ಸೋಮವಾರ, ಜೂನ್ 16, 2025
HomeSportsCricketAshwin tests Covid Positive : ಸ್ಪಿನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್‌ಗೆ ಕೋವಿಡ್ ಪಾಸಿಟಿವ್

Ashwin tests Covid Positive : ಸ್ಪಿನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್‌ಗೆ ಕೋವಿಡ್ ಪಾಸಿಟಿವ್

- Advertisement -

ಲಂಡನ್: ಟೀಮ್ ಇಂಡಿಯಾದ ಸ್ಪಿನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್”ಗೆ ಕೋವಿಡ್ ಪಾಸಿಟಿವ್ (Ace Spinner Ashwin tests Covid Positive ಕಾಣಿಸಿಕೊಂಡಿದೆ. ಹೀಗಾಗಿ ಅಶ್ವಿನ್ ಇನ್ನೂ ಇಂಗ್ಲೆಂಡ್ ಪ್ರವಾಸಕ್ಕೆ ತೆರಳಿಲ್ಲ.

ಇಂಗ್ಲೆಂಡ್ ವಿರುದ್ಧ ಏಕೈಕ ಟೆಸ್ಟ್ (India tour of England 2022) ಹಾಗೂ ತಲಾ 3 ಪಂದ್ಯಗಳ ಏಕದಿನ-ಟಿ20 ಸರಣಿಯನ್ನಾಡಲು ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ, ಕಳೆದ ಗುರುವಾರ ಇಂಗ್ಲೆಂಡ್”ಗೆ ತೆರಳಿತ್ತು. ಲಂಡನ್”ಗೆ ಬಂದಿಳಿದಿದ್ದ ಟೀಮ್ ಇಂಡಿಯಾದಲ್ಲಿ ಅಶ್ವಿನ್ ಕಾಣಿಸಿಕೊಂಡಿರಲಿಲ್ಲ.

“’ಟೀಮ್ ಇಂಡಿಯಾ ಇಂಗ್ಲೆಂಡ್’ಗೆ ಪ್ರಯಾಣಿಸುವ ಮುನ್ನವೇ ಅಶ್ವಿನ್”ಗೆ ಕೋವಿಡ್ ಪಾಸಿಟಿವ್ ಕಾಣಿಸಿಕೊಂಡಿದ್ದರಿಂದ ಅವರು ಭಾರತ ತಂಡದ ಜೊತೆ ಪ್ರಯಾಣ ಬೆಳೆಸಲಿಲ್ಲ. ಆದರೆ ಜುಲೈ ಒಂದರಂದು ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯಕ್ಕೂ ಮುನ್ನ ಅವರು ಚೇತರಿಸಿಕೊಳ್ಳುವ ನಿರೀಕ್ಷೆಯಿದೆ” ಎಂದು ಬಿಸಿಸಿಐ (BCCI) ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕೋವಿಡ್ ಪಾಸಿಟಿವ್”ಗೆ ತುತ್ತಾಗಿರುವ ಅಶ್ವಿನ್ ಸದ್ಯ ಕ್ವಾರೆಂಟೈನ್ ಆಗಿದ್ದು, ಕೋವಿಡ್ ಶಿಷ್ಟಾಚಾರಗಳನ್ನೆಲ್ಲಾ ಪಾಲಿಸಿದ ನಂತರವೇ ಟೀಮ್ ಇಂಡಿಯಾವನ್ನು ಸೇರಿಕೊಳ್ಳಲಿದ್ದಾರೆ. ಕೋವಿಡ್ ಪಾಸಿಟಿವ್ ಕಾರಣ ಶುಕ್ರವಾರ ಲೀಸೆಸ್ಟರ್”ಶೈರ್ ವಿರುದ್ಧ ಆರಂಭವಾಗಲಿರುವ 4 ದಿನಗಳ ಅಭ್ಯಾಸ ಪಂದ್ಯವನ್ನು ಅಶ್ವಿನ್ ತಪ್ಪಿಸಿಕೊಳ್ಳಲಿದ್ದಾರೆ.

ಕೋವಿಡ್ ಕಾರಣ ಕಳೆದ ವರ್ಷ ಅರ್ಧಕ್ಕೇ ಮೊಟಕುಗೊಂಡಿದ್ದ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯ ಅಂತಿಮ ಟೆಸ್ಟ್ ಪಂದ್ಯ ಜುಲೈ ಒಂದರಂದು ಎಡ್ಜ್”ಬಾಸ್ಟನ್’ನಲ್ಲಿ ಆರಂಭವಾಗಲಿದೆ. ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ಸದ್ಯ 2-1ರಿಂದ ಮುನ್ನಡೆಯಲ್ಲಿದೆ.

ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ಇಂಗ್ಲೀಷ್‌ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ಇದನ್ನೂ ಓದಿ : Exclusive : KSCA ಆಯ್ಕೆ ಸಮಿತಿಯೊಂದಿಗೆ ಮನಸ್ತಾಪ ; ಕರ್ನಾಟಕ ತೊರೆಯಲು ಕೆ.ಗೌತಮ್ ನಿರ್ಧಾರ ?

ಇದನ್ನೂ ಓದಿ : Big Day in World Cricket : ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್’ಗೆ ಕಾಲಿಟ್ಟು ಇಂದಿಗೆ 11 ವರ್ಷ

ಇದನ್ನೂ ಓದಿ : ICC T20 World Cup : ಇದೇ ಟೀಮ್ ಇಂಡಿಯಾದ ಬೆಸ್ಟ್ ಪ್ಲೇಯಿಂಗ್ XI ; ಇದು News Next ಚಾಯ್ಸ್

Ashwin tests Covid Positive India tour of England 2022

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular