Azam Khan: ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನದ ದಢೂತಿ ಕ್ರಿಕೆಟಿಗನನ್ನು “ಕೊಬ್ಬಿದ ಆನೆ” ಎಂದ ಕ್ರಿಕೆಟ್ ಪ್ರೇಕ್ಷಕ!

ಡಲ್ಲಾಸ್: ಪಾಕಿಸ್ತಾನ ಕ್ರಿಕೆಟ್ ತಂಡದ ದೈತ್ಯ ದೇಹಿ ಆಟಗಾರ ಅಜಮ್ ಖಾನ್ (Azam Khan) ಅವರನ್ನು ಟಿ20 ವಿಶ್ವಕಪ್ ಟೂರ್ನಿಯ (T20 World Cup 2024) ಪಂದ್ಯದ ವೇಳೆ ಪ್ರೇಕ್ಷಕನೊಬ್ಬ ಕೊಬ್ಬಿದ ಆನೆ ಎಂದು ಹೀಯಾಳಿಸಿದ ಘಟನೆ ನಡೆದಿದೆ.

ಡಲ್ಲಾಸ್: ಪಾಕಿಸ್ತಾನ ಕ್ರಿಕೆಟ್ ತಂಡದ ದೈತ್ಯ ದೇಹಿ ಆಟಗಾರ ಅಜಮ್ ಖಾನ್ (Azam Khan) ಅವರನ್ನು ಟಿ20 ವಿಶ್ವಕಪ್ ಟೂರ್ನಿಯ (T20 World Cup 2024) ಪಂದ್ಯದ ವೇಳೆ ಪ್ರೇಕ್ಷಕನೊಬ್ಬ ಕೊಬ್ಬಿದ ಆನೆ ಎಂದು ಹೀಯಾಳಿಸಿದ ಘಟನೆ ನಡೆದಿದೆ. ಡಲ್ಲಾಸ್’ನಲ್ಲಿ ಗುರುವಾರ ರಾತ್ರಿ ನಡೆದ ಪಾಕಿಸ್ತಾನ ಹಾಗೂ ಆತಿಥೇಯ ಅಮೆರಿಕ ತಂಡಗಳ ನಡುವಿನ ಪಂದ್ಯದ ವೇಳೆ ಈ ಘಟನೆ ನಡೆದಿದೆ.

Azam Khan A cricket spectator called the Pakistan cricketer a fat elephant in the T20 World Cup America vs Pakistan Match
Image Credit to Original Source

ಪಂದ್ಯದಲ್ಲಿ ಆರನೇ ಕ್ರಮಾಂಕದಲ್ಲಿ ಕ್ರೀಸ್’ಗಿಳಿದಿದ್ದ ಅಜಮ್ ಖಾನ್, ಎದುರಿಸಿದ ಮೊದಲ ಎಸೆತದಲ್ಲೇ ಎಡಗೈ ಸ್ಪಿನ್ನರ್ ನೋಶ್’ತುಶ್ ಕೆಂಜಿಗೆ ಬೌಲಿಂಗ್’ನಲ್ಲಿ ಎಲ್ಬಿಡಬ್ಲ್ಯೂ ಬಲೆಗೆ ಬಿದ್ದು ಶೂನ್ಯಕ್ಕೆ ಔಟಾಗಿದ್ದರು. ಔಟಾಗಿ ಪೆವಿಲಿಯನ್’ಗೆ ಮರಳುತ್ತಿದ್ದಾಗ ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಪ್ರೇಕ್ಷಕನೊಬ್ಬ ಅಜಮ್ ಖಾನ್ ಅವರನ್ನು ಕೊಬ್ಬಿದ ಆನೆ ಎಂದು ಕರೆದಿದ್ದಾನೆ. ಇದನ್ನು ಕೇಳಿ ಕೆರಳಿದ ಅಜಮ್ ಖಾನ್, ಆ ಪ್ರೇಕ್ಷಕನನ್ನು ಗುರಾಯಿಸುತ್ತಾ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದ್ದಾರೆ. ಆ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

https://x.com/bittachaha/status/1798762107716153778

25 ವರ್ಷದ ಅಜಮ್ ಖಾನ್ ಪಾಕಿಸ್ತಾನದ ಮಾಜಿ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಮೊಯೀನ್ ಖಾನ್ ಅವರ ಪುತ್ರ. ಅಜಯ್ ಖಾನ್ ಅವರ ದೈತ್ಯ ದೇಹವನ್ನು ಕ್ರಿಕೆಟ್ ಪ್ರೇಕ್ಷಕರು ಹೀಯಾಳಿಸುವ ಘಟನೆಗಳು ಆಗಾಗ ನಡೆಯುತ್ತಲೇ ಇವೆ. ಅಮೆರಿಕ ವಿರುದ್ಧದ ಟಿ20 ವಿಶ್ವಕಪ್ ಪಂದ್ಯದಲ್ಲೂ ಇದು ಮರುಕಳಿಸಿದೆ.

ಇದನ್ನೂ ಓದಿ : Virat Kohli: ಆರಂಭಿಕನಾಗಿ ಮೊದಲ ಪಂದ್ಯದಲ್ಲೇ ಎಡವಿದ ಕಿಂಗ್ ಕೊಹ್ಲಿ!

https://x.com/ShakirAbbasi22/status/1798758493031371198

ಗುರುವಾರ ನಡೆದ ಟಿ20 ವಿಶ್ವಕಪ್ ಟೂರ್ನಿಯ (ICC t20 World Cup 2024) ಪಂದ್ಯದಲ್ಲಿ ಕ್ರಿಕೆಟ್ ಶಿಶು ಅಮೆರಿಕ ಪಾಕಿಸ್ತಾನ ತಂಡಕ್ಕೆ ದೊಡ್ಡ ಆಘಾತ ನೀಡಿತ್ತು. ಡಲ್ಲಾಸ್’ನ ಗ್ರ್ಯಾಂಡ್ ಪ್ರೈರೀ ಕ್ರೀಡಾಂಗಣದಲ್ಲಿ ಗುರುವಾರ ರಾತ್ರಿ ನಡೆದ ಪಂದ್ಯದಲ್ಲಿ ಅಮೆರಿಕ ತಂಡ ಸೂಪರ್ ಓವರ್’ನಲ್ಲಿ ಪಾಕಿಸ್ತಾನ ತಂಡವನ್ನು 5 ರನ್’ಗಳಿಂದ ಮಣಿಸಿ ಟೂರ್ನಿಯಲ್ಲಿ ಸತತ 2ನೇ ಗೆಲುವು ದಾಖಲಿಸಿತು.

Azam Khan A cricket spectator called the Pakistan cricketer a fat elephant in the T20 World Cup America vs Pakistan Match
Image Credit to Original Source

ಸೂಪರ್ ಓವರ್’ನಲ್ಲಿ ಮೊದಲು ಬ್ಯಾಟ್ ಮಾಡಿದ ಅಮೆರಿಕ 1 ಓವರ್’ನಲ್ಲಿ 1 ವಿಕೆಟ್ ನಷ್ಟಕ್ಕೆ 18 ರನ್ ಗಳಿಸಿದರೆ, 6 ಎಸೆತಗಳಲ್ಲಿ 19 ರನ್’ಗಳ ಗುರಿ ಬೆನ್ನಟ್ಟಿದ ಪಾಕಿಸ್ತಾನ 1 ವಿಕೆಟ್ ನಷ್ಟಕ್ಕೆ 13 ರನ್ ಗಳಿಸಿ 5 ರನ್’ಗಳಿಂದ ಅಮೆರಿಕಕ್ಕೆ ಶರಣಾಯಿತು. ಇದಕ್ಕೂ ಮೊದಲು ಪಂದ್ಯ ಟೈ ಆಗಿತ್ತು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತಂಡ ಅಮೆರಕ ಬೌಲರ್’ಗಳ ಶಿಸ್ತುಬದ್ಧ ದಾಳಿಗೆ ತತ್ತರಿಸಿ ನಿಗದಿತ 20 ಓವರ್’ಗಳಲ್ಲಿ 7 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಲಷ್ಟೇ ಶಕ್ತವಾಯಿತು.

ಇದನ್ನೂ ಓದಿ : T20 World Cup Nosthush Kenjige: ಅಮೆರಿಕ ಪರ ಆಡುತ್ತಿರುವ ಚಿಕ್ಕಮಗಳೂರು ಪ್ರತಿಭೆಗೆ ‘ನಂದಿನಿ’ ಸ್ಪಾನ್ಸರ್ !

ನಂತರ ಗುರಿ ಬೆನ್ನಟ್ಟಿದ ಅಮೆರಿಕ 20 ಓವರ್’ಗಳಲ್ಲಿ 4 ವಿಕೆಟ್ ಕಳೆದುಕೊಂಡು 159 ರನ್ ಗಳಿಸುವುದರೊಂದಿಗೆ ಪಂದ್ಯ ಟೈ ಆಯಿತು. ಅಮೆರಿಕ ತಂಡದ ನಾಯಕ, ಗುಜರಾತ್ ಮೂಲದ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಮೊನಾಂಕ್ ಪಟೇಲ್ 38 ಎಸೆತಗಳಲ್ಲಿ ರನ್ ಗಳಿಸಿದರೆ, ಆ್ಯಂಡ್ರೀಸ್ ಗೌಸ್ 26 ಎಸೆತಗಳಲ್ಲಿ 35 ರನ್ ಹಾಗೂ ಆ್ಯರೋನ್ ಜೋನ್ಸ್ 26 ಎಸೆತಗಳಲ್ಲಿ ಅಜೇಯ 36 ರನ್ ಗಳಿಸಿದರು. ಅಮೆರಿಕ ಪರ ಬೌಲಿಂಗ್’ನಲ್ಲಿ ಮಿಂಚಿದ ಚಿಕ್ಕಮಗಳೂರು ಮೂಲದ ಎಡಗೈ ಸ್ಪಿನ್ನರ್ ನೋಶ್’ತುಷ್ ಕೆಂಜಿಗೆ 4 ಓವರ್’ಗಳಲ್ಲಿ 30 ರನ್ನಿತ್ತು 3 ವಿಕೆಟ್ ಪಡೆದರು.

ಇದನ್ನೂ ಓದಿ :  Rohit Sharma 600: ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಯಾರೂ ಮಾಡಲಾಗದ ದಾಖಲೆ ಬರೆದ ಹಿಟ್ ಮ್ಯಾನ್ !

Azam Khan A cricket spectator called the Pakistan cricketer a “fat elephant” in the T20 World Cup America vs Pakistan Match

Comments are closed.