಿನ್ ಮಾಂತ್ರಿಕ ಅಶ್ವಿನ್ ಮಹೋನ್ನತ ಸಾಧನೆ

ಡೊಮಿನಿಕಾ: Ashwin 700 wickets : ಟೀಮ್ ಇಂಡಿಯಾದ ಸ್ಪಿನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್ (R Ashwin) ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ 700 ವಿಕೆಟ್’ಗಳ ಮೈಲುಗಲ್ಲು ನೆಟ್ಟಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧ ಡೊಮಿನಿಕಾದ ವಿಂಡ್ಸರ್ ಪಾರ್ಕ್ ಮೈದಾನದಲ್ಲಿ ಬುಧವಾರ ಆರಂಭಗೊಂಡ ಪ್ರಥಮ ಟೆಸ್ಟ್ ಪಂದ್ಯದಲ್ಲಿ (India Vs West Indies 1st test) ಅಶ್ವಿನ್ ಐದು ವಿಕೆಟ್’ಗಳ ಸಾಧನೆ ಮಾಡಿದರು. ಅಷ್ಟೇ ಅಲ್ಲದೇ ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ 700 ವಿಕೆಟ್’ಗಳನ್ನು ಪೂರ್ತಿಗೊಳಿಸಿದ ಮಹೋನ್ನತ ಮೈಲುಗಲ್ಲು ನೆಟ್ಟರು. ಈ ಸಾಧನೆ ಮಾಡಿದ ಭಾರತದ 3ನೇ ಹಾಗೂ ವಿಶ್ವದ 16ನೇ ಬೌಲರ್ ಎಂಬ ಹಿರಿಮೆಗೆ ಅಶ್ವಿನ್ ಪಾತ್ರರಾಗಿದ್ದಾರೆ.

ಅಶ್ವಿನ್ ಅವರಿಗೂ ಮುನ್ನ ಭಾರತ ಪರ ಸ್ಪಿನ್ ಮಾಂತ್ರಿಕರಾದ ಅನಿಲ್ ಕುಂಬ್ಳೆ ಮತ್ತು ಹರ್ಭಜನ್ ಸಿಂಗ್ ಈ ಸಾಧನೆ ಮಾಡಿದ್ದಾರೆ. ಕುಂಬ್ಳೆ 403 ಅಂತರಾಷ್ಟ್ರೀಯ ಪಂದ್ಯಗಳಿಂದ 956 ವಿಕೆಟ್’ಗಳನ್ನು ಪಡೆದಿದ್ರೆ, ಹರ್ಭಜನ್ ಸಿಂಗ್ 367 ಅಂತರಾಷ್ಟ್ರೀಯ ಪಂದ್ಯಗಳಿಂದ 711 ವಿಕೆಟ್ ಪಡೆದಿದ್ದಾರೆ. ಅಶ್ವಿನ್ 271 ಪಂದ್ಯಗಳಿಂದ 702 ವಿಕೆಟ್ ಕಬಳಿಸಿದ್ದಾರೆ.

ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ 700 ವಿಕೆಟ್ ಪಡೆದ ಭಾರತೀಯರು

  1. ಅನಿಲ್ ಕುಂಬ್ಳೆ: 756 ವಿಕೆಟ್ (403 ಪಂದ್ಯ)
  2. ಹರ್ಭಜನ್ ಸಿಂಗ್: 711 ವಿಕೆಟ್ (367 ಪಂದ್ಯ)
  3. ಆರ್. ಅಶ್ವಿನ್: 702 ವಿಕೆಟ್ (271 ಪಂದ್ಯ)

ವೃತ್ತಿಜೀವನದಲ್ಲಿ 91 ಟೆಸ್ಟ್ ಪಂದ್ಯಗಳನ್ನಾಡಿರುವ ಅಶ್ವಿನ್ 479 ವಿಕೆಟ್ ಪಡೆದಿದ್ದಾರೆ. 113 ಏಕದಿನ ಪಂದ್ಯಗಳಿಂದ 151 ವಿಕೆಟ್ ಹಾಗೂ 65 ಟಿ20 ಪಂದ್ಯಗಳಿಂದ 72 ವಿಕೆಟ್ ಕಬಳಿಸಿದ್ದಾರೆ.

ಇದನ್ನೂ ಓದಿ : Natwest final : ಐತಿಹಾಸಿಕ ನಾಟ್‌ವೆಸ್ಟ್ ಟ್ರೋಫಿ ಫೈನಲ್’ಗೆ 19ನೇ ಹ್ಯಾಪಿ ಬರ್ತ್ ಡೇ

ಇದನ್ನೂ ಓದಿ : Dhoni in Chennai : ಚೆನ್ನೈನಲ್ಲಿ ಅಭಿಮಾನಿಗಳ ಆಸೆ ಈಡೇರಿಸಿದ “ಥಲಾ” ಧೋನಿ

ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದಿರುವ ವಿಶ್ವದಾಖಲೆ ಶ್ರೀಲಂಕಾದ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ ಅವರ ಹೆಸರಲ್ಲಿದೆ. 495 ಪಂದ್ಯಗಳಿಂದ ಮುರಳಿ 1347 ವಿಕೆಟ್ ಪಡೆದಿದ್ದಾರೆ. 2ನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾದ ಸ್ಪಿನ್ ಮಾಂತ್ರಿಕ, ದಿವಂಗತ ಶೇನ್ ವಾರ್ನ್ 339 ಪಂದ್ಯಗಳಿಂದ 1001 ವಿಕೆಟ್ ಕಬಳಿಸಿದ್ದಾರೆ. ಇಂಗ್ಲೆಂಡ್ ವೇಗಿ ಜೇಮ್ಸ್ ಆಂಡರ್ಸನ್ 3ನೇ ಸ್ಥಾನದಲ್ಲಿದ್ದು, 394 ಪಂದ್ಯಗಳಿಂದ 975 ವಿಕೆಟ್ ಪಡೆದಿದ್ದಾರೆ.

https://twitter.com/realdpthakur17/status/1679213010685145088?s=20

Ashwin 700 wickets: 700 wickets in international cricket, spin wizard Ashwin is an outstanding achievement.

Comments are closed.