Rohit Sharma Tiripati secret: ರೋಹಿತ್ ಶರ್ಮಾ ಯಶಸ್ಸಿನಲ್ಲಿ “ತಿರುಪತಿ” ಲಕ್, ಮತ್ತೆ “ತಿಮ್ಮಪ್ಪ”ನ ದರ್ಶನ ಮಾಡಿದ್ದು ಅದೇ ಕಾರಣಕ್ಕಾ?

ಬೆಂಗಳೂರು: Rohit Sharma Tiripati secret : ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಭಾನುವಾರ ತಿರುಪತಿಗೆ ಭೇಟಿ ನೀಡಿ ವೆಂಕಟೇಶ್ವರನ ದರ್ಶನ ಮಾಡಿದ್ದಾರೆ.

ಪತ್ನಿ ರಿತಿಕಾ ಸಜ್’ದೇ ಮತ್ತು ಪುತ್ರಿ ಸಮೈರಾ ಜೊತೆ ಕುಟುಂಬ ಸಮೇತ ತಿರುಪತಿಗೆ ತೆರಳಿದ್ದ ರೋಹಿತ್ ಶರ್ಮಾ ಬಾಲಾಜಿ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದ್ದಾರೆ. ಐಸಿಸಿ ವಿಶ್ವಕಪ್ ಟೂರ್ನಿಗೆ ಕೇವಲ ಒಂದೂವರೆ ತಿಂಗಳು ಬಾಕಿ ಇರುವ ಹೊತ್ತಲ್ಲಿ ರೋಹಿತ್ ಶರ್ಮಾ ತಿಮ್ಮಪ್ಪನಿಗೆ ನಮೋ ಎಂದಿದ್ದಾರೆ.

ಇಂಟ್ರೆಸ್ಟಿಂಗ್ ಸಂಗತಿ 2019ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೂ ಮುನ್ನ ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ತಿರುಪತಿ ತಿಮ್ಮಪ್ಪನ ದರ್ಶನ ಮಾಡಿ ವಿಶೇಷ ಪೂಜೆ ಸಲ್ಲಿಸಿದ್ದರು. ಇಂಗ್ಲೆಂಡ್’ನಲ್ಲಿ ನಡೆದ ಆ ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ಅಮೋಘ ಐದು ಶತಕಗಳನ್ನು ಬಾರಿಸಿದ್ದರು. 2019ರ ವಿಶ್ವಕಪ್’ನಲ್ಲಿ ಆಡಿದ 9 ಪಂದ್ಯಗಳಿಂದ ರೋಹಿತ್ ಶರ್ಮಾ 5 ಶತಕಗಳು ಹಾಗೂ ಒಂದು ಅರ್ಧಶತಕದ ನೆರವಿನಿಂದ 81ರ ಅಮೋಘ ಸರಾಸರಿಯಲ್ಲಿ 98.33ರ ಸ್ಟ್ರೈಕ್’ರೇಟ್’ನೊಂದಿಗೆ 648 ರನ್ ಕಲೆ ಹಾಕಿದ್ದರು. ಆದರೆ ವಿರಾಟ್ ಕೊಹ್ಲಿ ನಾಯಕತ್ವದ ಭಾರತ ತಂಡ ಸೆಮಿಫೈನಲ್’ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತು ನಿರಾಸೆ ಅನುಭವಿಸಿತ್ತು.

ಇದೀಗ ವಿಶ್ವಕಪ್ ಮತ್ತೊಮ್ಮೆ ಬಂದಿದ್ದು, ಈ ಬಾರಿಯ ಏಕದಿನ ಕ್ರಿಕೆಟ್ ಹಬ್ಬಕ್ಕೆ ಭಾರತವೇ ಆತಿಥ್ಯ ವಹಿಸುತ್ತಿದೆ. ಅಕ್ಟೋಬರ್ 5ರಂದು ವಿಶ್ವಕಪ್ ಟೂರ್ನಿ ಆರಂಭವಾಗಲಿದ್ದು, ಭಾರತ ತಂಡ 12 ವರ್ಷಗಳ ನಂತರ ಮತ್ತೊಮ್ಮೆ ಚಾಂಪಿಯನ್ ಪಟ್ಟಕ್ಕೇರುವ ನಿರೀಕ್ಷೆಯಲ್ಲಿದೆ. 2011ರಲ್ಲಿ ಭಾರತದಲ್ಲೇ ನಡೆದ ಐಸಿಸಿ ಏಕದಿನ ವಿಶ್ವಕಪ್’ನಲ್ಲಿ ಭಾರತ ತಂಡ ಎಂ.ಎಸ್ ಧೋನಿ ನಾಯಕತ್ವದಲ್ಲಿ ಪ್ರಶಸ್ತಿ ಗೆದ್ದಿತ್ತು. ಇದನ್ನೂ ಓದಿ : Virat Kohli house : ಅಲಿಬಾಗ್’ನಲ್ಲಿ ವಿರಾಟ್ ಮನೆ, 8 ಎಕರೆಯಲ್ಲಿ ಐಷಾರಾಮಿ ಮನೆ ಕಟ್ಟುವ ಕಾರ್ಯಕ್ಕೆ ವಿರುಷ್ಕಾ ಚಾಲನೆ

ಈ ಬಾರಿಯ ಐಸಿಸಿ ವಿಶ್ವಕಪ್ ಟೂರ್ನಿ ಅಕ್ಟೋಬರ್ 5ರಂದು ಆರಂಭವಾಗಲಿದೆ. ಅಕ್ಟೋಬರ್ 5ರಂದು ಅಹ್ಮದಾಬಾದ್’ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುವ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ಕಳೆದ ಬಾರಿಯ ರನ್ನರ್ಸ್ ಅಪ್ ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಲಿವೆ.

ಅಕ್ಟೋಬರ್ 15ರಂದು ನಡೆಯುವ ಭಾರತ ಮತ್ತು ಪಾಕಿಸ್ತಾನ (India Vs Pakistan) ಪಂದ್ಯಕ್ಕೂ ಅಹ್ಮದಾಬಾದ್’ನ ನರೇಂದ್ರ ಮೋದಿ ಕ್ರೀಡಾಂಗಣವೇ ಆತಿಥ್ಯ ವಹಿಸಲಿದೆ. ಅಕ್ಟೋಬರ್ 8ರದು ಆಸ್ಟ್ರೇಲಿಯಾ ವಿರುದ್ಧ ಚೆನ್ನೈನಲ್ಲಿ ನಡೆಯುವ ಪಂದ್ಯದ ಮೂಲಕ 2 ಬಾರಿಯ ಚಾಂಪಿಯನ್ ಭಾರತ ತಂಡದ ವಿಶ್ವಕಪ್ ಅಭಿಯಾನ ಆರಂಭವಾಗಲಿದೆ.

ಐಸಿಸಿ ವಿಶ್ವಕಪ್ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ (ICC World Cup 2023 Schedule) :

 • ಅಕ್ಟೋಬರ್ 5: ಇಂಗ್ಲೆಂಡ್ Vs ನ್ಯೂಜಿಲೆಂಡ್ (ಅಹ್ಮದಾಬಾದ್)
 • ಅಕ್ಟೋಬರ್ 6: ಪಾಕಿಸ್ತಾನ Vs ಕ್ವಾಲಿಫೈಯರ್-1 (ಹೈದರಾಬಾದ್)
 • ಅಕ್ಟೋಬರ್ 7: ಬಾಂಗ್ಲಾದೇಶ Vs ಅಫ್ಘಾನಿಸ್ತಾನ (ಧರ್ಮಶಾಲಾ)
 • ಅಕ್ಟೋಬರ್ 7: ದಕ್ಷಿಣ ಆಫ್ರಿಕಾ Vs ಕ್ವಾಲಿಫೈಯರ್-2 (ದೆಹಲಿ)
 • ಅಕ್ಟೋಬರ್ 8: ಭಾರತ Vs ಆಸ್ಟ್ರೇಲಿಯಾ (ಚೆನ್ನೈ)
 • ಅಕ್ಟೋಬರ್ 9: ನ್ಯೂಜಿಲೆಂಡ್ Vs ಕ್ವಾಲಿಫೈಯರ್-1 (ಹೈದರಾಬಾದ್)
 • ಅಕ್ಟೋಬರ್ 10: ಇಂಗ್ಲೆಂಡ್ Vs ಬಾಂಗ್ಲಾದೇಶ (ಧರ್ಮಶಾಲಾ)
 • ಅಕ್ಟೋಬರ್ 11: ಭಾರತ Vs ಅಫ್ಘಾನಿಸ್ತಾನ (ದೆಹಲಿ)
 • ಅಕ್ಟೋಬರ್ 12: ಪಾಕಿಸ್ತಾನ Vs ಕ್ವಾಲಿಫೈಯರ್-2 (ಹೈದರಾಬಾದ್)
 • ಅಕ್ಟೋಬರ್ 13: ಆಸ್ಟ್ರೇಲಿಯಾ Vs ದಕ್ಷಿಣ ಆಫ್ರಿಕಾ (ಲಕ್ನೋ)
 • ಅಕ್ಟೋಬರ್ 14: ಇಂಗ್ಲೆಂಡ್ Vs ಅಫ್ಘಾನಿಸ್ತಾನ (ದೆಹಲಿ)
 • ಅಕ್ಟೋಬರ್ 14: ಬಾಂಗ್ಲಾದೇಶ Vs ನ್ಯೂಜಿಲೆಂಡ್ (ಚೆನ್ನೈ)
 • ಅಕ್ಟೋಬರ್ 15: ಭಾರತ Vs ಪಾಕಿಸ್ತಾನ (ಅಹ್ಮದಾಬಾದ್)
 • ಅಕ್ಟೋಬರ್ 16: ಆಸ್ಟ್ರೇಲಿಯಾ Vs ಕ್ವಾಲಿಫೈಯರ್-2 (ಲಕ್ನೋ)
 • ಅಕ್ಟೋಬರ್ 17: ದಕ್ಷಿಣ ಆಫ್ರಿಕಾ Vs ಕ್ವಾಲಿಫೈಯರ್-1(ಧರ್ಮಶಾಲಾ)
 • ಅಕ್ಟೋಬರ್ 18: ಅಫ್ಘಾನಿಸ್ತಾನ Vs ನ್ಯೂಜಿಲೆಂಡ್ (ಚೆನ್ನೈ)
 • ಅಕ್ಟೋಬರ್ 19: ಭಾರತ Vs ಬಾಂಗ್ಲಾದೇಶ (ಪುಣೆ)
 • ಅಕ್ಟೋಬರ್ 20: ಆಸ್ಟ್ರೇಲಿಯಾ Vs ಪಾಕಿಸ್ತಾನ (ಬೆಂಗಳೂರು)
 • ಅಕ್ಟೋಬರ್ 21: ಇಂಗ್ಲೆಂಡ್ Vs ದಕ್ಷಿಣ ಆಫ್ರಿಕಾ (ಮುಂಬೈ)
 • ಅಕ್ಟೋಬರ್ 21: ಕ್ವಾಲಿಫೈಯರ್-1 Vs ಕ್ವಾಲಿಫೈಯರ್-2 (ಲಕ್ನೋ)
 • ಅಕ್ಟೋಬರ್ 22: ಭಾರತ Vs ನ್ಯೂಜಿಲೆಂಡ್ (ಧರ್ಮಶಾಲಾ)
 • ಅಕ್ಟೋಬರ್ 23: ಪಾಕಿಸ್ತಾನ Vs ಅಫ್ಘಾನಿಸ್ತಾನ (ಚೆನ್ನೈ)
 • ಅಕ್ಟೋಬರ್ 24: ದಕ್ಷಿಣ ಆಫ್ರಿಕಾ Vs ಬಾಂಗ್ಲಾದೇಶ (ಮುಂಬೈ)
 • ಅಕ್ಟೋಬರ್ 25: ಆಸ್ಟ್ರೇಲಿಯಾ Vs ಕ್ವಾಲಿಫೈಯರ್-1 (ದೆಹಲಿ)
 • ಅಕ್ಟೋಬರ್ 26: ಇಂಗ್ಲೆಂಡ್ Vs ಕ್ವಾಲಿಫೈಯರ್-2 (ಬೆಂಗಳೂರು)
 • ಅಕ್ಟೋಬರ್ 27: ಪಾಕಿಸ್ತಾನ Vs ದಕ್ಷಿಣ ಆಫ್ರಿಕಾ (ಚೆನ್ನೈ)
 • ಅಕ್ಟೋಬರ್ 28: ಕ್ವಾಲಿಫೈಯರ್-2 Vs ಬಾಂಗ್ಲಾದೇಶ (ಕೋಲ್ಕತಾ)
 • ಅಕ್ಟೋಬರ್ 28: ಆಸ್ಟ್ರೇಲಿಯಾ Vs ನ್ಯೂಜಿಲೆಂಡ್ (ಧರ್ಮಶಾಲಾ)
 • ಅಕ್ಟೋಬರ್ 29: ಭಾರತ Vs ಇಂಗ್ಲೆಂಡ್ (ಲಕ್ನೋ)
 • ಅಕ್ಟೋಬರ್ 30: ಅಫ್ಘಾನಿಸ್ತಾನ Vs ಕ್ವಾಲಿಫೈಯರ್-2 (ಪುಣೆ)
 • ಅಕ್ಟೋಬರ್ 31: ಪಾಕಿಸ್ತಾನ Vs ಬಾಂಗ್ಲಾದೇಶ (ಕೋಲ್ಕತಾ)
 • ನವೆಂಬರ್ 1: ದಕ್ಷಿಣ ಆಫ್ರಿಕಾ Vs ನ್ಯೂಜಿಲೆಂಡ್ (ಪುಣೆ)
 • ನವೆಂಬರ್ 2: ಭಾರತ Vs ಕ್ವಾಲಿಫೈಯರ್-2 (ಮುಂಬೈ)
 • ನವೆಂಬರ್ 3: ಕ್ವಾಲಿಫೈಯರ್-1Vs ಅಫ್ಘಾನಿಸ್ತಾನ (ಲಕ್ನೋ)
 • ನವೆಂಬರ್ 4: ಇಂಗ್ಲೆಂಡ್ Vs ಆಸ್ಟ್ರೇಲಿಯಾ (ಅಹ್ಮದಾಬಾದ್)
 • ನವೆಂಬರ್ 4: ಪಾಕಿಸ್ತಾನ Vs ನ್ಯೂಜಿಲೆಂಡ್ (ಬೆಂಗಳೂರು)
 • ನವೆಂಬರ್ 5: ದಕ್ಷಿಣ ಆಫ್ರಿಕಾ Vs ಭಾರತ (ಕೋಲ್ಕತಾ)
 • ನವೆಂಬರ್ 6: ಬಾಂಗ್ಲಾದೇಶ Vs ಕ್ವಾಲಿಫೈಯರ್-2 (ದೆಹಲಿ)
 • ನವೆಂಬರ್ 7: ಆಸ್ಟ್ರೇಲಿಯಾ Vs ಅಫ್ಘಾನಿಸ್ತಾನ (ಮುಂಬೈ)
 • ನವೆಂಬರ್ 8: ಇಂಗ್ಲೆಂಡ್ Vs ಕ್ವಾಲಿಫೈಯರ್-1 (ಪುಣೆ)
 • ನವೆಂಬರ್ 9: ನ್ಯೂಜಿಲೆಂಡ್ Vs ಕ್ವಾಲಿಫೈಯರ್-2 (ಬೆಂಗಳೂರು)
 • ನವೆಂಬರ್ 10: ದಕ್ಷಿಣ ಆಫ್ರಿಕಾ Vs ಅಫ್ಘಾನಿಸ್ತಾನ (ಅಹ್ಮದಾಬಾದ್)
 • ನವೆಂಬರ್ 11: ಭಾರತ Vs ಕ್ವಾಲಿಫೈಯರ್-1 (ಬೆಂಗಳೂರು)
 • ನವೆಂಬರ್ 12: ಇಂಗ್ಲೆಂಡ್ Vs ಪಾಕಿಸ್ತಾನ (ಕೋಲ್ಕತಾ)
 • ನವೆಂಬರ್ 12: ಆಸ್ಟ್ರೇಲಿಯಾ Vs ಬಾಂಗ್ಲಾದೇಶ (ಪುಣೆ)
 • ನವೆಂಬರ್ 15: ಸೆಮಿಫೈನಲ್-1 (ಮುಂಬೈ)
 • ನವೆಂಬರ್ 16: ಸೆಮಿಫೈನಲ್-2 (ಕೋಲ್ಕತಾ)
 • ನವೆಂಬರ್ 19: ಫೈನಲ್ (ಅಹ್ಮದಾಬಾದ್)

Rohit Sharma Tiripati secret: Rohit Sharma’s luck of “Tirupathi” in success, is it the same reason that he visited “Thimmappa” again?

Comments are closed.