ಸೋಮವಾರ, ಏಪ್ರಿಲ್ 28, 2025
HomeSportsCricketAndrew Symonds Dies : ಆಸ್ಟ್ರೇಲಿಯಾದ ಕ್ರಿಕೆಟ್‌ ದಿಗ್ಗಜ ಆಂಡ್ರ್ಯೂ ಸೈಮಂಡ್ಸ್ ಕಾರು ಅಪಘಾತದಲ್ಲಿ ನಿಧನ

Andrew Symonds Dies : ಆಸ್ಟ್ರೇಲಿಯಾದ ಕ್ರಿಕೆಟ್‌ ದಿಗ್ಗಜ ಆಂಡ್ರ್ಯೂ ಸೈಮಂಡ್ಸ್ ಕಾರು ಅಪಘಾತದಲ್ಲಿ ನಿಧನ

- Advertisement -

ಆಸ್ಟ್ರೇಲಿಯಾದ ಕ್ರಿಕೆಟ್ ದಿಗ್ಗಜ ಆಂಡ್ರ್ಯೂ ಸೈಮಂಡ್ಸ್ ಕ್ವೀನ್ಸ್‌ಲ್ಯಾಂಡ್‌ನಲ್ಲಿ ಕಾರು ಅಪಘಾತದಲ್ಲಿ(Andrew Symonds Dies) ಸಾವನ್ನಪ್ಪಿದ್ದಾರೆ ಎಂದು ಆಸ್ಟ್ರೇಲಿಯಾ ಮಾಧ್ಯಮಗಳು ಭಾನುವಾರ ವರದಿ ಮಾಡಿವೆ. ಮೇ 14 ರ ಶನಿವಾರ ರಾತ್ರಿ ಟೌನ್ಸ್‌ವಿಲ್ಲೆಯಿಂದ 50 ಕಿಮೀ ದೂರದಲ್ಲಿರುವ ಹರ್ವೆ ರೇಂಜ್‌ನಲ್ಲಿ ಆಂಡ್ರ್ಯೂ ಸೈಮಂಡ್ಸ್ ಒಂದೇ ವಾಹನದ ಘಟನೆಯಲ್ಲಿ ಭಾಗಿಯಾಗಿದ್ದಾರೆ ಎಂದು ವರದಿಯಾಗಿದೆ. ಆಂಡ್ರ್ಯೂ ಸೈಮಂಡ್ಸ್ ಅವರ ನಿಧನದ ಸುದ್ದಿಯಿಂದ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯು ಆಘಾತಕ್ಕೆ ಒಳಗಾಗಿದೆ.

ಸೈಮಂಡ್ಸ್ (Andrew Symonds) ಆಸ್ಟ್ರೇಲಿಯಾ ಪರ 26 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ ಮತ್ತು ಎರಡು ಶತಕಗಳನ್ನು ಬಾರಿಸಿದ್ದಾರೆ. ಸೈಮಂಡ್ಸ್‌ ಅವರು ಆಸ್ಟ್ರೇಲಿಯಾ ಪರ 198 ಏಕದಿನ ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಅಲ್ಲದೇ ಆಸ್ಟ್ರೇಲಿಯಾ ಪರ ಎರಡು ವಿಶ್ವಕಪ್‌ ಗೆಲುವಿನ ಭಾಗವಾಗಿದ್ದರು. ಏತನ್ಮಧ್ಯೆ, ಕ್ರಿಕೆಟ್ ಆಸ್ಟ್ರೇಲಿಯಾದ ಸಿಇಒ ನಿಕ್ ಹಾಕ್ಲಿ, “ಆಂಡ್ರ್ಯೂ ಆಸ್ಟ್ರೇಲಿಯಾ ಮತ್ತು ಪ್ರಪಂಚದಾದ್ಯಂತ ಹೆಚ್ಚು ಪ್ರೀತಿಸಿದ ಮತ್ತು ಮೆಚ್ಚಿದ ಕ್ರಿಕೆಟಿಗರಾಗಿದ್ದರು. ಅವರು ತಮ್ಮ ಕ್ಲೀನ್ ಬಾಲ್-ಸ್ಟ್ರೈಕಿಂಗ್ ಸಾಮರ್ಥ್ಯ, ಚುರುಕಾದ ಸ್ಪಿನ್ ಬೌಲಿಂಗ್ ಮತ್ತು ಅದ್ಭುತ ಫೀಲ್ಡಿಂಗ್‌ನೊಂದಿಗೆ ಕ್ವೀನ್ಸ್‌ಲ್ಯಾಂಡ್‌ನಲ್ಲಿ ಚಿಕ್ಕ ವಯಸ್ಸಿನಿಂದಲೂ ಅದ್ಭುತ ಪ್ರತಿಭೆಯಾಗಿದ್ದರು. ಅವರನ್ನು ಕಳೆದುಕೊಂಡಿರುವುದು ಹೆಚ್ಚು ಬೇಸರ ಮೂಡಿಸಿದೆ ಎಂದಿದ್ದಾರೆ.

ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಟ್ವಿಟರ್‌ನಲ್ಲಿ ಅವರ ಸಾವನ್ನು ಖಚಿತಪಡಿಸಿದೆ. ಅಲ್ಲದೇ ಕ್ರಿಕೆಟ್ ದಂತಕಥೆಯ ನಷ್ಟಕ್ಕೆ ಸಂತಾಪ ಸೂಚಿಸಿದೆ.

ಕ್ರಿಕೆಟ್ ದಿಗ್ಗಜರನ್ನು ಕಳೆದುಕೊಂಡಿರುವ ವಿಶ್ವದಾದ್ಯಂತ ಕ್ರಿಕೆಟ್ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ಕೂಡ ಟ್ವಿಟರ್‌ನಲ್ಲಿ ಘಟನೆಯ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದಾರೆ.

ಆಂಡ್ರ್ಯೂ ಸೈಮಂಡ್ಸ್ (Andrew Symonds) 1996 ರಲ್ಲಿ ಕ್ವೀನ್ಸ್‌ಲ್ಯಾಂಡ್ ಮತ್ತು ಟ್ಯಾಸ್ಮೆನಿಯಾ ನಡುವಿನ ಪಂದ್ಯದಲ್ಲಿ ತಮ್ಮ ಮೊದಲ ದೇಶೀಯ ಶತಕವನ್ನು ಬಾರಿಸಿದರು. ಇದು ಕ್ವೀನ್ಸ್‌ಲ್ಯಾಂಡ್‌ಗಾಗಿ ಆಡುವ ಅವರ 10 ನೇ ಪಂದ್ಯವಾಗಿತ್ತು. ಆಸ್ಟ್ರೇಲಿಯಾದ ಗಬ್ಬಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಪಂದ್ಯ ನಡೆದಿತ್ತು. ಇಲ್ಲಿ ವೀಕ್ಷಿಸಿ.

ಆಂಡ್ರ್ಯೂ ಸೈಮಂಡ್ಸ್ಒ (Andrew Symonds) ಒಟ್ಟು 26 ಟೆಸ್ಟ್‌ ಪಂದ್ಯಗಳನ್ನು ಆಡಿದ್ದು 1462 ರನ್‌ ಕಲೆ ಹಾಕಿದ್ದಾರೆ. ಇದರಲ್ಲಿ 2 ಶತಕ ಹಾಗೂ 10 ಅರ್ಧ ಶತಕ ಒಳಗೊಂಡಿದೆ. ಇನ್ನು 198 ಏಕದಿನ ಪಂದ್ಯಗಳನ್ನು ಆಡಿರುವ ಸೈಮಂಡ್ಸ್‌ 5088 ರನ್‌ ಬಾರಿಸಿದ್ದಾರೆ. 6 ಶತಕ ಹಾಗೂ 30ಅರ್ಧ ಶತಕ ಬಾರಿಸಿರುವ ಸೈಮಂಡ್ಸ್‌ ಸ್ಪೋಟಕ ಆಟಗಾರ ಎನಿಸಿಕೊಂಡಿದ್ದರು. ಇನ್ನು 14 ಟಿ20 ಪಂದ್ಯಗಳನ್ನು ಆಡಿದ್ದು 337 ರನ್‌ ಬಾರಿಸಿದ್ದಾರೆ. ಇದರಲ್ಲಿ ಎರಡು ಅರ್ಧ ಶತಕ ಒಳಗೊಂಡಿದೆ. ಇನ್ನು ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಸೈಮಂಡ್ಸ್‌ ಭಾಗಿಯಾಗಿದ್ದಾರೆ. 39 ಪಂದ್ಯಗಳನ್ನು ಆಡಿದ್ದು, 974 ರನ್‌ ಸಿಡಿಸಿದ್ದಾರೆ. ಇದರಲ್ಲಿ1 ಶತಕ ಹಾಗೂ 5 ಅರ್ಧ ಶತಕ ಒಳಗೊಂಡಿದೆ. ಆಲ್‌ರೌಂಡರ್‌ ಆಗಿರುವ ಸೈಮಂಡ್ಸ್‌ ಬೌಲಿಂಗ್‌ನಲ್ಲಿಯೂ ಉತ್ತಮ ದಾಖಲೆಯನ್ನು ಬರೆದಿದ್ದಾರೆ. ಒಟ್ಟು 26 ಟೆಸ್ಟ್‌ ಪಂದ್ಯಗಳಲ್ಲಿ 24 ವಿಕೆಟ್‌ ಕಬಳಿಸಿದ್ದಾರೆ. ಇನ್ನು 198 ಏಕದಿನ ಪಂದ್ಯಗಳ ಪೈಕಿ 133 ವಿಕೆಟ್‌, 14 ಟಿ೨೦ ಪಂದ್ಯಗಳಲ್ಲಿ 8 ವಿಕೆಟ್‌ ಹಾಗೂ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ 39 ಪಂದ್ಯಗಳ ಪೈಕಿ 20 ವಿಕೆಟ್‌ ಕಬಳಿಸಿದ್ದಾರೆ.

ಇದನ್ನೂ ಓದಿ : Ambati Rayudu Retirement : ಐಪಿಎಲ್‌ಗೆ ವಿದಾಯ ಹೇಳಿದ ಅಂಬಟಿ ರಾಯುಡು

ಇದನ್ನೂ ಓದಿ : KL Rahul, Rohit Sharma :ಕೆಎಲ್ ರಾಹುಲ್, ರೋಹಿತ್ ಶರ್ಮಾ ವಿಶ್ರಾಂತಿ; ದಕ್ಷಿಣ ಆಫ್ರಿಕಾ ಟಿ20ಗೆ ಟೀಂ ಇಂಡಿಯಕ್ಕೆ ನೂತನ ನಾಯಕ

Australian Cricket Star Andrew Symonds Dies In Car Crash

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular