ಹ್ಯಾಂಗ್ ಝೌನ್ : ಏಷ್ಯನ್ ಗೇಮ್ಸ್‌ನಲ್ಲಿ ( Asian Games 2023 Cricket) ಪುರುಷರ ಕ್ರಿಕೆಟ್ ಫೈನಲ್ (Cricket Final) ಪಂದ್ಯ ಇಂದು ನಡೆಯಲಿದೆ. ಫೈನಲ್ ಪಂದ್ಯದಲ್ಲಿ ಭಾರತ ಹಾಗೂ ಅಪ್ಘಾನಿಸ್ತಾನ (India vs Afghanistan )ತಂಡಗಳು ಮುಖಾಮುಖಿಯಾಗುತ್ತಿವೆ. ಇದೀಗ ಭಾರತಕ್ಕೆ ಮತ್ತೊಂದು ಚಿನ್ನ ಗೆಲ್ಲುವ ಅವಕಾಶವಿದೆ.

ಚೀನಾದ ಹ್ಯಾಂಗ್ ಝೌನ್‌ನಲ್ಲಿರುವ ಜೆಜಿಯಾಂಗ್ ತಂತ್ರಜ್ಞಾನ ವಿಶ್ವವಿದ್ಯಾಲಯದ ಪಿಂಗ್‌ಫೆಂಗ್ ಕ್ರಿಕೆಟ್ ಮೈದಾನದಲ್ಲಿ ಇಂದು ನಡೆಯಲಿರುವ ಪಂದ್ಯದಲ್ಲಿ ಭಾರತ ತಂಡ ಅಫ್ಘಾನಿಸ್ತಾನ ತಂಡವನ್ನು ಎದುರಿಸಲಿದೆ. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ನೇಪಾಳ ಹಾಗೂ ಸೆಮಿಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಸೋಲಿಸಿ ಭಾರತ ಫೈನಲ್‌ಗೆ ಎಂಟ್ರಿ ಕೊಟ್ಟಿದೆ.
ಇನ್ನು ಅಫ್ಘಾನಿಸ್ತಾನ ತಂಡ ಕೂಡ ಬಲಿಷ್ಠವಾಗಿದೆ. ಈಗಾಗಲೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ಹಾಗೂ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಸೋಲಿಸುವ ಮೂಲಕ ಫೈನಲ್‌ಗೆ ಲಗ್ಗೆ ಇಟ್ಟಿದ್ದು, ಇದೀಗ ಚಿನ್ನ ಗೆಲ್ಲುವ ಕನಸು ಕಾಣುತ್ತಿದೆ.
ಇದನ್ನೂ ಓದಿ : ಏಷ್ಯನ್ ಗೇಮ್ಸ್ ಫೈನಲ್‌ಗೆ ಲಗ್ಗೆ ಇಟ್ಟ ಭಾರತ : ಸಾಯಿ ಕಿಶೋರ್ ದಾಳಿಗೆ ಬಾಂಗ್ಲಾ ಉಡೀಸ್
ಭಾರತ ಕ್ರಿಕೆಟ್ ತಂಡ (indian Cricket Team) ಇದೇ ಮೊದಲ ಬಾರಿಗೆ ಏಷ್ಯನ್ ಗೇಮ್ಸ್‌ನಲ್ಲಿ ಕಾಣಿಸಿಕೊಂಡಿದೆ. ಇನ್ನು ಹರ್ಮನ್ ಪ್ರೀತ್ ಕೌರ್ ನೇತೃತ್ವದ ಭಾರತ ಮಹಿಳಾ ತಂಡ ಈಗಾಗಲೇ ಚಿನ್ನದ ಪದಕವನ್ನು ಜಯಿಸಿತ್ತು. ಭಾರತ ತಂಡ ಬಲಿಷ್ಠವಾಗಿದ್ದು, ರುತುರಾಜ್ ಗಾಯಕ್ವಾಡ್ ನೇತೃತ್ವದಲ್ಲಿ ಕಣಕ್ಕೆ ಇಳಿಯಲಿದೆ.

ಯಶಸ್ವಿ ಜೈಸ್ವಾಲ್, ರುತುರಾಜ್ ಗಾಯಕ್ವಾಡ್, ತಿಲಕ್ ವರ್ಮಾ, ರಿಂಕು ಸಿಂಗ್ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಆವೇಶ್ ಖಾನ್, ಅರ್ಷದೀಪ್ ಸಿಂಗ್, ರವಿ ಬಿಶ್ನೋಹಿ ಹಾಗೂ ಸಾಯಿ ಕಿಶೋರ್ ಅದ್ಬುತ ಬೌಲಿಂಗ್ ಪ್ರದರ್ಶನವನ್ನು ನೀಡಿದ್ದಾರೆ.
ಇದನ್ನೂ ಓದಿ : ವಿಶ್ವಕಪ್ 2023 : ಶುಭಮನ್ ಗಿಲ್ ಔಟ್, ರೋಹಿತ್ ಶರ್ಮಾ- ಇಶಾನ್ ಕಿಶಾನ್ ಓಪನರ್
ಇನ್ನು ಕಂಚಿನ ಪದಕಕ್ಕಾಗಿ ಬಾಂಗ್ಲಾದೇಶ ಹಾಗೂ ಪಾಕಿಸ್ತಾನ ತಂಡಗಳು ಸೆಣೆಸಾಟವನ್ನು ನಡೆಸುತ್ತಿವೆ. ಯಾವ ತಂಡ ಜಯಿಸುತ್ತೋ ಆ ತಂಡ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಳ್ಳಲಿದೆ. ಇನ್ನು ಏಷ್ಯನ್ ಗೇಮ್ಸ್‌ನ ಕ್ರಿಕೆಟ್ ಪಂದ್ಯಾವಳಿಯ ಫೈನಲ್‌ನಲ್ಲಿ ವಿಜೇತವಾಗುವ ತಂಡ ಚಿನ್ನದ ಪದಕ ಹಾಗೂ ರನ್ನರ್ಸ್ ಅಪ್ ತಂಡ ಬೆಳ್ಳಿಯ ಪದಕವನ್ನು ಗೆಲ್ಲಲಿದೆ.

ಏಷ್ಯನ್ ಗೇಮ್ಸ್ ಕ್ರಿಕೆಟ್ ಫೈನಲ್ ತಂಡಗಳು :
ಭಾರತ ತಂಡ: ಯಶಸ್ವಿ ಜೈಸ್ವಾಲ್, ರುತುರಾಜ್ ಗಾಯಕ್ವಾಡ್(ನಾಯಕ), ತಿಲಕ್ ವರ್ಮಾ, ಜಿತೇಶ್ ಶರ್ಮಾ(ವಿಕೆಟ್ ಕೀಪರ್), ಶಿವಂ ದುಬೆ, ರಿಂಕು ಸಿಂಗ್, ವಾಷಿಂಗ್ಟನ್ ಸುಂದರ್, ಶಹಬಾಜ್ ಅಹ್ಮದ್, ರವಿ ಬಿಷ್ಣೋಯ್, ರವಿಶ್ರೀನಿವಾಸನ್ ಸಾಯಿ ಕಿಶೋರ್, ಅರ್ಷದೀಪ್ ಸಿಂಗ್, ರಾಹುಲ್ ತ್ರಿಪಾಠಿ, ಅವೇಶ್ ಖಾನ್, ಮುಖೇಶ್ ಕುಮಾರ್, ಪ್ರಭಾಸಿಮ್ರಾನ್ ಸಿಂಗ್, ಆಕಾಶ್ ದೀಪ್
ಅಫ್ಘಾನಿಸ್ತಾನ ತಂಡ: ಸೇದಿಕುಲ್ಲಾ ಅಟಲ್, ಮೊಹಮ್ಮದ್ ಶಹಜಾದ್(ವಿಕೆಟ್ ಕೀಪರ್), ನೂರ್ ಅಲಿ ಜದ್ರಾನ್, ಶಾಹಿದುಲ್ಲಾ ಕಮಾಲ್, ಅಫ್ಸರ್ ಝಜೈ, ಕರೀಂ ಜನತ್, ಗುಲ್ಬದಿನ್ ನೈಬ್(ನಾಯಕ), ಶರಫುದ್ದೀನ್ ಅಶ್ರಫ್, ಖೈಸ್ ಅಹ್ಮದ್, ಫರೀದ್ ಅಹ್ಮದ್ ಮಲಿಕ್, ಜಹೀರ್ ಖಾನ್, ಸಯೀದ್ ಶಿರ್ಜಾದ್, ಸಯೀದ್ ಶಿರ್ಜಾದ್ ಜುಬೈದ್ ಅಕ್ಬರಿ, ವಫಿವುಲ್ಲಾ ತಾರಖಿಲ್
Asian Games 2023 Cricket Final India vs Afghanistan today