ವಿಶ್ವಕಪ್‌ 2023: ಜಿಯೋ ಹೊಸ 6 ಪ್ರಿಪೇಯ್ಡ್‌ ಫ್ಲಾನ್‌ : ಡಿಸ್ನಿ+ಹಾಟ್‌ಸ್ಟಾರ್ ಉಚಿತ ಜೊತೆ ಅನ್‌ಲಿಮಿಟೆಡ್‌ ಡೇಟಾ

ಐಸಿಸಿ ಕ್ರಿಕೆಟ್‌ ವಿಶ್ವಕಪ್‌ ಗಾಗಿ ಜಿಯೋ ಹೊಸ ಪ್ರಿಪೇಯ್ಡ್‌ ಯೋಜನೆಗಳನ್ನು ಪರಿಚಯಿಸಿದೆ. ಅತ್ಯಂತ ಕಡಿಮೆ ಬೆಲೆಯ ಈ ಪ್ರಿಪೇಯ್ಡ್‌ ಫ್ಲ್ಯಾನ್‌ಗಳ (Jio Prepaid Plans) ಮೂಲಕ ಗ್ರಾಹಕರು ಕ್ರಿಕೆಟ್‌ ಜೊತೆಗೆ ಅನ್‌ಲಿಮಿಟೆಡ್‌ ಡೇಟಾವನ್ನು (Jio Unlimited Data) ಆನಂದಿಸಬಹುದಾಗಿದೆ.

ಐಸಿಸಿ ಕ್ರಿಕೆಟ್‌ ವಿಶ್ವಕಪ್‌ ಗಾಗಿ ಜಿಯೋ ಹೊಸ ಪ್ರಿಪೇಯ್ಡ್‌ ಯೋಜನೆಗಳನ್ನು ಪರಿಚಯಿಸಿದೆ. ಅತ್ಯಂತ ಕಡಿಮೆ ಬೆಲೆಯ ಈ ಜಿಯೋ ಪ್ರಿಪೇಯ್ಡ್‌ ಫ್ಲ್ಯಾನ್‌ಗಳ (Jio Prepaid Plans) ಮೂಲಕ ಗ್ರಾಹಕರು ಕ್ರಿಕೆಟ್‌ ಜೊತೆಗೆ ಅನ್‌ಲಿಮಿಟೆಡ್‌ ಡೇಟಾವನ್ನು (Jio Unlimited Data) ಆನಂದಿಸಬಹುದಾಗಿದೆ. ಸದ್ಯ6 ಪ್ರಿಪೇಯ್ಡ್‌ ಯೋಜನೆಗಳನ್ನು (Jio New Prepaid Plans)  ಪರಿಚಯಿಸಿದೆ.

ಭಾರತದ ಖಾಸಗಿ ಟೆಲಿಕಾಂ ಕ್ಷೇತ್ರದ ಮುಂಚೂಣಿಯ ಸ್ಥಾನದಲ್ಲಿರುವ ರಿಲಯನ್ಸ್ ಇಂಡಸ್ಟ್ರೀಸ್‌ನ (Reliance Industries) ಜಿಯೋ ಗ್ರಾಹಕರಿಗಾಗಿ (Jio Customer) ಹೊಸ ಹೊಸ ಯೋಜನೆಗಳನ್ನು ಪರಿಚಯಿಸುತ್ತಿದೆ. ಇದೀಗ ಐಸಿಸಿ ವಿಶ್ವಕಪ್‌ (ICC Cricket World Cup Jio Plans) ನಡೆಯುತ್ತಿದ್ದು, ತನ್ನ ಗ್ರಾಹಕರಿಗೆ ಕ್ರಿಕೆಟ್‌ ನೋಡಲು ಅನುಕೂಲವಾಗುವ ನಿಟ್ಟಿನಲ್ಲಿ ಡೆಸ್ನಿ+ ಹಾಟ್‌ಸ್ಟಾರ್‌ (Free Disney +Hotstar Subcription) ಚಂದಾದಾರಿಕೆಯನ್ನು ಉಚಿತವಾಗಿ ನೀಡುತ್ತಿದೆ.

ICC Cricket World Cup 2023 Jio New 6 Prepaid Plans Just 328 rs Free Disney Hotstar Subscription
Image Credit to Original Source

ಒಟ್ಟು ಆರು ಹೊಸ ಪ್ರಿಪೇಯ್ಡ್‌ ಫ್ಲ್ಯಾನ್‌ಗಳನ್ನು ಜಿಯೋ ಪರಿಚಯಿಸಿದ್ದು, ಒಂದು ತಿಂಗಳ ಕಾಲಾವಕಾಶವನ್ನು ನೀಡಿದೆ. ಗ್ರಾಹಕರು ಅತ್ಯಂತ ಕಡಿಮೆ ಬೆಲೆಗೆ ಅಂದ್ರೆ ಕೇವಲ 328ರೂ.ನಿಂದ ಈ ಯೋಜನೆಗಳು ಆರಂಭಗೊಳ್ಳುತ್ತಿವೆ. ಭಾರತದಲ್ಲಿ ನಡೆಯುತ್ತಿರುವ ವಿಶ್ವಕಪ್‌ ಜನಪ್ರಿಯತೆಯನ್ನು ಗಮನದಲ್ಲಿ ಇರಿಸಿಕೊಂಡು ಈ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ.

ಇದನ್ನೂ ಓದಿ : 50MP ಕ್ಯಾಮೆರಾ, 256 GB Ram, ಅತ್ಯಾಧುನಿಕ ತಂತ್ರಜ್ಞಾನ: ಶೀಘ್ರದಲ್ಲೇ ಬಿಡುಗಡೆ ಆಗಲಿದೆ Google Pixel 8

ಈಗಾಗಲೇ ವಿಶ್ವಕಪ್‌ ಆರಂಭಗೊಂಡಿದ್ದು, ನವೆಂಬರ್ 19ರ ವರೆಗೆ ಮುಂದುವರಿಯಲಿದೆ. ಕ್ರಿಕೆಟ್ ವಿಶ್ವಕಪ್ 2023 ಅನ್ನು ಡಿಸ್ನಿ+ಹಾಟ್‌ಸ್ಟಾರ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲೈವ್-ಸ್ಟ್ರೀಮ್ ಮಾಡಲಾಗುತ್ತಿದೆ. ಜಿಯೋ ಗ್ರಾಹಕರು ಹೊಸ ಯೋಜನೆಯನ್ನು ರಿಚಾರ್ಜ್‌ ಮಾಡುವ ಮೂಲಕ ಕ್ರಿಕೆಟ್‌ ವಿಶ್ವಕಪ್‌ ವೀಕ್ಷಣೆ ಮಾಡಬಹುದಾಗಿದೆ.

ಐಸಿಸಿ ಕ್ರಿಕೆಟ್ ವಿಶ್ವಕಪ್‌ : ಜಿಯೋದ ಹೊಸ ಯೋಜನೆಗಳು :

ಪ್ರಿಪೇಯ್ಡ್ ಯೋಜನೆ: 328ರೂ.ಫ್ಲ್ಯಾನ್‌
ಪ್ರಿಪೇಯ್ಡ್ ಯೋಜನೆಯು 3 ತಿಂಗಳ ಉಚಿತ ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆ. ಜೊತೆಗೆ 28 ದಿನಕ್ಕೆ 1.5 GB ಡೇಟಾವನ್ನು ನೀಡುತ್ತದೆ.

ಪ್ರಿಪೇಯ್ಡ್ ಯೋಜನೆ : 388ರೂ.ಫ್ಲ್ಯಾನ್‌
ಈ ಯೋಜನೆಯು ದಿನಕ್ಕೆ 2 GB ಡೇಟಾವನ್ನು 28 ದಿನಗಳ ವ್ಯಾಲಿಡಿಟಿಯನ್ನು ನೀಡುತ್ತದೆ. 3-ತಿಂಗಳ ಕಾಲ ಉಚಿತ ಡಿಸ್ನಿ + ಹಾಟ್‌ಸ್ಟಾರ್ ಚಂದಾದಾರಿಕೆ ನೀಡಲಾಗುತ್ತದೆ.

ICC Cricket World Cup 2023 Jio New 6 Prepaid Plans Just 328 rs Free Disney Hotstar Subscription
Image Credit to Original Source

ಪ್ರಿಪೇಯ್ಡ್ ಯೋಜನೆ : 758ರೂ. ಫ್ಲ್ಯಾನ್‌
ಹೊಸ ಯೋಜನೆಯು ದಿನಕ್ಕೆ 1.5 GB ಡೇಟಾವನ್ನು 84 ದಿನಗಳ ವ್ಯಾಲಿಡಿಟಿಯೊಂದಿಗೆ ನೀಡುತ್ತಿದೆ. ಅಲ್ಲದೇ 3 ತಿಂಗಳ ಡಿಸ್ನಿ + ಹಾಟ್‌ಸ್ಟಾರ್ ಚಂದಾದಾರಿಕೆಯನ್ನು ನೀಡುತ್ತದೆ.

ಪ್ರಿಪೇಯ್ಡ್ ಯೋಜನೆ: 808 ರೂ. ಫ್ಲ್ಯಾನ್‌
ಹೊಸ 808 ರೂ. ಪ್ರಿಪೇಯ್ಡ್ ಯೋಜನೆಯು ದಿನಕ್ಕೆ 2GB ಡೇಟಾವನ್ನು 84 ದಿನಗಳ ವ್ಯಾಲಿಡಿಟಿಯೊಂದಿಗೆ ನೀಡುತ್ತದೆ. ಅಲ್ಲದೇ 3 ತಿಂಗಳವರೆಗೆ Disney+Hotstar ಚಂದಾದಾರಿಕೆಯನ್ನು ನೀಡುತ್ತದೆ.

ಇದನ್ನೂ ಓದಿ : Apple IPhone 15: ಶೀಘ್ರದಲ್ಲೇ ಐಪೋನ್‌ 15 ಬಿಡುಗಡೆ : ಭಾರತದಲ್ಲೇ ಸಿದ್ದವಾದ ಈ ಐಪೋನ್ ಬೆಲೆ ಎಷ್ಟು ?

ಪ್ರಿಪೇಯ್ಡ್ ಯೋಜನೆ: 598ರೂ. ಫ್ಲ್ಯಾನ್‌
Jio ನ ಹೊಸ 598ರೂ. ಪ್ರಿಪೇಯ್ಡ್ ಯೋಜನೆಯು 28 ದಿನಗಳ ವ್ಯಾಲಿಡಿಟಿಯ ಜೊತೆಗೆ ಪ್ರತೀ ದಿನವೂ 2GB ಡೇಟಾವನ್ನು ನೀಡುತ್ತದೆ. ಇನ್ನು ಒಂದು ವರ್ಷಕ್ಕೆ ಪೂರ್ಣ Disney+Hotstar ಚಂದಾದಾರಿಕೆಯನ್ನು ನೀಡುತ್ತದೆ.

ಪ್ರಿಪೇಯ್ಡ್ ಯೋಜನೆ:3,178ರೂ. ಫ್ಲ್ಯಾನ್‌
ಜಿಯೋ ಮತ್ತೊಂದು ಹೊಸ ಪ್ರಿಪೇಯ್ಡ್ ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆಯ ಮೂಲಕ ದಿನಕ್ಕೆ 2GB ಡೇಟಾವನ್ನು ಒಂದು ವರ್ಷದ ಅವಧಿಗೆ ಪಡೆದುಕೊಳ್ಳ ಬಹುದಾಗಿದೆ. ಜೊತೆಗೆ Disney+Hotstar ಚಂದಾದಾರಿಕೆ ಕೂಡ ಒಂದು ವರ್ಷದ ಅವಧಿಗೆ ದೊರೆಯುತ್ತಿದೆ.

ಇಷ್ಟು ಮಾತ್ರವಲ್ಲದೇ ಜಿಯೋ ಬಳಕೆದಾರರು 331ರೂ. ಫ್ಲ್ಯಾನ್‌ನಲ್ಲಿ ಇನ್ನೂ 3 ತಿಂಗಳ ಡಿಸ್ನಿ+ಹಾಟ್‌ಸ್ಟಾರ್ ಚಂದಾದಾರಿಕೆಯ ಜೊತೆಗ 30 ದಿನಗಳ ಅವಧಿಗೆ 40GB ಡೇಟಾವನ್ನು ನೀಡುತ್ತದೆ.

ICC Cricket World Cup 2023 Jio New 6 Prepaid Plans Just 328 rs Free Disney Hotstar Subscription

Comments are closed.