ಬೆಂಗಳೂರು: ಮುಂಬರುವ ಏಷ್ಯಾ ಕಪ್ ಏಕದಿನ ಟೂರ್ನಿಗೆ (Asia Cup 2023) ಭಾರತ ತಂಡದ ಆಯ್ಕೆ ಆಗಸ್ಟ್ 20ರಂದು (ಭಾನುವಾರ) ನಡೆಯುವ ಸಾಧ್ಯತೆಯಿದೆ. ಗಾಯದಿಂದ ಚೇತರಿಸಿಕೊಂಡಿರುವ ಕನ್ನಡಿಗ ಕೆ.ಎಲ್ ರಾಹುಲ್ (KL Rahul) ಮತ್ತು ಮುಂಬೈಕರ್ ಶ್ರೇಯಸ್ ಅಯ್ಯರ್ (Shreyas Iyer) ಭಾರತ ತಂಡಕ್ಕೆ ಮರಳುವುದು ಬಹುತೇಕ ಖಚಿತಗೊಂಡಿದೆ. ಇಬ್ಬರೂ ಈಗ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿದ್ದು, ಕಠಿಣ ಅಭ್ಯಾಸ ನಡೆಸುತ್ತಿದ್ದಾರೆ.
ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಸೋಮವಾರ ಎನ್’ಸಿಎ ಮೈದಾನದಲ್ಲಿ ಅಭ್ಯಾಸ ಪಂದ್ಯವಾಡಿದ್ದು, ಮ್ಯಾಚ್ ಫಿಟ್ನೆಸ್ ಸಾಬೀತು ಪಡಿಸಿದ್ದಾರೆ. ಆಗಸ್ಟ್ 18ರಂದು ಇಬ್ಬರೂ ಆಟಗಾರರಿಗೆ ಫಿಟ್ನೆಸ್ ಟೆಸ್ಟ್ ನಡೆಯುವ ಸಾಧ್ಯತೆಯಿದೆ.
ಇನ್ನು ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ಅಮೋಘ ಪ್ರದರ್ಶನ ತೋರಿರುವ ಮಧ್ಯಮ ಕ್ರಮಾಂಕದ ಯುವ ಎಡಗೈ ಬ್ಯಾಟ್ಸ್’ಮನ್ ತಿಲಕ್ ವರ್ಮಾ ಕೂಡ ಏಷ್ಯಾ ಕಪ್ ತಂಡದಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಿದೆ. ವಿಸಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ಆಡಿದ 3 ಪಂದ್ಯಗಳಿಂದ ತಿಲಕ್ ವರ್ಮಾ 173 ರನ್ ಕಲೆ ಹಾಕಿದ್ದರು.
ಇದನ್ನೂ ಓದಿ : Rohit Sharma Tiripati secret: ರೋಹಿತ್ ಶರ್ಮಾ ಯಶಸ್ಸಿನಲ್ಲಿ “ತಿರುಪತಿ” ಲಕ್, ಮತ್ತೆ “ತಿಮ್ಮಪ್ಪ”ನ ದರ್ಶನ ಮಾಡಿದ್ದು ಅದೇ ಕಾರಣಕ್ಕಾ?
ಏಷ್ಯಾ ಕಪ್ ಟೂರ್ನಿ ಆಗಸ್ಟ್ 31ರಂದು ಶ್ರೀಲಂಕಾದಲ್ಲಿ ಆರಂಭವಾಗಲಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಏಷ್ಯಾ ಕಪ್ ಹೈವೋಲ್ಟೇಜ್ ಪಂದ್ಯ ಸೆಪ್ಟೆಂಬರ್ 2ರಂದು ಶ್ರೀಲಂಕಾದ ಕ್ಯಾಂಡಿಯಲ್ಲಿ ನಡೆಯಲಿದೆ. ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತ, ಪಾಕಿಸ್ತಾನ, ಶ್ರೀಲಂಕಾ, ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ನೇಪಾಳ ತಂಡಗಳು ಭಾಗವಹಿಸಲಿವೆ.
ಏಷ್ಯಾ ಕಪ್ 2023 ಟೂರ್ನಿಯ ಲೀಗ್ ಪಂದ್ಯಗಳ ವೇಳಾಪಟ್ಟಿ (Asia Cup 2023 schedule)
ಆಗಸ್ಟ್ 30: ಪಾಕಿಸ್ತಾನ Vs ನೇಪಾಳ (ಬೆಳಗ್ಗೆ 10ಕ್ಕೆ, ಮುಲ್ತಾನ್)
ಆಗಸ್ಟ್ 31: ಶ್ರೀಲಂಕಾ Vs ಬಾಂಗ್ಲಾದೇಶ (ಬೆಳಗ್ಗೆ 9.30ಕ್ಕೆ, ಪಲ್ಲೆಕೆಲೆ)
ಸೆಪ್ಟೆಂಬರ್ 2: ಭಾರತ Vs ಪಾಕಿಸ್ತಾನ (ಬೆಳಗ್ಗೆ 9.30ಕ್ಕೆ, ಪಲ್ಲೆಕೆಲೆ)
ಸೆಪ್ಟೆಂಬರ್ 3: ಅಫ್ಘಾನಿಸ್ತಾನ Vs ಬಾಂಗ್ಲಾದೇಶ (ಬೆಳಗ್ಗೆ 9.30ಕ್ಕೆ, ಲಾಹೋರ್)
ಸೆಪ್ಟೆಂಬರ್ 4: ಭಾರತ Vs ನೇಪಾಳ (ಬೆಳಗ್ಗೆ 9.30ಕ್ಕೆ, ಪಲ್ಲೆಕೆಲೆ)
ಸೆಪ್ಟೆಂಬರ್ 5: ಅಫ್ಘಾನಿಸ್ತಾನ Vs ಶ್ರೀಲಂಕಾ (ಬೆಳಗ್ಗೆ 9.30ಕ್ಕೆ, ಲಾಹೋರ್)
Asia Cup 2023: Team India selected for August 20; Rahul, Shreyas comeback, Thilak Verma dark horse